Breaking News

ಸಿ.ಸಿ.ಬಿ.ದಾಳಿ:ಎಕ್ಸಪೈರಿ ಔಷಧಗಳು ಪತ್ತೆ ,ಔಷಧನಿಯಂತ್ರಣ ಇಲಾಖೆಯಿಂದ ಔಷಧಗಳ ವಶ.

C.C.B. Raid: Expiry drugs detected, drugs seized by Drug Control Department.

ಜಾಹೀರಾತು

ಬೆಂಗಳೂರು:ಅಧಿಕೃತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಗಳೂರು ಸಿ.ಸಿ.ಬಿ.ಬ್ರ್ಯಾಂಚ್ ನ ಪೋಲೀಸ್ ಅಧಿಕಾರಿಗಳು, ಹೋಲ್ ಸೇಲ್‌ ಔಷಧ ಮಾರಾಟ ಪರವಾನಿಗೆ ಪಡೆದ ಮಳಿಗೆಯೊಂದರ ಮೇಲೆ ದಾಳಿ ಮಾಡಿ ಎಕ್ಸಪೈರಿ ಮತ್ತು ಎಕ್ಸಪೈರಿ ದಿನಾಂಕದ ಮೇಲೆ ಅಂಟಿಸುವ ಲೇಬಲ್ ಗಳನ್ನು ಪತ್ತೆ ಹಚ್ಚಿದ್ದಾರೆ.ತಂದೆ ಮತ್ತು ಮಗನನ್ನು ಅರೆಸ್ಟ ಮಾಡಿರುವ ಪೋಲಿಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇತ್ತ ಈ ದಾಳಿಯ ಬಗ್ಗೆ ಸಿ.ಸಿ.ಬಿ.ಪೋಲಿಸರಿಂದ ಮಾಹಿತಿ ಪಡೆದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಾದ ಎ.ಡಿ.ಸಿ.ಚಂದ್ರಕಲಾ ಶಿಲ್ಪಾ ಮತ್ತು ಎಸ್.ಐ.ಬಿ.ತಂಡದ ಡ್ರಗ್ಸ ಇನ್ಸಪೆಕ್ಷರ್ ಗಳಾದ ಸವಿತಾ ಮತ್ತು ಪ್ರಸನ್ನ ಕುಮಾರ್ ಔಷಧಗಳನ್ನು ತಮ್ಮ ವಶಕ್ಕೆ ಪಡೆದು,ನ್ಯಾಯಾಲಯದ ಪರವಾನಿಗೆ ಪಡೆದು ಸದ್ರಿ ಔಷಧಗಳನ್ನು ಇಲಾಖೆಯ ವಶದಲ್ಲಿರಿಸಿಕೊಂಡಿದ್ದಾರೆ.

ರಾಜ್ಯ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ ಔಷಧ ಮತ್ತು ಕಾಂತಿ ವರ್ಧಕ ಕಾಯ್ದೆ ಹಾಗೂ ನಿಯಮಗಳ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಪೋಲೀಸರಿಂದ ಮಾಹಿತಿ ಸಿಕ್ಕ ಕೂಡಲೇ ಧಾವಿಸಿ,
ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು
ಸೂಕ್ತ ಕ್ರಮ ಕೈಗೊಂಡಿದ್ದಾರೆ.ಪೋಲೀಸರಿಂದ ದೂರು ಬಂದ ಕೂಡಲೇ ಕಾರ್ಯ ಪ್ರವೃತ್ತರಾದಂತೆ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರಿಂದ ದೂರು ಬಂದಾಗಲೂ ಇದೇ ಸ್ಪೀಡ್ ನಲ್ಲಿ ಧಾವಿಸಿ,ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ತುಂಬಾ ಇದೆ.

ಅವರಿವರು ಪತ್ತೆ ಹಚ್ಚಿದ ಪ್ರಕರಣಗಳ ಹಿಂದೆ ಹೋಗುವುದಕ್ಕಿಂತ, ಸ್ವಯಂ ಪ್ರೇರಿತರಾಗಿ ಇಂತಹ ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿ ಔಷಧ ನಿಯಂತ್ರಣ ಇಲಾಖೆಯಲ್ಲಿ ಹೆಚ್ಚಾಗಲಿ ಎಂದಷ್ಟೇ ಇಲ್ಲಿ ಬಯಸಬೇಕಾಗುತ್ತದೆ.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.