ಪರಿಸರ ಸಂರಕ್ಷಣೆ ಬದ್ಧರಾಗೋಣ:ಪತ್ರಕರ್ತ ವೆಂಕಟೇಶ ಸಂಪ ಅಭಿಮತ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Let's commit to protecting the environment: Journalist Venkatesha Sampa's opinion




ಪರಿಸರ ಸಂರಕ್ಷಣೆ ಬದ್ಧರಾಗೋಣ:
ಪತ್ರಕರ್ತ ವೆಂಕಟೇಶ ಸಂಪ ಅಭಿಮತ

ಜಾಹೀರಾತು

ಶಿವಮೊಗ್ಗ: ಪ್ರಕೃತಿ ನಮಗೆ ಎಲ್ಲವನ್ನೂ ಕೊಡುತ್ತದೆ, ನಾವು ಅದನ್ನು ಉಳಿಸಿಕೊಳ್ಳಲು ಪಣ ತೊಡಬೇಕೆಂದು ಖ್ಯಾತ ಪತ್ರಕರ್ತ,ಸಂಪದ ಸಾಲು ಪತ್ರಿಕೆ ಸಂಪಾದಕ ವೆಂಕಟೇಶ ಎಸ್ ಸಂಪ ಅವರು ಹೇಳಿದರು.
ಅವರು ಇಂದಿರಾ ಪ್ರಕಾಶ್ ಅಕಾಡೆಮಿ ವತಿಯಿಂದ ಹಾಗೂ ಜಿಲ್ಲಾ ಶಿಕ್ಷಕರ ಸಾಹಿತ್ಯ ಪರಿಷತ್ತು ಶಿವಮೊಗ್ಗ ದವರ ಸಹಯೋಗದೊoದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ವರ್ಷಕ್ಕೆ1.09 ಕೋಟಿ ಹೆಕ್ಟರ್ ಅರಣ್ಯ ನಾಶ ಆಗುತ್ತಿದೆ.ಲೆಕ್ಕವಿಲ್ಲದಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ಪರಿಸರವನ್ನು ಆವರಿಸುತ್ತಿದೆ.
ಎಲ್ಲೆಡೆ ಕಲಬೆರಕೆ ಆಹಾರ ಹೆಚ್ಚುತ್ತಿದೆ.ಮನುಷ್ಯನ ದೇಹದೊಳಗೂ ಪ್ಲಾಸ್ಟಿಕ್ ಸೇರುತ್ತಿದೆ.ಇದರಿಂದ ಕಾಯಿಲೆ ಹೆಚ್ಚುತ್ತದೆ, ಪರಿಸರವನ್ನು ನಾವು ರಕ್ಷಿಸಿದರೆ,ಪರಿಸರ ನಮ್ಮನ್ನು ರಕ್ಷಿಸುತ್ತದೆ, ಹಾಗಾಗಿ ಎಲ್ಲರೂ ಸೇರಿ ಪರಿಸರವನ್ನು ರಕ್ಷಿಸಬೇಕು ಎಂದು ಕರೆನೀಡಿದರು.
ಇದೇ ಸಂದರ್ಭಲ್ಲಿ
ವಿಶ್ವ ಪರಿಸರ ದಿನಾಚರಣೆಯ
ಕವಿಗೊಷ್ಠಿ ಹಮ್ಮಿ ಕೊಳ್ಳಲಾಗಿತ್ತು.ಸುಮಾರು 18 ಕ್ಕು ಹೆಚ್ಚು ಕವಿ ಕವಯತ್ರಿಯರು ಪರಿಸರ ಕುರಿತು ಕವನಗಳ ವಾಚಿಸಿದರು.
. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ
ಕವಯತ್ರಿ ಸುಮಾ ಕಳಸಾಪುರ, ರಾಯಲ್ ಡೈಮೆಂಡ್ ಶಾಲೆಯ ಅರುಣ್ ಮಾತಾನಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಅನಿತಾ ಸೂರ್ಯ ರವರು ಎಲ್ಲರ ಕವಿತೆಗಳ ಬಗ್ಗೆ ವಿಶ್ಲೇಷಣೆಯನ್ನು ಸುಂದರವಾಗಿ ನೀಡಿದರು.
ಸoಚಾರಿ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಭದ್ರಾವತಿ ಇವರ ಜೀವಪರ ಪರಿಸರಪರ ಕಾಳಜಿ ಯ ಸೇವೆಗೆ ಪರಿಸರ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು‌
ಅಧ್ಯಕ್ಷ ತೆ ವಹಿಸಿದ್ದ ಇಂದಿರಾ ಅಕಾಡೆಮಿ ಅಧ್ಯಕ್ಷೆ ಇಂದಿರಾ ಪ್ರಕಾಶ್ ಕಾರ್ಯಕ್ರಮ ಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಅಲ್ಲದೆ ಅತಿಥಿ ಗಳನ್ನು ಸನ್ಮಾನಿಸಿ
ಪರಿಸರ ಕಾಪಾಡುವಂತೆ ಕೋರಿದರು.
ನಳಿನ ಸುಬ್ರಹ್ಮಣ್ಯ
ಸ್ವಾಗತಿಸಿದರು.
ಮಂಜುನಾಯ್ಕರವರು
ಕಾರ್ಯಕ್ರಮ ನಿರೂಪಿಸಿದರು.
ಭಾಗ್ಯಲಕ್ಷ್ಮಿ ಆಚಾರ್ ವಂದಿಸಿದರು.
ನೃತ್ಯ ಶಿಕ್ಷಕರಾದ ಪ್ರಮೋದ್ ಹಾಗೂ ಮಹೇಶ್ ನೃತ್ಯ ಕಾರ್ಯಕ್ರಮ ನೆಡಿಸಿ ಕೊಟ್ಟರು.
ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳ
ವಿಜೇತರಾದವರಿಗೆ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.
ಸ್ಟೈಲ್ ಡ್ಯಾನ್ಸ್ ಅಕಾಡೆಮಿಯ ಮಕ್ಕಳಿಗೆ ಸಹ ನೋಟ್ ಪುಸ್ತಕಗಳನ್ನು. ಕವಿತೆಗಳನ್ನು ವಾಚಿಸಿದ ಕವಿಗಳಿಗೂ . ನರ್ತಿಸಿದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆಲ್ಲ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು.

Total Views: 0
Share This Article