GPAM CEO viewed the Shila monument at Gudda in the city of HRG
ಗಂಗಾವತಿ ತಾಲೂಕಿನ ಎಚ್ ಆರ್ ಜಿ ನಗರಕ್ಕೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ಗುಡ್ಡದಲ್ಲಿರುವ ಆದಿ ಮಾನವರ ವಾಸದ ನೆಲೆಯನ್ನು ಮಂಗಳವಾರ ವೀಕ್ಷಣೆ ಮಾಡಿದರು.
ಎಚ್ ಆರ್ ಜಿ ನಗರದ ಭೀಮಮ್ಮ ದೇವಸ್ಥಾನ ಮುಂದಿರುವ ಗುಡ್ಡದಲ್ಲಿ ಈ ಶಿಲಾ ಸ್ಮಾರಕಗಳು ಇವೆ. ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿಂದಿನ ಸ್ಮಾರಕಗಳು ಇವಾಗಿವೆ. ಐತಿಹಾಸಿಕ ಪ್ರಸಿದ್ಧಿ ಪಡೆದ ಹಿರೇಬೆಣಕಲ್ ಗ್ರಾಮದ ಮೋರೆರ ಬೆಟ್ಟದಲ್ಲಿ ಇರುವ ಸ್ಮಾರಕಗಳ ಮಾದರಿಯಂತೆ ಎಚ್ ಆರ್ ಜಿ ನಗರದ ಗುಡ್ಡದಲ್ಲಿ ಶಿಲಾ ಸ್ಮಾರಕಗಳು ಇರುವುದು ಇತ್ತೀಚೆಗೆ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ವೇಳೆ ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ, ಜಿಪಂ ಎಡಿಪಿಸಿ ಮಹಾಂತಸ್ವಾಮಿ, ನರೇಗಾ ಅಕೌಂಟ್ ಮ್ಯಾನೆಜರ್ ಪಂಪನಗೌಡ ಹಳೇಮನಿ, ಗ್ರಾಪಂ ಸಿಬ್ಬಂದಿಗಳಾದ ಮಂಜುನಾಥ ರೆಡ್ಡಿ, ಲಕ್ಷ್ಮಣ ಸೇರಿ ಇತರರು ಇದ್ದರು.