International Symposium on “Impact of Artificial Intelligence on Academic Libraries” in Bangalore on Saturday
ಬೆಂಗಳೂರು, ಆ, 30; ಭಾರತೀಯ ಗ್ರಾಂಥಾಲಯಗಳ ಸಂಘ ಹಾಗೂ ಶ್ರೀಲಂಕಾ ಗ್ರಂಥಾಲಯಗಳ ಸಂಘದ ಸಹಯೋಗದಲ್ಲಿ “ಶೈಕ್ಷಣಿಕ ಗ್ರಂಥಾಲಯದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ” ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಶನಿವಾರ ಶೆಷಾದ್ರಿಪುರಂ ಕಾಲೇಜಿನಲ್ಲಿ ನಡೆಯಲಿದೆ.
ಶೇಷಾದ್ರಿಪುರಂ ಸಂಜೆ ಕಾಲೇಜು ಸಭಾಂಗಣದದಲ್ಲಿ ಬೆಳಿಗ್ಗೆ 10 ಗಂಟೆಗೆ ತಜ್ಞರು ಕೃತಕ ಬುದ್ದಿಮತ್ತೆಯಿಂದ ಶೈಕ್ಷಣಿಕ ಗ್ರಂಥಾಲಯದ ಮೇಲೆ ಆಗುತ್ತಿರುವ ಗಂಭೀರ ಪರಿಣಾಮಗಳ ಕುರಿತಂತೆ ಬೆಳಕು ಚೆಲ್ಲಲಿದ್ದಾರೆ.
ಈ ವಿಚಾರ ಸಂಕಿರಣದಲ್ಲಿ ಶ್ರೀಲಂಕಾದ ಕೊಲಂಬೋ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ವಿಭಾಗದ ಮುಖ್ಯಸ್ಥರಾದ ಡಾ. ರುವಾನಾ ಸಿ.ಜಿ ಗಮಗೆ ಹಾಗೂ ಭಾರತ ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿಷಯ ತಜ್ಞರು ಭಾಗವಹಿಸುತ್ತಿದ್ದಾರೆ.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ ಕೃಷ್ಣ, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿ ಡಬ್ಲ್ಯೂ ಡಿ ಅಶೋಕ್. ದ್ರಾವಿಡ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ದೊರೆಸ್ವಾಮಿ, ರಾಜ್ಯದ ವಿವಿಗಳ ಗ್ರಂಥಾಲಯ ಮುಖ್ಯಸ್ಥರು ಹಾಗೂ ಆಧ್ಯಾಪಕರುಗಳು ಭಾಗವಹಿಸಲಿದ್ದಾರೆ.