Breaking News

ಪತ್ರಕರ್ತ ವಿನೋದ್ ಗೆ ಪತ್ರಕರ್ತರ ಸಂಘದ ಕಛೇರಿಯಲ್ಲಿಶ್ರಧ್ದಾಂಜಲಿ ಸಲ್ಲಿಸಲಾಯಿತು

Tributes were paid to journalist Vinod at the Journalist Association office


ವರದಿ ಬಂಗಾರಪ್ಪ ಸಿ ಹನೂರು .
ಹನೂರು :ಪತ್ರಕರ್ತನಾದವನಿಗೆ ಕ್ರಿಯಾಶೀಲತೆ ಮತ್ತು ಧೈರ್ಯ ಮುಖ್ಯ ಅಂತಹ ಗುಣ ಯುವ ಪತ್ರಕರ್ತರಾದ ವಿನೋದ್ ರವರಲ್ಲಿ ಇತ್ತು ಅಲ್ಲದೆ ಅವರ ಸಾವು ನಮಗೆ ಅತೀವ ನೋವು ತಂದಿದೆ ಎಂದು ಹಿರಿಯ ವಕೀಲರಾದ ಎಸ್ ನಾಗರಾಜು ತಿಳಿಸಿದರು .
ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ಇತ್ತೀಚಿನ ದಿನದಲ್ಲಿ ಅಪಘಾತದಲ್ಲಿ ಮೃತರಾದ ವಿನೋದ್ ರವರ ಶ್ರಧ್ದಾಂಜಲಿ ಸಲ್ಲಿಸಿ ಮಾತನಾಡಿದ ವಕೀಲರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ,ಇವರು ನಮ್ಮ ಭಾಗದ ಹಲವಾರು ವಿಷಯಗಳಲ್ಲಿ ಸೂಕ್ಷ್ಮ ತೆಯನ್ನು ಅರಿತು ವರದಿ ಮಾಡುತ್ತಿದ್ದರು ಅವರ ಅಗಲಿಕೆ ನಮಗೆ ತೀವ್ರ ನೋವು ತಂದಿದೆ ಆ ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು .
ಇದೇ ಸಮಯದಲ್ಲಿ ಪಟ್ಟಣದ ವೆಂಕಟೇಗೌಡರು ಮಾತನಾಡಿ ನಮ್ಮ ಭಾಗದ ಯುವ ಪತ್ರಕರ್ತನನ್ನು ಕಳೆದುಕೊಂಡಿದ್ದು ನಮಗೆ ಅತೀವ ನೋವುಂಟು ಮಾಡಿದೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಅಂತಹ ಕೆಲಸ ಅವರು ಮಾಡುತ್ತಿದ್ದರು.ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷರಾದ ಚಂಗಡಿ ಕರಿಯಪ್ಪ ಮಾತನಾಡಿ ವಿನೋದ್ ಒಬ್ಬ ಪತ್ರಕರ್ತ ಮಾತ್ತವಲ್ಲದೆ ಹಿತೈಷಿಯಾಗಿದ್ದರು ಅವರ ವರದಿಗಾರಿಕೆಯು ನಮಗೆ ಮುಂದಿನ ಹೋರಾಟಗಳಿಗೆ ಸ್ಪೂರ್ತಿ ಯಾಗಿತ್ತು ಅವರ ನಿಧನದಿಂದ ನಮ್ಮ ರೈತ ಸಮುದಾಯಕ್ಕೆ ತುಂಬಲಾರದ ನಷ್ಟ ವಾಗಿದೆ ಎನ್ನ ಬಹುದು ಎಂದರು .
ಕರ್ನಾಟಕ ಪತ್ರಕರ್ತರ ಸಂಘದ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ವಿನೋದ್ ರವರ ಸಾವು ನಮಗೆ ನುಂಗಲಾರದ ತುತ್ತಾಗಿದೆ ಅವರ ಪ್ರತಿಯೊಂದು ವರದಿಯು ನಮಗೆ ಮಾದರಿಯಾಗಿತ್ತು ,ಪ್ರತಿಯೊಂದು ಅಧಿಕಾರಿ ವರ್ಗ,ಸಂಘ ಸಂಸ್ಥೆಗಳ ಜೊತೆಯಲ್ಲಿ ಉತ್ತಮ ಒಡನಾಟ ಹೊಂದಿದ್ದರು ಭಗವಂತ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು .
ಇದೇ ಸಮಯದಲ್ಲಿ ಹಿರಿಯ ಪತ್ರಕರ್ತ ಪುಟ್ಟಸ್ವಾಮಿ, ರೈತ ಸಂಘದ ಅಧ್ಯಕ್ಷರಾದ ಅಮ್ಜಾದ್ ಖಾನ್ .ಪಟ್ಟಣ ಪಂಚಾಯತಿ ಸದಸ್ಯರುಗಳಾದ ಮಹೇಶ್ ನಾಯ್ಕ.ಸಂಪತ್ತು ಕುಮಾರ್ . ಪೋಲಿಸ್ ಅಧಿಕಾರಿಗಳಾದ ಪಿ ಎಸ್ ಐ ಅಶ್ವಥ್. ಹಾಗೂ ರಾಘವೆಂದ್ರ. ಮುಖಂಡರುಗಳಾದ ನಟರಾಜೆಗೌಡರು, ಮಂಜೇಶ್ ,ದಾಸೆಗೌಡ.ಇಮ್ರಾನ್ ಖಾನ್ .ಹಾಗೂ ಪತ್ರಕರ್ತರು ಸೇರಿದಂತೆ ಇತರರು ಹಾಜರಿದ್ದರು . ಮೃತ ವಿನೋದರಿಗೆ ಹನೂರು ಪಟ್ಟಣದ ಕ್ರಿಸ್ಥರಾಜ ಸಂಸ್ಥೆಯ ಪಾದರ್ ರೋಶನ್ ಬಾಬು ಸಂತಾಪ ಸೂಚಿಸಿದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.