

Efforts for peace and harmony through prevention of illegal activities and law enforcement: CPI Somasekhar Juttal
ಗ್ರಾಮೀಣ ಸಿಪಿಐ ಆಗಿ ಜಟ್ಟಲ್ ಅಧಿಕಾರ ಸ್ವೀಕಾರ.

ಗಂಗಾವತಿ: ಅಕ್ರಮ ಚಟುವಟಿಕೆಗಳನ್ನು ತಡೆದು ಗ್ರಾಮೀಣ ಭಾಗದಲ್ಲಿ ಶಾಂತಿ,ಸೌಹಾರ್ದತೆಗಾಗಿ ಎಲ್ಲರ ಸಹಕಾರದಲ್ಲಿ ಇಲಾಖೆಯ ನಿಯಮಗಳನ್ನು ಅನುಷ್ಠಾನ ಮಾಡಲಾಗುತ್ತದೆ ಎಂದು ರವಿವಾರ
ಗ್ರಾಮೀಣ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಇಲಾಖೆ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು ಮೇಲಾಧಿಕಾರಿಗಳ ಆದೇಶದಂತೆ ಅಕ್ರಮ ಚಟುವಟಿಕೆಗಳನ್ನು ತಡೆದು ಪ್ರತಿಯೊಬ್ಬರು ಶಾಂತಿ ಕಾನೂನು ರೀತಿಯಲ್ಲಿ ಜೀವನ ನಡೆಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.
ಇತ್ತೀಚಿಗೆ ರಾಜ್ಯ ಪೊಲೀಸ್ ಇಲಾಖೆ ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ್ದು
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಸಿಲವೇರಿಯವರನ್ನು ಸರಕಾರ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾ ಮಾಡಿ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮಶೇಖರ್ ಜುಟ್ಟಲ್ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗವಾಗಿ ಆಗಮಿಸಿದ್ದಾರೆ.