229ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
The 229th day of the strike was a success, with the removal of the Baldota.




229ನೇ ದಿನದ ಬಲ್ಡೋಟ ತೊಲಗಿಸಿ ಧರಣಿ ಯಶಸ್ವಿ

ಜಾಹೀರಾತು

ಕೊಪ್ಪಳ ಜನರ ಸೈರಣೆ ದುರ್ಬಲ ಎಂದುಕೊಳ್ಳಬಾರದು: ಪುಟ್ಟರಾಜ ಪಾಟೀಲ್

ಕೊಪ್ಪಳ: ಇಲ್ಲಿನ ಜನರು ಪರಿಸ್ಥಿತಿಗಾಗಿ ಕಾಯ್ದು ನೋಡುತ್ತಿದ್ದಾರೆ. ಲಕ್ಷಗಟ್ಟಲೆ ಜನ ಸಹಿಸಿಕೊಂಡಿದ್ದಾರೆ ಎಂದು ಯಾರೂ ತಿಳಿಯಬಾರದು ಎಂದು ನೈಸರ್ಗಿಕ, ಕಾಡು ಕೃಷಿಯ ಯಶಸ್ವಿ ರೈತ ಪುಟ್ಟರಾಜ ಪಾಟೀಲ್ ಧರಣಿ ವೇದಿಕೆಯಲ್ಲಿ ಮಾತನಾಡಿದರು.
ನಗರಸಭೆ ಆವರಣದ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ, ಬಸಾಪುರ ಕೆರೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ, ಮಾಲಿನ್ಯಕಾರಿ ಕಾರ್ಖಾನೆಗಳನ್ನು ಬಂದ್ ಮಾಡಿ, ತುಂಗಭದ್ರಾ ವಿಷಗೊಳಿಸಿದ ಘಟಕಗಳನ್ನು ಸೀಜ್ ಮಾಡಿ ಎಂದು 229ನೇ ದಿನದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದರು.

ಇಲ್ಲಿನ ಜನರ ಸೈರಣೆ, ಸಂಯಮ ದುರುಪಯೋಗವಾಗಬಾರದು, ಇದನ್ನು ದೌರ್ಬಲ್ಯವೆಂದು ತಿಳಿದುಕೊಂಡರೆ ಸರಿಯಾದ ಸಂದರ್ಭದಲ್ಲಿ ನಗರ ಮತ್ತು ಮಾಲಿನ್ಯದಿಂದ ಬೇಸತ್ತ ಗ್ರಾಮೀಣ ಜನ ಬೀದಿಗಿಳಿದು ಒತ್ತಡ ಸೃಷ್ಟಿ ತರುವುದು ಅನಿವಾರ್ಯವಾಗುತ್ತದೆ. ಆಗ ಎಲ್ಲಾ ಅಧಿಕಾರಸ್ಥರ ಸ್ಥಾನ ಪಲ್ಲಟವಾಗುವುದು ಖಚಿತ. ವಿರೋಧ ಪಕ್ಷಗಳೂ ಆಟ ನೋಡುತ್ತಾ ಕೂತಂತೆ ಕಾಣುತ್ತಿದೆ. ಸ್ಪಷ್ಟ ನಿಲುವಿನ ಹೆಜ್ಜೆ ಇಟ್ಟರಷ್ಟೆ ಈ ಪಕ್ಷಗಳನ್ನು ಜನ ನಂಬುತ್ತಾರೆ. ಅಡ್ಡ ಗೋಡೆ ಮೇಲೆ ದೀಪ ಇಡುವ ನಿಲುವಿನಿಂದ ಈ ಪಕ್ಷಗಳು ಹೊರಗೆ ಬರಲಿ ಎಂದರು.

ಧರಣಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಎಚ್.ಎಸ್. ಪಾಟೀಲ್, ಹಿರಿಯ ಪತ್ರಕರ್ತ ರಮೇಶ ಸುರ್ವೆ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ಹೋರಾಟಗಾರರಾದ ರಾಜಶೇಖರ ಏಳುಭಾವಿ, ಶಿವಪ್ಪ ಹಲಗೇರಿ, ಮಹದೇವಪ್ಪ ಮಾವಿನಮಡು, ಶಿವಪ್ಪ ಜಲ್ಲಿ, ಬಸವರಾಜಪ್ಪ ಶೆಟ್ಟರ್, ಹೆಗ್ಗಪ್ಪ ಲಿಂಗದಳ್ಳಿ ಬಸಾಪುರ, ಬಸವರಾಜ್ ಎಸ್. ಸಜ್ಜನ್ ಗೊಂಡಬಾಳ ಯಮನೂರಪ್ಪ ಹೊಸಮನಿ, ಶ್ರೀದೇವಿ ಹೊಸಮನಿ, ಪರಸಪ್ಪ ಕಿನ್ನಾಳ, ನಾಗಪ್ಪ ಗೋಡೆಕಾರ್, ಅಭಿಜಿತ್ ಅಂಡಗಿ ಮುಂತಾದವರು ಪಾಲ್ಗೊಂಡರು.

Total Views: 0
Share This Article