Clean environment is very important for health: K Kotresh

ಹಸಿರು ಹೊನಲು ತಂಡದಿಂದ ಹಸಿರು ಹಬ್ಬ ಆಚರಣೆ
ಕೊಟ್ಟೂರು : ಕೊಟ್ಟೂರಿನಲ್ಲಿ ಹಸಿರು ಹೊನಲು ತಂಡದವರು ಜೂನ್ 5 ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ ತಿಂಗಳು ಹಸಿರು ಹಬ್ಬ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ
ವಿವಿಧ ಸಂಘ-ಸಂಸ್ಥೆಗಳು, ಸಂಘಟನೆ, ಪತ್ರಿಕಾ ಮಾಧ್ಯಮದವರನ್ನು ಪ್ರತಿ ದಿನ ಆಹ್ವಾನಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ
ಕರ್ನಾಟಕ ಪ್ರಸ್ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಆಹ್ವಾನಿಸಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಅರಿವು ಕಾರ್ಯಕ್ರಮವನ್ನು ಮಾಡಲಾಯಿತು.
ಡಾಕ್ಟರ್ ಸತೀಶ್ ಪಾಟೀಲ್ ಅವರು ಮಾತನಾಡಿ ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ. ಆದರೆ ಕಾಡು ಪರಿಸರ ರಕ್ಷಣೆ ಕೇವಲ ಈ ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಾವು ಮಾಡುವ ಪ್ರತಿ ಕೆಲಸದಲ್ಲೂ ಪರಿಸರವನ್ನ ಗಮನದಲ್ಲಿಟ್ಟುಕೊಳ್ಳಬೇಕು
ಪರಿಸರವನ್ನು ಹಸಿರೀಕರಣವನ್ನಾಗಿ ಮಾಡಲು ಮತ್ತು ಕೊಟ್ಟೂರನ್ನು ಹಸಿರು ಕ್ರಾಂತಿ ಗುರಿಯಾಗಿಸಿದೆ
ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು
ನಮ್ಮ ದುರಾಸೆ ಬಿಟ್ಟು, ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಕೈ ಜೋಡಿಸಬೇಕು. ಇಲ್ಲಿ ಪರಿಸರ ಸಂರಕ್ಷಣೆಯ ಕುರಿತ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಬೇಕು ಎಂದರು
ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಉಪಾಧ್ಯಕ್ಷ ಕೆ ಕೊಟ್ರೇಶ್ ಮಾತನಾಡಿ ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ, ಪರಿಸರ ಸಂರಕ್ಷಣೆಯು ಎಲ್ಲರ ಕರ್ತವ್ಯ ನಮ್ಮ ಕೊಟ್ಟೂರು ಬಯಲು ಸೀಮೆ ಅಲ್ಲ ಸ್ವಚ್ಛ ಪರಿಸರ ಹಸಿರಿನಿಂದ ಮೈಗೂಡಿದೆ ಇದಕ್ಕೆ ಕಾರಣ ಹಸಿರು ಹೊನಲು ಸಂಸ್ಥೆಯೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಹಸಿರು ಹೊನಲು ಸಂಸ್ಥೆ ತಾಲೂಕು ಅಧ್ಯಕ್ಷ ಗುರುರಾಜ್, ಡಾಕ್ಟರ್ ಸತೀಶ್ ಪಾಟೀಲ್,ಬಿ ಆರ್ ವಿಕ್ರಂ, ಬಸವರಾಜ್,ಉದಯ , ಚೇತನ್ ಜೈನ,ಅಜಯ್, ದೇವರ ಮನಿ ಸಿದ್ದೇಶ್, ನಾಗರಾಜ್, ಪ್ರಕಾಶ್ ಮಂಡಕ್ಕಿ, ಹಸಿರು ಹೊನಲು ತಂಡದ ಸದಸ್ಯರು, ಹಾಗೂ ರಾಕೀ , ಅರುಣ್,ಕರ್ನಾಟಕ ಪ್ರಸ್ ಕ್ಲಬ್ ಪತ್ರಕರ್ತರಾದ ಡಿ ಸಿದ್ದಪ್ಪ, ಪರುಶುರಾಮ ಎಸ್, ರೇವತ್, ಇತರರು ಉಪಸ್ಥಿತರಿದ್ದರು