CS Pura Vidyut pregnant cow dies
ಗುಡೇಕೋಟೆ: ಸಮೀಪದ ಚಂದ್ರಶೇಖರಪುರ ಗ್ರಾಮದಲ್ಲಿರುವ ವಿದ್ಯುತ್ ಪರಿವರ್ತಕದ ತಂತಿಯಿಂದ ಶಾಕ್ ಸಂಭವಿಸಿ ಗರ್ಭಿಣಿ ಹಸು ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ.
ಗ್ರಾಮದ ಗುಗ್ಗರಿ ಕೆ. ಶರಣಪ್ಪ ಅವರಿಗೆ ಸೇರಿದ ಹಸು.ಎಂದಿನಂತೆ ಗ್ರಾಮದ ಸಮೀಪ ಮೇಯಿಸಲು ಹೋಗುತ್ತಿದ್ದಾಗ.ಹಸು ಹುಲ್ಲನ್ನು ಮೇಯುತ್ತಾ ಚಿಕ್ಕಜೋಗಿಹಳ್ಳಿ ರಸ್ತೆಯ ಬದಿಯಲ್ಲೇ ಇರುವ ವಿದ್ಯುತ್ ಪರಿವರ್ತಕದ ಹತ್ತಿರ ಹೋಗಿದ್ದಾಗ ವಿದ್ಯುತ್ ಸ್ವರ್ಶಕ್ಕೊಳಗಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನುತ್ತಾರೆ ಸ್ಥಳೀಯರು.
ಪರಿವರ್ತಕದ ಸುತ್ತಲು ಹುಲ್ಲು ಬೆಳೆದಿದೆ. ಇದನ್ನು ಗಮನಿಸಿದರೂ ಅಧಿಕಾರಿಗಳು ಪರಿಶೀಲಿಸಿ ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಇನ್ನು ಮುಂದಾದರೂ ಇಂತಹ ದುರ್ಘಟನೆ ಮತ್ತೆ ಸಂಭವಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗರ್ಭಿಣಿ ಹಸು ಸಾವನ್ನಪ್ಪಿದೆ. ಇಂತಹ ಸ್ಥಿತಿ ಮನುಷ್ಯರಿಗೆ ಬಂದರೆ ಯಾರು ಹೊಣೆ‘ ಎಂದು ಗ್ರಾಮದ ಮೃತ ಹಸುಗಳ ಮಾಲೀಕ ಗುಗ್ಗರಿ ಶರಣಪ್ಪ ಪ್ರಶ್ನಿಸುತ್ತಾರೆ.
ಸಿ ಎಸ್ ಪುರ ಗ್ರಾಮದ ಗೌಡ್ರು ಷಡಕ್ಷರಿ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಶರಣಪ್ಪ ಅವರ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಹಸು ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬ ಆಘಾತಗೊಂಡಿದೆ.ಹಸು ಕಳೆದುಕೊಂಡಿರುವ ಗುಗ್ಗರಿ ಶರಣಪ್ಪ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳಕ್ಕೆ ಆಗಮಿಸಿದ ಕೂಡ್ಲಿಗಿ ಪಶು ವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ರವರಿಗೆ ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಜೆಸ್ಕಾಂ ಇಲಾಖೆ ಸುರಕ್ಷತೆಯ ಚಿತ್ತಾ ಹರಿಸಿ ವಿದ್ಯುತ್ ಅಪಘಾತ ತಪ್ಪಿಸಬೇಕೇಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.