ರಾಯಚೂರು ನಗರದಲ್ಲಿ  ವಿಶ್ವ ಸೈಕಲ್ ದಿನಾಚರಣೆ.

H.Mallikarjun
H.Mallikarjun - Kalyanasiri
2 Min Read
ಜಾಹೀರಾತು
World Bicycle Day celebration in Raichur city.




ರಾಯಚೂರು ನಗರದಲ್ಲಿ  ವಿಶ್ವ ಸೈಕಲ್ ದಿನಾಚರಣೆ

ಜಾಹೀರಾತು

ರಾಯಚೂರು:ಈ ವಿಶ್ವ ಬೈಸಿಕಲ್ ದಿನಾಚರಣೆಯ ಕಾರ್ಯಕ್ರಮವನ್ನು ರಾಯಚೂರ ಸೈಕಲ್ ಅಸೋಸಿಯೇಷನ್ ಸಮಿತಿ ವತಿಯಿಂದ ಬೆಳಗ್ಗೆ 7:00ಗೆ ಆ ಯೋಜನೆ ಮಾಡಲಾಗಿತ್ತು . ಈ ಸೈಕಲ್ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾಕ್ಟರ್ ಬಸವರಾಜ್ ಎಂ ಪಾಟೀಲ್ ಮಾತನಾಡುತ್ತಾ ಇಂದು ನಮ್ಮ ರಾಯಚೂರ ನಗರದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ .

ಇಂದು ನಾವು ಸೈಕಲ್ ಮ್ಯಾರಥಾನ್ ಕೃಷಿ ವಿಶ್ವವಿದ್ಯಾಲಯದ ಬಸವ ನರ್ಸಿಂಗ್ ಆಸ್ಪತ್ರೆಯಿಂದ ಪ್ರಾರಂಭವಾಗಿ ಬಸಬೀಶ್ವರ ವೃತ್ತದ ಮೂಲಕ ಗಾಂಧಿ ವೃತ್ತ ತೀನ ಕಂದಿಲ್ ಆಲ್ ಇಂಡಿಯಾ ರೇಡಿಯೋ .ಡಾ.ಬಾಬು ಜಗಜೀವನ ರಾಮ್ ವೃತ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಮೂಲಕ ಬಸ್ವೇಶ್ವರ ವೃತ್ತವನ್ನು ಸೇರಿ ಸೈಕಲ್ ಜಾತ ಕಾರ್ಯಕ್ರಮವನ್ನು ಮಾಡಲಾಯಿತು .ನಾವು ನಮ್ಮೆಲ್ಲ ಸ್ನೇಹಿತರ ನಮ್ಮ ಸಂಸ್ಥೆಯ ಪದಾಧಿಕಾರಿಗಳ ಸಂಗಡ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಸೈಕಲ್.ಬಳಸುವುದರಿಂದ ಅಥವಾ ಬೆಳಗಿನ ಜಾವ ಇದನ್ನು ತೆಗೆದುಕೊಂಡು ಹೋಗಿ ಅಭ್ಯಾಸ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗುತ್ತೇವೆ ನಮ್ಮ ಸಂಸ್ಥೆಯ ಪದಾಧಿಕಾರಿಗಳು ನೂರಾರು ಕಿಲೋಮೀಟರು ಸೈಕಲ್ ಹೊಡಿವ ಅಭ್ಯಾಸವನ್ನು ರೂಡಿಸಿಕೊಂಡಿದ್ದಾರೆ ಇದು ಉತ್ತಮ ಆರೋಗ್ಯಕ್ಕೆ ಸಹಾಯಕಾರಿಯಾಗುತ್ತದೆ ದಿನನಿತ್ಯ ಬೆಳಗಿನ ಜಾವದಲ್ಲಿ ನಾನು ನನ್ನ ಸ್ನೇಹಿತರು ದಿನಾಲು ಹತ್ತಿಪ್ಪತ್ತು ಕಿಲೋಮೀಟರು ಸೈಕಲ್ ಮೂಲಕ ದೈಹಿಕ ವ್ಯಾಯಾಮನ ಮಾಡುತ್ತೇವೆ ಇಂದು ನಮ್ಮ ಕರಿಯ ಮೇರಿಗೆ ಬಂದ ಎಲ್ಲ ನಮ್ಮ ಸ್ನೇಹಿತರಿಗೆ ವಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಿಕ್ಷಣ ವಿಭಾಗದ ವಿಭಾಗದ ಜಿಲ್ಲಾ ಸಂಚಾಲಕರಾದ ಡಾ. 2018ರಿಂದ ವಿಶ್ವಸಂಸ್ಥೆಯು ಪ್ರತಿವರ್ಷ ಜೂನ್ ಮೂರರಂದು ವಿಶ್ವ ಬೈಸಿಕಲ್ ದಿನಾಚರಣೆ ಎಂದು ಆಚರಣೆ ಮಾಡಲಾಗುತ್ತದೆ .ಸೈಕಲ್ ಪರಿಸರಸ್ನೇಹಿ ಸಾರಿಗೆ ಸಾಧನವಾಗಿದೆ .ಇದನ್ನು ಬಳಕೆ ಮಾಡುವುದರ ಮೂಲಕ ವ್ಯಕ್ತಿ ದೈಹಿಕವಾಗಿ ಗಟ್ಟಿಯಾಗುತಾನೆ. ಉತ್ತಮ ಪರಿಸರ ನಿರ್ಮಾಣ ಮಾಡ್ಲಿಕ್ಕೆ ಸಹಕಾರಿಯಾಗುತ್ತದೆ .ಆರ್ಥಿಕ ಉಳಿತಾಯಕ್ಕೆ ಮತ್ತು ತೂಕಲ್ಲಿಸಲು ಇದು ತುಂಬಾ ಸಹಾಯಕಾರಿಯಾಗಿದೆ. ಸೈಕಲ್ ಕೆಲವರು ವ್ಯಾಯಾಮಕ್ಕಾಗಿ ಕೆಲವರು ವ್ಯಾಪಾರಕ್ಕಾಗಿ .ಕೆಲವರು ಶಾಲಾ-ಕಾಲೇಜಿಗೆ ಹೋಗಲು. ಕೆಲವರು ತಮ್ಮ ದಿನ ನಿತ್ಯ ಜೀವನದ ಆರಂಭವನ್ನು ಸೈಕಲ್ ಮೂಲಕ ಮಾಡುತ್ತಾರೆ. ಸೈಕಲ್ ಬಡವರ ಪ್ಲೇನ್ ಎಂದರೆ ತಪ್ಪಾಗಲಾರದು ಎಂದು .

ಡಾ. ಬಿರಾದಾರ ಹೇಳಿದರು. ಈ ಸಂದರ್ಭದಲ್ಲಿ. ಡಾ ಜಯಪ್ರಕಾಶ್ ಬೆಟ್ಟದೂರು .ಡಾ. ಸಕಲೇಶ ಬೆಟ್ಟದೂರು. ಡಾ. ಸುನೀಲ. ಡಾ. ಶರಣಗೌಡ .ಸಂದೀಪ್ ಕಲ್ಲೂರ್. ಸೋಮನಾಥ ರೆಡ್ಡಿ .ಚನ್ನಬಸವ ಕಾರ್ತಿಕ್ .ವಿಜಯ್ .ಸುರೇಶ್. ವೀರೇಂದ್ರ ರಾಮಪುರ ..ಗುರು ಚಿತ್ರ ವೀರೇಶ ಎನ ಸೇರಿದಂತೆ ರಾಯಚೂರ ಸೈಕಲ್ ಅಸೋಸಿಯೇಷನ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Total Views: 0
Share This Article