Gangavathi: Rahul Gandhi’s birthday celebrated in a meaningful way

ಗಂಗಾವತಿ: ನಾಯಕ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿಯಾದ ಎಂ ಡಿ ಆಸೀಫ್ ಹುಸೇನ್ ನೃತೃತ್ವದಲ್ಲಿ ಗಂಗಾವತಿಯ ಮೊಹಮ್ಮದಿಯ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಎಂಡಿ ಆಸಿಫ್ ಹುಸೇನ್ ಮಾತನಾಡಿ ರಾಹುಲ್ ಗಾಂಧಿಯವರು ಮಾಡಿದ ಭಾರತ ಜೋಡೊ ಯಾತ್ರೆ, ಭಾರತ ನ್ಯಾಯ ಯಾತ್ರೆ ಯಶಸ್ವಿಯಾಗಿದ್ದು, ಸಾಕಷ್ಟು ಜನರಲ್ಲಿ ಜಾಗೃತಿ ಮೂಡಿ ಐಕ್ಯತೆ ಸೃಷ್ಟಿಯಾಗಿದೆ, ಅವರ ಜನಪರ ಕಾಳಜಿಯಿಂದಾಗಿ ಮುಂದಿನ ಚುನಾವಣೆಯಲ್ಲಿ ಭಾರತದ ಪ್ರಧಾನ ಮಂತ್ರಿ ಆಗೋವುದರಲ್ಲಿ ಸಂಶಯವಿಲ್ಲ ಎಂದರು.
ಗಂಗಾವತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಾಮೀದ್‌ಸಾಬ್ ಮನಿಯಾರ್ ಮಾತನಾಡಿ, ಯುವ ನಾಯಕ ರಾಹುಲ್ ಜಿ ಅವರು ಒಂದು ಸಶಕ್ತ ಭಾರತವನ್ನು ಕಟ್ಟುವ ಕನಸನ್ನು ಹೊಂದಿದ್ದಾರೆ ಅವರು ಪ್ರಧಾನ ಮಂತ್ರಿಯಾಗಿ ಭಾರತವನ್ನು ಮುನ್ನಡೆಸುವ ದಿನವನ್ನು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಆಶಾ ಭಾವನೆಯಿಂದ ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಕೆ ರಮೇಶ್, ಜಿಲ್ಲಾ ಮಾಜಿ ಉಪಾಧ್ಯಕ್ಷ ಅಜ್ಗರ್ ಅಲಿ ಇದ್ಲಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗೇಶ್ ಕಲ್ಗುಡಿ, ಕಾಂಗ್ರೆಸ್ ಮುಖಂಡ ಮಲ್ಲೇಶ್ ದೇವರಮನಿ, ಕೊಪ್ಪಳ ಜಿಲ್ಲಾ ಸಾಮಾಜಿಕ ಜಾಲತಾಣದ ಕಾರ್ಯಾಧ್ಯಕ್ಷ ಮಹೆಬೂಬ್, ಪ್ರಧಾನ ಕಾರ್ಯದರ್ಶಿ ಸಾಹಿಲ್ ಖಲಂದರ್, ಬ್ಲಾಕ್ ಕಾಂಗ್ರೆಸ್ ಪ್ರ.ಕಾ ಅಜಮ್ ಹಾಗೂ ಶಾಲೆಯ ಪದಾಧಿಕಾರಿಗಳಾದ ಅಯ್ಯುಬ್ ಖಾನ್ ಇನ್ನಿತರರು ಇದ್ದರು.