Breaking News

ಹಿಂದುಳಿದ ಸಮುದಾಯ ಸಂಘಟನೆಗೆ ಪ್ರತಿಯೊಬ್ಬರು ಶ್ರಮಿಸಬೇಕು

Everyone should strive for backward community organization

ಜಾಹೀರಾತು

ಗಂಗಾವತಿ: ಹಿಂದುಳಿದ ಸಮುದಾಯಗಳ ಸಂಘಟನೆ ಮತ್ತು ಸಮುದಾಯದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹ ಒಗ್ಗಟ್ಟಿನಿಂದ ಶ್ರಮವಹಿಸಿಬೇಕು. ಅಂದಾಗ ಮಾತ್ರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಹೆಚ್.ಆರ್. ಶ್ರೀನಾಥ ಹೇಳಿದರು.
ನಗರದ ಕನಕಗಿರಿ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಎದುರುಗಡೆ ಹಾಲುಮತ ಕುರುಬ ಸಮಾಜದ ವತಿಯಿಂದ ಗುರುವಾರ ಹಮ್ಮಿಕೊಂಡ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಾಲುಮತ ಸಮಾಜದವರು ಸಾಕಷ್ಟು ವಿಶಾಲವಾದ ಹೃದಯವನ್ನು ಹೊಂದಿದ್ದಾರೆ. ಅವರು ಇತರ ಎಲ್ಲಾ ಸಮಾಜದವರೊಂದಿಗೆ ಅನ್ಯೂನ್ಯತೆಯಿಂದ ಬದುಕು ಸಾಗಿಸುತ್ತಿದ್ದು, ಸಮಾಜದ ಏಳಿಗೆಗೆ ಶ್ರಮ ವಹಿಸುತ್ತಿದ್ದಾರೆ. ಸಮಾಜವು ಬದಲಾವಣೆಯನ್ನು ಕಂಡುಕೊಳ್ಳಬೇಕಾದರೆ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು. ಶಿಕ್ಷಣದಿಂದ ಮಾತ್ರ ಬದಲಾವಣೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಕೊಡುಗೆ ಹಾಲುಮತ ಸಮಾಜದ ಮೇಲಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೂಡ ರಾಜ್ಯದ ಜನರಿಗೆ ಉತ್ತಮ ಯೋಜನೆಗಳ ಮೂಲಕ ಬಡವರ ಬದುಕಿಗೆ ಆಧಾರವಾಗಿದ್ದಾರೆ. ನಮ್ಮ ತಂದೆ ಐದು ಬಾರಿ ಸಂಸದರಾಗಲು ಎಲ್ಲಾ ಹಿಂದುಳಿದ ವರ್ಗಗಳ ಬೆಂಬಲದ ಜೊತೆಗೆ ಹಾಲುಮತ ಕುರುಬ ಸಮಾಜದವರ ಬೆಂಬಲ ಬಹಳಷ್ಟಿತ್ತು. ಸದ್ಯ ಗಂಗಾವತಿಯಲ್ಲಿ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣ ಮಾಡಲು ಅಡಿಗಲ್ಲು ಪೂಜೆ ಮಾಡಲಾಗಿದ್ದು, ಇದೊಂದು ಒಳ್ಳೆಯ ಕೆಲಸವಾಗಿದೆ. ಆದಷ್ಟು ಬೇಗನೆ ದೇವಸ್ಥಾನ ನಿರ್ಮಾಣಗೊಂಡು ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿ ಎಂದು ಹೇಳಿದರು. ನಂತರ ದೇವಸ್ಥಾನ ನಿರ್ಮಾಣಕ್ಕಾಗಿ ಭೂಮಿ ಪೂಜೆಯನ್ನು ನಡೆಸಲಾಯಿತು.
ಮಾಜಿ ಶಾಸಕ ಜಿ. ವೀರಪ್ಪ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಹಾಲುಮತ ಸಮಾಜದ ಮುಖಂಡರಾದ ವಿಠಲಾಪುರ ಯಮನಪ್ಪ, ಕೆ. ನಾಗೇಶಪ್ಪ, ಶರಣೇಗೌಡ, ಸಣ್ಣಕ್ಕಿ ನೀಲಪ್ಪ, ಡಿ.ಕೆ. ಆಗೋಲಿ, ಅಶೋಕಗೌಡ, ಹೊಸಳ್ಳಿ ಮೊರಿ ದುಗುರಪ್ಪ, ಹನುಮಂತಪ್ಪ, ಕೆ. ವೆಂಕಟೇಶ, ಯಮನೂರಪ್ಪ, ಶಿವಪ್ಪ, ಮಲ್ಲಪ್ಪ ಹಾಗೂ ಇತರರಿದ್ದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.