Breaking News

ಫೋಕ್ಸೊ ಕಾಯ್ದೆ ಕುರಿತು ಕಾನೂನುಅರಿವುಕಾರ್ಯಕ್ರಮ

Legal Awareness Program on FOXO Act

ಜಾಹೀರಾತು
ಜಾಹೀರಾತು





ಗಂಗಾವತಿ: ಫೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು
ಕಾರ್ಯಕ್ರಮವನ್ನು ನಗರದ ಸಂಕಲ್ಪ ಸ್ವತಂತ್ರ ಪಿ.ಯು
ಕಾಲೇಜಿನಲ್ಲಿ ಜುಲೈ-೨೬ ರಂದು ಹಮ್ಮಿಕೊಳ್ಳಲಾಗಿತ್ತು. ಈ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎಂ.ಆರ್. ಮಂಜುಸ್ವಾಮಿ,
ಮುಖ್ಯ ಅತಿಥಿಗಳಾಗಿ ನಾಗರಾಜ ಗುತ್ತೇದಾರ್ ವಕೀಲರು
ವಹಿಸಿಕೊಂಡಿದ್ದರು ಹಾಗೂ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.
ನಾಗರಾಜ ಗುತ್ತೇದಾರ್ ವಕೀಲರು ವಿದ್ಯಾರ್ಥಿಗಳಿಗೆ ಪೋಕ್ಸೋ
ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ, ಲೈಂಗಿಕ
ಮತ್ತು ಅಶ್ಲೀಲತೆಯ ಅಪರಾಧ, ದೌರ್ಜನ್ಯಗಳಿಂದ ಮಕ್ಕಳನ್ನು
ರಕ್ಷಿಸುವ ಉದ್ದೇಶದಿಂದಲೇ ೨೦೧೨ ರಲ್ಲಿ ಜಾರಿಗೆ ಬಂದಿತು. ಅಂದರೆಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ
ಕಾಯ್ದೆಯಾಗಿದೆ. ಈ ಕಾಯ್ದೆ ಅಡಿಯಲ್ಲಿ ೧೮ ವರ್ಷಕ್ಕಿಂತ ಕಡಿಮೆ
ವಯಸ್ಸಿನ ಯಾವುದೇ ವ್ಯಕ್ತಿಯನ್ನು ಮಗು ಎಂದು
ಪರಿಗಣಿಸಲಾಗಿದ್ದು, ಈ ಕಾಯ್ದೆಯಡಿಯಲ್ಲಿ ಬರುವ ಯಾವುದೇ
ಕೃತ್ಯ ನಡೆಸಲಾಗಿದೆ ಎಂಬ ಜ್ಞಾನವನ್ನು ಹೊಂದಿರುವ ಯಾವುದೇ
ವ್ಯಕ್ತಿ ದೂರು ನೀಡುವುದು ಹಾಗೂ ಪೋಷಕರು, ವೈದ್ಯರು,
ಶಾಲಾ ಮತ್ತು ಸ್ವತಃ ಮಗು ಯಾರಾದರೂ ಸೇರಿದಂತೆ ದೂರು
ಸಲ್ಲಿಸಬಹುದು. ಈ ಕಾಯ್ದೆಯು ಮಕ್ಕಳ ಮೇಲಿನ ಲೈಂಗಿಕ
ದೌರ್ಜನ್ಯವನ್ನು ವರದಿ ಮಾಡಲು ಯಾವುದೇ ಸಮಯದ
ಮಿತಿಯನ್ನು ಒದಗಿಸುವುದಿಲ್ಲ, ಅತ್ಯಾಚಾರದಂತಹ ಲೈಂಗಿಕ
ಹಲ್ಲೆಗಳನ್ನು ತಡೆಯಲು ಮರಣ ದಂಡನೆಯೂ ಸೇರಿದಂತೆ, ಕಠಿಣ
ಶಿಕ್ಷೆಗೆ ಅವಕಾಶವಿರುತ್ತದೆ. ಆದ್ದರಿಂದ ಮಕ್ಕಳು ಕಾನೂನು
ಚೌಕಟ್ಟಿನಲ್ಲಿ ಜೀವನ ನಡೆಸುವುದು ಉತ್ತಮ ಎಂದು ಫೋಕ್ಸೋ
ಕಾಯ್ದೆ ಕುರಿತು ಕಾನೂನಿನ ಅರಿವನ್ನು ಮೂಡಿಸಿದರು.
ಡಾ. ಎಂ.ಆರ್. ಮಂಜುಸ್ವಾಮಿರವರು ಇಂದಿನ ದಿನಗಳಲ್ಲಿ
ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆ ಮಾಡುವುದರಿಂದ ದಾರಿ ತಪ್ಪುತ್ತಿದ್ದಾರೆ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಹಲವಾರುರೀತಿಯಲ್ಲಿ ದುಶ್ಚಟಗಳಿಗೆ ಒಳಗಾಗಿದ್ದಾರೆ. ಈ ದುಶ್ಚಟಗಳಿಂದವಿದ್ಯಾರ್ಥಿಗಳು ಜಾಗೃತಿ ವಹಿಸಬೇಕಾಗಿದೆ ಎಂದು ವಿವರಿಸಿದರು. ಪಾಲಕರುಸಹ ಮಕ್ಕಳ ಬಗ್ಗೆ ಗಮನಹರಿಸುತ್ತಾ ಉತ್ತಮ ಜೀವನದ ಬಗ್ಗಅವರಲ್ಲಿ ಸಂಸ್ಕಾರವನ್ನು ನೀಡಬೇಕು. ಶಾಲಾ & ಕಾಲೇಜುಗಳಲ್ಲಿವಿದ್ಯಾರ್ಥಿಗಳಿಗೆ ಬೋಧನೆಯೊಂದಿಗೆ ನೀತಿಕತೆಗಳನ್ನುಹೇಳುತ್ತಾ, ಅವರಿಗೂ ಮುಂದಿನ ಭವಿಷ್ಯದ ಬಗ್ಗೆ ತಿಳಸಬೇಕು.
ವಿದ್ಯಾರ್ಥಿಗಳು ಸಂಸ್ಕಾರಯುತವಾದ ಹಾಗೂ ಪಾಲಕರ ಮತ್ತು
ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಜೀವನ ನಿರ್ವಹಿಸಬೇಕೆಂದುತಿಳಿಸಿದರು.
ಕಾರ್ಯಕ್ರಮದಲ್ಲಿ ಬಸಪ್ಪ ಸಿರಿಗೇರಿ, ನಾಗರಾಜ ಎಚ್, ಬಸನಗೌಡಗೋನಾಳ್, ಶಂಕರ ವಿ, ಸೋಮಶೇಖರ್‌ಗೌಡ ಕಂಪ್ಲಿ, ವಿಶ್ವನಾಥಎಚ್.,ಶಿವಶರಣ,ಶರಣಮ್ಮ,ಮೇಘಾಉಪಸ್ಥತರಿದ್ದರು. ಶಿವಶರಣಕಾರ್ಯಕ್ರಮವನ್ನು ನಿರ್ವಹಿಸಿದರು, ವಿದ್ಯಾರ್ಥಿಗಳು ಹಾಜರಿದ್ದರು.

About Mallikarjun

Check Also

ದೇವದುರ್ಗದಲ್ಲಿ 11 ಮಕ್ಕಳು ಕೆಲಸಕ್ಕೆ ಹೋಗುವುದನ್ನು ತಡೆದು ಪುನಃ ಶಾಲೆಗೆ ಸೇರ್ಪಡೆಗೆ ಕ್ರಮ

Action to prevent 11 children from going to work in Devadurga and re-enroll them in …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.