ಮೂಡಲಗಿಯಲ್ಲಿ ಪತ್ರಿಕಾ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟನೆ

Inauguration of Press Day celebrations and the induction ceremony of new office-bearers in Moodalagi.
ಮೂಡಲಗಿ: ಪತ್ರಕರ್ತರು ತಮ್ಮ ಜೀವನ ನಿರ್ವಹಣೆಯೊಂದಿಗೆ ಪತ್ರಿಕೋದ್ಯಮದ ಮೌಲ್ಯದ ವೃತ್ತಿ ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಯಾವುದಾದರು ವೃತ್ತಿ ಇದ್ದರೆ ಅದು ಪತ್ರಕರ್ತರಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಧೈರ್ಯದಿಂದ ಪ್ರಶ್ನೆ ಮಾಡುವ ಹಕ್ಕು ಪತ್ರಕರ್ತರಿಗೆ ಇದೆ. ಅದನ್ನು ಉಳಿಸುವ ಪ್ರವೃತ್ತಿ ಬೆಳಿಸಿಕೊಳ್ಳಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಹೇಳಿದರು.
ಪಟ್ಟಣದ ಶ್ರೀ ಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ತಾಲ್ಲೂಕು ಘಟಕ ಮೂಡಲಗಿ ಹಾಗೂ ಶ್ರೀ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ ಸಹಯೋಗದಲ್ಲಿ ಜರುಗಿದ ಪತ್ರಿಕಾ ದಿನಾಚರಣೆ ಮತ್ತು ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಂಘದ ಪತ್ರಕರ್ತರ ಮಕ್ಕಳ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಸಾಧನೆ ಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು, ಪತ್ರಿಕಾ ರಂಗದಲ್ಲಿ ಎಷ್ಟೇ ಬದಲಾವಣೆಗಳಾದರೂ ಸಹ ಜನರಲ್ಲಿ ಪತ್ರಿಕೆ ಓದುವುದು ಕಡಿಮೆ ಆಗಿಲ್ಲ. ಆದುದರಿಂದ ನಿಜವಾಗಿಯೂ ಕನ್ನಡ ಭಾಷೆ ಮತ್ತು ಸಾಹಿತ್ಯ ವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಹೇಳಿದವರು, ಪತ್ರಕರ್ತರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳನ್ನು ಒಳ್ಳೆಯ ಅಧಿಕಾರಿಯನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ಪತ್ರಕರ್ತರ ಅಭಿವೃದ್ಧಿಗಾಗಿ ಸಂಘದಿಂದ ಸಾಕಷ್ಟು ಹೋರಾಟದ ಫಲವಾಗಿ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್, ವಿಮೆ ಯೋಜನೆ ನೀಡಲಾಗುತ್ತಿದೆ. ಇನ್ನು ಅನೇಕ ಪತ್ರಕರ್ತರ ಬೇಡಿಕೆಗಳಿದ್ದು, ಹಂತ ಹಂತವಾಗಿ ಸರ್ಕಾರದ ಗಮನ ಸೆಳೆದು ಅವುಗಳನ್ನು ಕೂಡ ಪ್ರತಿಯೊಂದು ಪತ್ರಕರ್ತರಿಗೂ ತಲುಪುವಂತ ಕಾರ್ಯವನ್ನು ಸಂಘದಿಂದ ಮಾಡಲಾಗುವುದೆಂದು ಹೇಳಿದರು.
ಪತ್ರಕರ್ತರು ವಿಮರ್ಶಾತ್ಮಕ ಲೇಖನಗಳ ಮೂಲಕ ಸರಕಾರ ಮತ್ತು ಸಾರ್ವಜನಿಕರ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಸಿದಾಗ ಮಾತ್ರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರೆ ಪತ್ರಕರ್ತರಿಗೆ ಒಳ್ಳೆಯ ಗೌರವ ಸಿಗುತ್ತದೆ ಎಂದರು
ಕಾರ್ಯಕ್ರಮ ಉದ್ಘಾಟಿಸಿದ ಮೂಡಲಗಿ ಘಟಕದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, 94 ವಸಂತಗಳನ್ನು ಪುರೈಸಿದ ರಾಜ್ಯದಲ್ಲಿ ಸ್ವತಂತ್ರ ಪೂರ್ವದಲ್ಲಿಯೇ ಹುಟ್ಟಿಕೊಂಡಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘ ಈ ಸಂಘದ ಮೂಡಲಗಿ ತಾಲೂಕಾ ಘಟಕ ಒಳ್ಳೆಯರೀತಿಯಲ್ಲಿ ನಡೆಯುತ್ತಿದು, ನೂತನ ಪದಾಧಿಕಾರಿಗಳು ಸಹ ಎಲ್ಲರ ವಿಶ್ವಾಸ ತೆಗೆದುಕೊಂಡು ಸಂಘವನ್ನು ಮುನ್ನಡೆಸಬೇಕು, ಜಿಲ್ಲೆಯಲ್ಲಿ ಬಹಳ ದಿನಗಳಿಂದ ನಮ್ಮ ತಂದೆಯವರಾದ ಡಾ.ಭೀಮಶಿ ಲ.ಜಾರಕಿಹೊಳಿ ಜಿಲ್ಲಾಘಟಕವನ್ನು ನಡೆಸುಕೊಂಡು ಬಂದಿದ್ದಾರೆ, ಬರುವಂತ ದಿನಗಳಲ್ಲಿ ಪತ್ರಕರ್ತರಿಗೆ ಅನೇಕ ಒಳ್ಳೆಯ ಆಲೋಚನೆಗಳನ್ನು ಹೊಂದಿದ್ದಾರೆ ಎಂದ ಅವರು ಪತ್ರಕರ್ತರಿಗೆ ಯಾವತಿಗು ಕೂಡಾ ಏನೇ ತೊಂದರೆಯಾದ ಸಮಯದಲ್ಲಿ ಗಟ್ಟಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿಲ್ಲುತದೆ, ಪತ್ರಕರ್ತರಿಗೆ ಬಸ್ ಪಾಸ್, ವಿಮೆ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ರಾಜ್ಯದಲ್ಲಿ ರಾಜ್ಯ ಘಟಕ, ಜಿಲ್ಲಾ ಘಟಕ ಮತ್ತು ತಾಲೂಕ ಘಟಕದಲ್ಲಿ ೨೦೨೬-೨೮ ರ ಅವಧಿಗೆ ಅವರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೂಡ ಮಾತನಾಡಿ, ಪತ್ರಕರ್ತರು ಸಮಾಜ ಅಭಿವೃದ್ಧಿ ಸುದ್ದಿಗಳ ಜೊತೆಗೆ ಕ್ರೈಂ ಸುದ್ಧಿಗಳನ್ನು ಸಮಗ್ರವಾಗಿ ಪ್ರಸಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತ ಕಾರ್ಯವಾಗಬೇಕು ಎಂದರು.
ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುಲಕೇಶ ಸೋನವಾಲಕರ ಮಾತನಾಡಿ, ಪತ್ರಕರ್ತರ ಈ ಹಿಂದೆ ಸಹಾಯ ಸಹಕಾರ ನೀಡುತ್ತಾ ಬಂದಿದು ಮುಂದೆಯು ನಮ್ಮ ಸಂಸ್ಥೆಯಿಂದ ಸಹಾಯ ಸಹಕಾರ ನೀಡುವುದಾಗಿ ಬರವಸೆ ನೀಡಿದರು.
ಅತಿಥಿ ಕಾನಿಪ ಸಂಘದ ರಾಜ ಘಟಕದ ಕಾರ್ಯದರ್ಶಿ ಪುಂಡಲೀಕ ಬಾಳೋಜಿ ಮತ್ತು ಕಾನಿಪ ಮೂಡಲಗಿ ತಾಲೂಕಾ ಘಟಕದ ನೂತನ ಅಧ್ಯಕ್ಷ ವೆಂಕಟೇಶ ಮಾತನಾಡಿ, ಸಂಘಟನೆ ಬೆಳೆಯಲು ಎಲ್ಲರ ಸಹಾಯ ಸಹಕಾರ ಅತ್ಯವಶಕ ಎಂದರು.
ಮೂಡಲಗಿ ತಾಲೂಕಾ ಘಟಕದ ನೂತನ ಪದಾಧಿಕಾರಿಗಳಾದ ವೆಂಕಟೇಶ ಬಾಲರಡ್ಡಿ(ಅಧ್ಯಕ್ಷ), ರಾಜಶೇಖರ ಮಗದುಮ್(ಉಪಾಧ್ಯಕ್ಷ), ಸುಧಾಕರ ಉಂದ್ರಿ (ಪ್ರಧಾನ ಕಾರ್ಯದರ್ಶಿ), ಸುಭಾಸ ಗೋಡ್ಯಾಗೋಳ, ಮಹಾದೇವ ನಡುವಿನಕೇರಿ (ಕಾರ್ಯದರ್ಶಿ) ಮತ್ತು ಶಿವಾನಂದ ಮರಾಠೆ (ಖಜಾಂಚಿ) ಇವರುಗಳಿಗೆ ಕಾನಿಪ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೆಶ ಅವರು ಪ್ರತಿಜ್ಞಾವಿಧಿ ಬೋಧಿಸಿ ಪದಗ್ರಹಣ ನೆರವೇರಿಸಿದರು.
ಸಮಾರಂಭದ ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಕಾರ್ಯ ಕಾರಿಣಿ ಸದಸ್ಯರಾದ ಮಲ್ಲಿಕಾರ್ಜುನರಡ್ಡಿ ಗೊಂದಿ, ದೇವರಾಜ, ಕಾನಿಪ ಬೆಳಗಾವಿ ಜಿಲ್ಲಾ ಘಟಕದ ಸದಸ್ಯ ಕೃಷ್ಣಪ್ಪ ಗಿರೆಣ್ಣವರ, ಶಿವಾನಂದ ತಾರಿಹಾಳ, ಗೋಕಾಕ ಘಟಕದ ಅಧ್ಯಕ್ಷ ಗುರುರಾಜ ಪುಜೇರಿ, ಮೂಡಲಗಿ ಬಿಇಒ ಪ್ರಕಾಶ ಹಿರೇಮಠ, ಸಿಡಿಪಿಒ ಯಲ್ಲಪ್ಪ ಗದಾಡಿ, ಉಪನೋಂಧಣಾಧಿಕಾರಿ ಡಿ.ಕೆ.ಕುಳ್ಳೂರ, ಪಿಎಸ್‌ಐ ರಾಜು ಪೂಜಾರಿ, ಸಾಯಿ ಕಾಲೇಜಿನ ಪ್ರಾಚಾರ್ಯ ಎಸ್.ಜಿ.ಹುಬ್ಬಳ್ಳಿ, ಮಂಜುಳಾ ಸೋನವಾಲಕರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಂಘದ ಸದಸ್ಯರು ಮತ್ತು ಪತ್ರಕರ್ತರು ಮತ್ತಿತರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲ್ಲಾಯಿತು. 60 ವಸಂತಗಳನ್ನು ಪೂರೈಸಿರು ಎಲ್.ಸಿ.ಗಾಡವಿ ಅವರುನ್ನು, ವಿದೇಶ ಪ್ರವಾಸ ಪೂರೈಸಿದ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಾಲಶೇಖರ ಬಂದಿ
ಹಾಗೂ ಎಲ್ಲಾ ಪತ್ರಕರ್ತರನ್ನು ಸತ್ಕರಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಾಲಶೇಖರ ಬಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಾಯಿ ಪ.ಪೂ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರಾರ್ಥಿಸಿದರು, ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮಲ್ಲು ಬೋಳನ್ನವರ ಸ್ವಾಗತಿಸಿದರು, ಶಿಕ್ಷಕ ಆನಂದ ಬಡಿಗೇರ ನಿರೂಪಿಸಿದರು, ನ್ಯಾಯವಾದಿ ಲಕ್ಷ್ಮಣ ಅಡಿಹುಡಿ ವಂದಿಸಿದರು.
: ಪತ್ರಕರ್ತರು ತಮ್ಮ ಜೀವನ ನಿರ್ವಹಣೆಯೊಂದಿಗೆ ಪತ್ರಿಕೋದ್ಯಮದ ಮೌಲ್ಯದ ವೃತ್ತಿ ಕಾಪಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಯಾವುದಾದರು ವೃತ್ತಿ ಇದ್ದರೆ ಅದು ಪತ್ರಕರ್ತರಿಂದ ಮಾತ್ರ ಸಾಧ್ಯ. ಸಮಾಜದಲ್ಲಿ ಯಾವುದೇ ಘಟನೆಗಳು ನಡೆದಾಗ ಧೈರ್ಯದಿಂದ ಪ್ರಶ್ನೆ ಮಾಡುವ ಹಕ್ಕು ಪತ್ರಕರ್ತರಿಗೆ ಇದೆ. ಅದನ್ನು ಉಳಿಸುವ ಪ್ರವೃತ್ತಿ ಬೆಳಿಸಿಕೊಳ್ಳಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಹೇಳಿದರು.