ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ: ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನ

H.Mallikarjun
H.Mallikarjun - Kalyanasiri
1 Min Read

ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ: ನೋಂದಣಿ ಮಾಡಿಕೊಳ್ಳಲು ಜುಲೈ 31 ಕೊನೆಯ ದಿನ

ಜಾಹೀರಾತು
Karnataka Farmer Safety – Prime Minister Crop Insurance Scheme: Last day to register
is July 31
ಕೊಪ್ಪಳ ಜುಲೈ 22 (ಕರ್ನಾಟಕ ವಾರ್ತೆ): 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಹತ್ತಿ (ನೀರಾವರಿ) ಬೆಳೆಗೆ ನೋಂದಣಿ ಮಾಡಲು ಬೆಳೆ ಸಾಲ ಪಡೆದ ರೈತರಿಗೆ ಮಾತ್ರ ಜುಲೈ 26 ಕೊನೆ ದಿನಾಂಕವಾಗಿರುತ್ತದೆ. ಉಳಿದಂತೆ ಭತ್ತ (ಮಳೆ ಆಶ್ರಿತ / ನೀರಾವರಿ), ಜೋಳ (ಮಳೆ ಆಶ್ರಿತ / ನೀರಾವರಿ), ಮುಸುಕಿನಜೋಳ (ಮಳೆ ಆಶ್ರಿತ / ನೀರಾವರಿ), ಸಜ್ಜೆ (ಮಳೆ ಆಶ್ರಿತ / ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ / ನೀರಾವರಿ), ಅಲಸಂದೆ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ / ನೀರಾವರಿ), ಹುರುಳಿ (ಮಳೆ ಆಶ್ರಿತ), ಎಳ್ಳು (ಮಳೆ ಆಶ್ರಿತ), ನೆಲಗಡಲೆ (ಶೇಂಗಾ) (ಮಳೆ ಆಶ್ರಿತ / ನೀರಾವರಿ), ಹತ್ತಿ (ಮಳೆ ಆಶ್ರಿತ ), ಈರುಳ್ಳಿ (ನೀರಾವರಿ / ಮಳೆ ಆಶ್ರಿತ), ಟೊಮ್ಯಾಟೊ ಬೆಳೆಗಳಿಗೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿದೆ.
ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ರೈತರು ಯೋಜನೆಯ ಸದುಪಯೋಗ ಪಡೆಯಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Total Views: 0
Share This Article