ಕೊಪ್ಪಳ ನಗರಸಭೆ: ಮತದಾರರ ಸಹಾಯ ಕೇಂದ್ರದ ಸಹಾಯ ಪಡೆಯಲು ಸೂಚನೆ

H.Mallikarjun
H.Mallikarjun - Kalyanasiri
3 Min Read

ಕೊಪ್ಪಳ ನಗರಸಭೆ: ಮತದಾರರ ಸಹಾಯ ಕೇಂದ್ರದ ಸಹಾಯ ಪಡೆಯಲು ಸೂಚನೆ

ಜಾಹೀರಾತು

Koppal City Council: Instructions to get help from the voter assistance center

ಕೊಪ್ಪಳ ಜುಲೈ 22 (ಕರ್ನಾಟಕ ವಾರ್ತೆ): ಕೊಪ್ಪಳ ನಗರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025 ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ಮತದಾರರ ಅನುಕೂಲಕ್ಕಾಗಿ ನಗರ ವ್ಯಾಪ್ತಿಯಲ್ಲಿ ಈಗಾಗಲೇ 10 ಮತದಾರರ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
94, 102, 103, 104, 105, 106, 107 ಮತದಾನ ಕೇಂದ್ರ ಸಂಖ್ಯೆಗಳಿಗೆ ಸಂಬAಧಿಸಿದ ಮತದಾರರು ಕೊಪ್ಪಳ ಪಲ್ಟನ್ ಗಲ್ಲಿಯ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯ ಮತದಾರರ ಸಹಾಯ ಕೇಂದ್ರ, 95, 96, 97, 98, 99, 100, 101 ಕ್ಕೆ ಸಂಬAಧಿಸಿದ ಮತದಾರರು ಕೊಪ್ಪಳದ ನಿರ್ಮಿತಿ ಕೇಂದ್ರದ ಮತದಾರರ ಸಹಾಯ ಕೇಂದ್ರ, 108, 109, 110, 111, 112, 113, 114  ಕ್ಕೆ ಸಂಬAಧಿಸಿದ ಮತದಾರರು ಕೊಪ್ಪಳದ ಬ್ರಹ್ಮನವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತದಾರರ ಸಹಾಯ ಕೇಂದ್ರ,  115, 116, 117, 118, 119, 120, 121, 122 ಕ್ಕೆ ಸಂಬAಧಿಸಿದ ಮತದಾರರು ಕೊಟಗಾರ ಶಾಲೆ ಎದುರುಗಡೆಯ ಅಂಬೇಡ್ಕರ್ ಭವನದ ಮತದಾರರ ಸಹಾಯ ಕೇಂದ್ರ, 123, 124, 125, 126 ಕ್ಕೆ ಸಂಬAಧಿಸಿದ ಮತದಾರರು ತಾಲೂಕ ಪಂಚಾಯತ್ ಕಾರ್ಯಾಲಯದ ಮತದಾರರ ಸಹಾಯ ಕೇಂದ್ರ 127, 128, 129, 130, 131, 132 ಕ್ಕೆ ಸಂಬAಧಿಸಿದ ಮತದಾರರು ನಗರಸಭೆ ಕಾರ್ಯಾಲಯದ  ಮತದಾರರ ಸಹಾಯ ಕೇಂದ್ರ, 136, 137, 138, 139, 140, 141, 142, 143, 144 ಕ್ಕೆ ಸಂಬAಧಿಸಿದ ಮತದಾರರು ಹೊಸ ಬಸ್ ನಿಲ್ದಾಣದ ಎದುರುಗಡೆ ಇರುವ ನಗರಸಭೆ ವಾಣಿಜ್ಯ ಸಂಕೀರ್ಣ ಕಟ್ಟಡÀದ ಮತದಾರರ ಸಹಾಯ ಕೇಂದ್ರ, 145, 146, 147, 148, 149, 150 ಕ್ಕೆ ಸಂಬAಧಿಸಿದ ಮತದಾರರು ತೋಟಗಾರಿಕೆ ಇಲಾಖೆ ಕಾರ್ಯಾಲಯದ ಮತದಾರರ ಸಹಾಯ ಕೇಂದ್ರ, 151, 152, 153, 157, 158 ಕ್ಕೆ ಸಂಬAಧಿಸಿದ ಮತದಾರರು ಕಾರ್ಯಪಾಲಕ ಅಭಿಯಂತರರ ಕಛೇರಿ ಜೆಸ್ಕಾಂ ಮತದಾರರ ಸಹಾಯ ಕೇಂದ್ರ, 133, 134, 135, 154, 155, 156, 157, 159, 160 ಕ್ಕೆ ಸಂಬAಧಿಸಿದ ಮತದಾರರು ಬಸವೇಶ್ವರ ವೃತ್ತದ ಹತ್ತಿರದ ಪಿ.ಸಿ.ಎ. & ಆರ್.ಡಿ. ಬ್ಯಾಂಕ್ ಕಟ್ಟಡ ಮತದಾರರ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು.

ತಮ್ಮ ವ್ಯಾಪ್ತಿಯಲ್ಲಿನ ಬೂತ್ ಮಟ್ಟದ ಅಧಿಕಾರಿಗಳು, (ಬಿ.ಎಲ್.ಓ) ಈಗಾಗಲೇ ತಮ್ಮ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂಗಳನ್ನು ವಿತರಣೆ ಮಾಡಿರುತ್ತಾರೆ. ಅವುಗಳನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ, ಇಂದೇ ತುರ್ತಾಗಿ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿ.ಎಲ್.ಓ) ನೀಡಿ, ಸ್ವೀಕೃತಿಯನ್ನು ಪಡೆಯಲು ತಿಳಿಸಿದೆ.
ಒಂದು ವೇಳೆ ಎನ್ಯುಮರೇಷನ್ ಫಾರಂ ಭರ್ತಿ ಮಾಡಲು ಮಾಹಿತಿ ಕೊರತೆ ಉಂಟಾದಲ್ಲಿ ಎನ್ಯುಮರೇಷನ್ ಫಾರಂನಲ್ಲಿನ ಮೇಲ್ಭಾಗದಲ್ಲಿರುವ ತಮ್ಮ ಬೂತ್ ಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ತಮ್ಮ ವ್ಯಾಪ್ತಿಯಲ್ಲಿನ ಮತದಾರರ ಸಹಾಯ ಕೇಂದ್ರಕ್ಕೆ ತೆರಳಿ ಸಹಾಯವನ್ನು ಪಡೆದುಕೊಂಡು ಫಾರಂಗಳನ್ನು  ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ, ಇಂದೇ ಬಿ.ಎಲ್.ಓ ಅವರಿಗೆ ಸಲ್ಲಿಸಲು ಈ ಮೂಲಕ ತಿಳಿಯಪಡಿಸಿದೆ. ಯಾರಿಗಾದರೂ ಎಸ್.ಐ.ಆರ್. ಎನ್ಯುಮರೇಷನ್ ಫಾರಂಗಳು ತಲುಪದಿದ್ದಲ್ಲಿ ಇದಕ್ಕಾಗಿ ನಗರಸಭೆಯು ಸಹಾಯವಾಣಿಯನ್ನು ಪ್ರಾರಂಭಿಸಿದ್ದು, ಸಹಾಯವಾಣಿಯ ಸಂಖ್ಯೆ :08539-230192 ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದಾಗಿದೆ.
ಒಂದು ವೇಳೆ ನಿಗದಿತ ಅವಧಿಯೊಳಗಾಗಿ ಭರ್ತಿ ಮಾಡಿದ ಫಾರಂಗಳನ್ನು ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಸದೇ ಇದ್ದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ಹಾಗೂ ಮತದಾನದ ಹಕ್ಕಿನಿಂದ ವಂಚಿತರಾಗುವುದನ್ನು ತಪ್ಪಿಸಿಕೊಳ್ಳಲು, ನಿಗದಿತ ಅವಧಿಯೊಳಗಾಗಿ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಸರಿಯಾದ ಮಾಹಿತಿಯೊಂದಿಗೆ ಎನ್ಯೂಮರೇರ‍್ಸ ಫಾರಂಗಳನ್ನು ಭರ್ತಿ ಮಾಡಿ ಸಲ್ಲಿಸುವಂತೆÀ ಸಾರ್ವಜನಿಕರಿಗೆ ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article