Breaking News

ಜಾನಪದ ಗಾಯನ, ನೃತ್ಯ ವೈಭವ ಮನಸೂರಿಗೊಂಡವು.

The folk singing and dancing were spectacular.

ಜಾಹೀರಾತು

ವರದಿ – ಸಂಗಮೇಶ ಎನ್ ಜವಾದಿ.

ಬೀದರ್: ಬೀದರ್ ನಗರವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತದೆ ಎಂದು
ನಗರಸಭೆ ಅದ್ಯಕ್ಷ ಎಂ.ಡಿ. ಗೋಸೊದ್ದಿನ್ ನುಡಿದರು.

ನಗರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ, ಕೇಂದ್ರದ ಸಂಸ್ಕೃತಿ ಸಚಿವಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶುಕ್ಲತೀರ್ಥ ಮಡಿವಾಳೇಶ್ವರ ಸಾಮಾಜಿಕ, ಸಾಂಸ್ಕೃತಿಕ ಟ್ರಸ್ಟ್ ಮತ್ತು ಕರುಣಾಮಯ ಯುವಕ ಸಂಘದ ಸಹಯೋಗದಲ್ಲಿ ನಡೆದ ಜಾನಪದ ಸಾಂಸ್ಕೃತಿಕ ಉತ್ಸವ ಮತ್ತು ಜಾನಪದ ಜಾತ್ರೆ ಕಾರ್ಯಕ್ರಮವನ್ನು
ಉದ್ಘಾಟಿಸಿದ ಮಾತನಾಡಿದ ಅವರು ಈಗಷ್ಟೇ ಆಡಳಿತ ಮಂಡಳಿ ರಚನೆಯಾಗಿದೆ. ಮೂಲ ಸೌಲಭ್ಯ ಒದಗಿಸುವ ಮತ್ತು ಅಭಿವೃದ್ಧಿಪರ ಕಾರ್ಯಗಳು ಒಟ್ಟಾಗಿಯೇ ನಡೆಯಲಿವೆ ಎಂದರು.
ಸಾನಿಧ್ಯ ವಹಿಸಿದ ಪೂಜ್ಯರಾದ ತಮಲುರು ಶ್ರೀಗಳು ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯ ಡಾ. ಜಗನ್ನಾಥ ಹೆಬ್ಬಾಳೆ ಅದ್ಯಕ್ಷತೆ ವಹಿಸಿದ್ದರು. ಚಾಂಬೋಳದ ರುದ್ರಮುನಿ ಶಿವಾಚಾರ್ಯರು, ಹಿರಿಯ ಪತ್ರಕರ್ತ ಮಾರುತಿ ಸೋನಾರ್, ನಗರಸಭೆ ಸದಸ್ಯ ಪ್ರಶಾಂತ ದೊಡ್ಡಿ, ಬಿಜೆಪಿ ನಾಯಕ ಈಶ್ವರಸಿಂಗ್ ಠಾಕೂರ್, ಕಾಂಗ್ರೆಸ್ ನಾಯಕ ಧನರಾಜ ಹಂಗರಗಿ, ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪುಂಡಲೀಕಪ್ಪ ಪಾಟೀಲ್ ಗುಮ್ಮಾ ಉಪಸ್ಥಿತರಿದ್ದರು.

ಶುಕ್ಲತೀರ್ಥ ಟ್ರಸ್ಟ್ ಅಧ್ಯಕ್ಷ ಓಂಪ್ರಕಾಶ ಬಜಾರೆ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ತಿನ ಸಂಯೋಜಕ ಡಾ. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ರಾಜಕುಮಾರ ಜಮಾದಾರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ವಿವಿಧ ಜಾನಪದ ಕಲಾವಿದ ರಿಂದ ಕಲಾ ನೃತ್ಯಗಳು ಪ್ರದರ್ಶನಗೊಂಡವು ಅವುಗಳಲ್ಲಿ ಪ್ರಮುಖವಾದವು

ಲಂಬಾಣಿ ನೃತ್ಯ, ಹಲಗಿ ಕುಣಿತ,ಡೊಳ್ಳುಕುಣಿತ,ಪುರವಂತಿಕೆ ಕುಣಿತ,ಭುತೇರ ಕುಣಿತ,ಜಾನಪದ ನೃತ್ಯ,ಹಣತೆ ನೃತ್ಯ,ಜಾನಪದ ಗಾಯನ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ
ಪ್ರಮುಖರಾದ ಸಂತೋಷ ಕಾಮಣ್ಣನವರ್, ಸಂಗಮೇಶ ಬಿಕ್ಲೆ, ಶಿವರಾಜ ಬೆನಕನಳ್ಳಿಕರ್, ಸಾಗರ್ ಗೌರ, ಮಲ್ಲಿಕಾರ್ಜುನ ಮೇತ್ರೆ, ಜಗದೀಶ ಬಜಾರೆ, ಪವನ್ ಬಿರಾದಾರ್, ಅನೀಲ ರಾಜಗೀರಾ, ನಾಗನಾಥ ಮಾನೆ, ಭಕ್ತರಾಜ ಪಾಟೀಲ್, ಮಡಿವಾಳಯ್ಯ ಸ್ವಾಮಿ, ಗುಣವಂತ ಪಾಟೀಲ್, ಸಾಯಿನಾಥ ಮಡಿವಾಳ, ಶಿವಕುಮಾರ ದಾನಾ, ವೀರೇಶ ಸ್ವಾಮಿ, ರವೀಂದ್ರ‍್ರ ರಡ್ಡಿ, ಶರಣಪ್ಪ ಬಿರಾದಾರ್, ಪಂಢರಿನಾಥ ಹಳೆಂಬರ್, ರಾಜಕುಮಾರ ಡೊಂಗರಗಿ ಮತ್ತಿತರ ಗಣ್ಯರು, ಬಡಾವಣೆಯ ಹಿರಿಯರು ಪಾಲ್ಗೊಂಡಿದ್ದರು.

ಹೆಸರಾಂತ ಸಂಗೀತ ಕಲಾವಿದರಾದ ರಾಮುಲು ಗಾದಗಿ ಮತ್ತು ಪುಂಡಲೀಕಪ್ಪ ಪಾಟೀಲ್ ನೇತೃತ್ವದಲ್ಲಿ ರಾತ್ರಿಯಿಡೀ ಸಂಗೀತ ದರಬಾರ್ ನಡೆಯಿತು. ನಾವದಗೇರಿ ಅಲ್ಲದೆ ನಗರದ ವಿವಿಧ ಬಡಾವಣೆಗಳ ಜನ ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು. ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಮುನ್ನ ನಾವದಗೇರಿ ಹನುಮಾನ ಮಂದಿರದಿಂದ ಶುಕ್ಲತೀರ್ಥ ಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಿತು. ಗಾಂಧಿಗಂಜ್ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಉದ್ಘಾಟಿಸಿದರು. ಮುಖಂಡರಾದ ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಸೊನಾರೆ, ಸುನೀಲ ಬಚ್ಚನ್, ಫಿಲೀಸ್ ದೊಡ್ಡಮನಿ, ಸಂಜಯರಾಜ್ ಚಂದನ್, ಅಮರ್ ಭಂಗೆ, ಅಶೋಕ ಹೆಬ್ಬಾಳೆ ಮತ್ತು ಇತರ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.