Breaking News

ಯೂಥ್ ೪ ಜಾಬ್ಸ್ ಫೌಂಡೇಷನ್, ಗ್ರಾಸ್ ರೂಟ್ಸ್ಅಕಾಡೆಮಿಯವರಿಂದವಿಕಲಚೇತನ ತರಬೇತಿದಾರರಿಗೆ ಪ್ರಮಾಣ ಪತ್ರಗಳ ಜೊತೆಗೆ ಬುಕ್ಸ್, ಬ್ಯಾಗ್‌ಗಳ ವಿತರಣೆ

By Youth 4 Jobs Foundation, Grass Roots Academy Distribution of books, bags along with certificates to differently abled trainees

ಗಂಗಾವತಿ: ಯೂಥ್ ೪ ಜಾಬ್ಸ್ ಫೌಂಡೇಶನ್, ಗ್ರಾಸ್ ರೂಟ್ಸ್ ಅಕಾಡೆಮಿ ಸಂಸ್ಥೆಯ ವತಿಯಿಂದ ಜನೇವರಿ-೨೨ ರಂದು ಬೆಳಗ್ಗೆ ೧೧:೩೦ ಗಂಟೆಗೆ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿರುವ ಅರಮನೆ ಫ್ಯಾಮಿಲಿ ರೆಸ್ಟೋರೆಂಟ್ ಫಂಕ್ಷನ್ ಹಾಲ್‌ನಲ್ಲಿ ೧೧೭ ವಿಕಲಚೇತನ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರದ ಜೊತೆಗೆ ಬುಕ್ಸ್ ಮತ್ತು ಬ್ಯಾಗ್ಸ್ ಗಳನ್ನು ವಿತರಿಸಲಾಯಿತು ಎಂದು ಫೌಂಡೇಷನ್‌ನ ಕೊಪ್ಪಳ ತಾಲೂಕ ಸಂಚಾಲಕರಾದ ಗಣೇಶ ಬಂಡಿವಡ್ಡರ್ ಪ್ರಕಟಣೆಯಲ್ಲಿ ತಿಳಿಸಿದರು.
ಯೂಥ್ ೪ ಜಾಬ್ಸ್ ಫೌಂಡೇಶನ್, ಗ್ರಾಸ್ ರೂಟ್ಸ್ ಅಕಾಡೆಮಿಯಿಂದ ಒಂದು ತಿಂಗಳು ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯನ್ನು ೧೧೭ ವಿಕಲಚೇತನ ಅಭ್ಯರ್ಥಿಗಳು ಪಡೆದುಕೊಂಡಿದ್ದು, ಅದರಲ್ಲಿ ೪೦ ವಿಕಲಚೇತನ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಕೊಡಿಸಲಾಗಿದೆ ಮತ್ತು ೧೬ ವಿಕಲಚೇತನ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ಕೊಟ್ಟು ಮತ್ತು ಸಾಲ ಸೌಲಭ್ಯವನ್ನು ಒದಗಿಸಿ ಅವರ ಜೀವನ ಮಟ್ಟವನ್ನು ಉತ್ತಮಗೊಳಿಸಲಾಗಿದೆ. ಯೂಥ್ ೪ ಜಾಬ್ಸ್ ಫೌಂಡೇಶನ್ ಸಂಸ್ಥೆಯು ವಿಕಲಚೇತನರಿಗೆ ಸ್ವರಾಜ್ ಎಬಿಲಿಟಿ ಎಂಬ ಅತಿ ದೊಡ್ಡ ಜಾಬ್ಸ್ ಪೋರ್ಟಲ್ ಲಾಂಚ್ ಮಾಡಿದೆ. ಇದರಲ್ಲಿ ವಿಕಲಚೇತನ ಅಭ್ಯರ್ಥಿಗಳು ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು ಇದರಿಂದ ಉದ್ಯೋಗವನ್ನು ಪಡೆಯಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ತಿಪ್ಪಣ್ಣ ಶಿರಸಂಗಿ, ಕೊಪ್ಪಳ ಜಿ.ಪಂ ಯೋಜನಾ ನಿರ್ದೇಶಕರಾದ ಮಂಜುನಾಥ್, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಶ್ರೀಮತಿ ಶ್ರೀದೇವಿ, ಕೊಪ್ಪಳ ತಾಲೂಕು ಎಂ.ಆರ್.ಡಬ್ಲೂö್ಯ ಶ್ರೀಮತಿ ಜಯಶ್ರೀ, ಫೌಂಡೇಷನ್, ಗ್ರಾಸ್ ರೂಟ್ಸ್ ಅಕಾಡೆಮಿಯ ಜಿ.ಆರ್.ಎ ಪ್ರಾಜೆಕ್ಟ್ ಲೀಡ್ ಮ್ಯಾನೇಜರ್ ಆದ ಶ್ರವಣಕುಮಾರ್, ಕರ್ನಾಟಕ ಸ್ಟೇಟ್ ಹೆಡ್ ಸೈಫುಲ್ಲಾ, ಕೊಪ್ಪಳ ಸಾಮರ್ಥ್ಯ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಅಸಿಸ್ಟೆಂಟ್ ಕೋ-ಆರ್ಡಿನೇಟರ್ ಮತ್ತು ಫೈಂಡ್ರೆöÊಸರ್ ವಿಶ್ವನಾಥ ಎಂ., ಕನಸು-ನನಸು ಚಾರಿಟೇಬಲ್ ಟ್ರಸ್ಟ್ ಫಾರ್ ದಿವ್ಯಾಂಗರು ಸಂಸ್ಥೆಯ ಅಶೋಕ ಡೊಂಬರ್, ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗದ ಜಿಲ್ಲಾಧ್ಯಕ್ಷರಾದ ಮಂಜುನಾಥ ಬಿ. ತೋಟಗೇರ್, ಕರ್ನಾಟಕ ರಕ್ಷಣಾ ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಖಾಜಾವಲಿ, ಕೊಪ್ಪಳದ ರೋಟರಿ ಕ್ಲಬ್ ಅಧ್ಯಕ್ಷರಾದ ಚಿನ್ನಪ್ಪ ಭಾಗವಹಿಸಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.