Patreshwar Jatre of Yarehanchina on the last Monday of Shravan.
ಮಂಗಳವಾರ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ,,
ಕೊಪ್ಪಳ : ಕುಕನೂರ ತಾಲೂಕಿನ ಯರೇಹಂಚಿನಾಳ ಗ್ರಾಮದ ಪತ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರಾವಣದ ಕೊನೆಯ ಸೋಮವಾರದಂದು ಬೆಳಗ್ಗೆ 7ಗಂಟೆಗೆ 101ಕುಂಭ ಮೇಳ ವಿವಿಧ ಧಾರ್ಮಿಕ ಕಾರ್ಯಕ್ರಮ ಸಾಯಂಕಾಲ 5 ಗಂಟೆಗೆ ವಿಜೃಂಭಣೆಯಿಂದ ರಥೋತ್ಸವ ಕಾರ್ಯಕ್ರಮ ಜರುಗುವುದು ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು.
ಪ್ರತಿ ವರ್ಷದಂತೆ ಶ್ರಾವಣ ಮಾಸದಲ್ಲಿ ಜರುಗುವ ಈ ಜಾತ್ರಾ ಮಹೋತ್ಸವವು ನಾಡಿನ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ರಥೋತ್ಸವ ಕಾರ್ಯಕ್ರಮವು ಚಾಲನೆಗೊಳ್ಳಲಿದ್ಧು ಆಶಿರ್ವಚನವು ಜರುಗಲಿವೆ.
ಈ ಪತ್ರೇಶ್ವರ ದೇವಸ್ಥಾನವು ನಾಡಿನ ರಥೋತ್ಸವಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಇಲ್ಲಿ ಸುಮಾರು ನೂರಾರು ಬಿಲ್ವಪತ್ರಿ ಮರಗಳಿದ್ದು ಅವುಗಳಲ್ಲಿ ಐದು ದಳಗಳ, ಮೂರು ದಳಗಳ ಬಿಲ್ವಪತ್ರಿಗಳನ್ನು ಹೊಂದಿವೆ. ಈ ಬಿಲ್ವ ಪತ್ರಿ ಸಸಿಗಳನ್ನು ತೆಗೆದುಕೊಂಡು ಬೇರೆ ಸ್ಥಳಗಳಲ್ಲಿ ಹಾಕಿದರೂ ಬೆಳೆಯುವುದಿಲ್ಲಾ ಈ ನೆಲವು ಶಿವನೇ ನೆಲೆಗೊಳಿಸಿದ ಸ್ಥಾನವಾಗಿದ್ದು ಪ್ರತಿ ನಿತ್ಯ ಇಲ್ಲಿನ ಶಿವನ ಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದ ಇದು ಪತ್ರಿವನವೆಂದೇ ಪ್ರಖ್ಯಾತಿ ಪಡೆದಿದೆ.
ಈ ಶ್ರಾವಣ ಮಾಸದ ಕೊನೆಯ ಸೋಮವಾರದಂದು ಜರುಗುವ ರಥೋತ್ಸವಕ್ಕೆ ಮೂರು ದಿನಗಳು ಮುನ್ನ ಗ್ರಾಮದ ಯುವಕರು ವಿಷೇಶವಾಗಿ ಕಬ್ಬಡ್ಡಿ, ರಂಗೋಲಿ ಸ್ಪರ್ಧೆಗಳನ್ನು, ಕ್ರಿಕೇಟ್ ಪಂದ್ಯಾವಳಿ, ಖೋ ಖೋ ಸೇರಿದಂತೆ ಹಲವಾರು ಕ್ರೀಡೆಗಳನ್ನು ಆಯೋಜನೆ ಮಾಡಿರುತ್ತಾರೆ.
ನಂತರ ಸೆ.3ರ ಮಂಗಳವಾರದಂದು ಬೆಳಗ್ಗೆ ವಿಷೇಶ ಪೂಜಾ ಕಾರ್ಯಕ್ರಮಗಳು ನಂತರ ಹೂವಿನ ಹಡಗಲಿಯ ಮರಿಶಾಂತವೀರ ಮಹಾಸ್ವಾಮಿಗಳ ಅಡ್ಡಪಲ್ಲಕ್ಕಿ ಮಹೋತ್ಸವಗಳು ಜರುಗುವವು ಈ ಎರಡು ದಿನದ ಕಾರ್ಯಕ್ರಮಗಳಿಗೆ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾಧಿಗಳು ಆಗಮಿಸುವರು. ಭಕ್ತಾಧಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮಗಳು ಜರುಗುವವು ಎಂದು ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.