Breaking News

ಅದ್ದೂರಿ ಮೆರವಣಿಗೆ ಮೂಲಕ ನೂತನ ರಥವನ್ನುಕೊಂಡ್ಯೋತ್ತಿರುವ,,! ಭಕ್ತರು

Bringing the new chariot through a grand procession,! Devotees

ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.

ಅದಕ್ಕೆ ನಮ್ಮ ಉತ್ತರ ಕರ್ನಾಟಕ ಹೊರತೆನು ಇಲ್ಲಾ, ಇಲ್ಲಿ ದೇವಸ್ಥಾನ, ದೇವರ ಕಾರ್ಯವೆಂದರೇ ತಮ್ಮನ್ನೇ ತಾವು ಅರ್ಪಣೆ ಮಾಡಿಕೊಂಡು ದೇವಸ್ಥಾನಗಳ ಜಿರ್ಣೋದ್ದಾರಕ್ಕೆ ನಿಂತವರ ಉದಾಹರಣೆಗಳು ಸಾಕಷ್ಟೀವೆ.

ಹೌದು,,,! ಅದಕ್ಕೆ ನಿದರ್ಶನವೆಂಬಂತೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಗೇದಗೇರಿ ಗ್ರಾಮ.

ಗೆದಗೇರಿ ಗ್ರಾಮದ ಶರಣಬಸವೇಶ್ವರನ ರಥೋತ್ಸವವು ಪ್ರತಿ ವರ್ಷ ಫೆಬ್ರವರಿ ತಿಂಗಳು ಭಾರತ ಹುಣ್ಣಿಮೆಯಂದು ಜರುಗುತ್ತದೆ. ಈ ರಥೋತ್ಸವದ ರಥವು ಹಳೆಯದಾಗಿದ್ದರಿಂದ ಗ್ರಾಮಸ್ಥರೆಲ್ಲರು ಸೇರಿ ನೂತನ ರಥವನ್ನು ಮಾಡಿಸಲು ಮುಂದಾಗಿ ಇಂದು ಗ್ರಾಮಕ್ಕೆ ನೂತನ ರಥವನ್ನು ಅತಿ ವಿಜೃಂಭಣೆಯಿಂದ, ಮಹಿಳೆಯರ ಕಳಸ ಕನ್ನಡಿ, ಯುವಕರ ಹೆಜ್ಜೆ ಕುಣಿತ, ಡೊಳ್ಳು, ಭಾಜಾ ಭಜೇಂತ್ರಿಯೊಂದಿಗೆ ಅತಿ ವೈಭವದಿಂದ ಕೊಂಡ್ಯೊಯುತ್ತಿದ್ದಾರೆ.

ಇದು ಪುಟ್ಟ ಗ್ರಾಮವಾದರು ಇಲ್ಲಿ ಜಾತಿ, ಭೇದವೆನ್ನದೇ ಪ್ರತಿಯೊಂದು ಮನಸುಗಳು ಒಂದುಗೂಡಿ, ಶರಣಬಸವೇಶ್ವರನ ಜಾತ್ರೆಯನ್ನು ನೆರವೇರಿಸುವದರ ಜೊತೆಗೆ ಉಚಿತ ಸಾಮೂಹಿಕ ವಿವಾಹ ನಡೆಸಿ ಆಗಮಿಸಿದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆಯನ್ನು ನೆರವೇರಿಸುತ್ತಾರೆ.

ಈ ನೂತನ ರಥವನ್ನು ಕುಂದಗೋಳ ತಾಲೂಕ ಮಳಲಿಯ ರವಿ ನಾಗಪ್ಪ ಬಡಗೇರ ಇವರು ನಿರ್ಮಾಣ ಮಾಡಿದ್ದು ಸುಮಾರು 45 ಲಕ್ಷ ರೂಪಾಯಿಗಳಿಂದ ತಯಾರಿಸಲಾಗಿದೆ. ಈ ರಥವನ್ನು ಸಂಪೂರ್ಣ ಸಾಗವಾನಿಯಿಂದ ತಯಾರಿಸಲಾಗಿದೆ. ಈ ನೂತನ ರಥ ತಯಾರಿಕೆಗೆ ಗೆದಗೇರಿಯ ಸಮಸ್ತ ಭಕ್ತಾಧಿಗಳು ದೇಣಿಗೆ ನೀಡಿ ಸಹಕರಿಸಿದ್ದಾರೆ ಎಂದು ಗೆದಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಶರಣಪ್ಪ ಕೊಪ್ಪದ ತಿಳಿಸಿದರು.

ನಂತರದಲ್ಲಿ ಶಿಕ್ಷಕ ಶರಣಪ್ಪ ಇಟಗಿ ಮಾತನಾಡಿ ಈ ರಥವನ್ನು ಕುಂದಗೋಳ ತಾಲೂಕಿನ ಮಳಲಿಯಲ್ಲಿ ನಿರ್ಮಿಸಿದ್ದು ಇದನ್ನು ಶಿಗ್ಗಾವಿ, ಹುಬ್ಬಳ್ಳಿ, ಗದಗ, ಅಣ್ಣಿಗೇರಿ ಮಾರ್ಗವಾಗಿ ಭಾನಾಪೂರ, ಮಸಬಹಂಚಿನಾಳ, ಕುಕನೂರು, ಯಲಬುರ್ಗಾದಿಂದ ಗೆದಗೇರಿಗೆಯ ಶರಣ ಬಸವೇಶ್ವರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರು.

ನಮ್ಮ ಗ್ರಾಮದ ಎಲ್ಲಾ ಸಮಾಜದವರು ಸೇರಿ ನೂತನ ರಥ ನಿರ್ಮಾಣಕ್ಕೆ ತಮ್ಮ ತನು, ಮನ, ಧನದಿಂದ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ನಮ್ಮ ಗ್ರಾಮವು ಭಾವೈಕ್ಯತೆ ಗ್ರಾಮವಾಗಿದ್ದು ಇಲ್ಲಿ ಜಾತ್ರೆ ಹಬ್ಬ, ಹರಿದಿನಗಳಂತ ಉತ್ಸವವನ್ನು ಎಲ್ಲರು ಸೇರಿ ನಡೆಸುತ್ತೇವೆ. ಇಂದು ಈ ನೂತನ ರಥವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಸಪ್ಪ ಬೆದವಟ್ಟಿ, ರುದ್ರಪ್ಪ ಕೊಪ್ಪದ, ವಿರೇಶಗೌಡ್ರ, ಬಸವರಾಜ ಹಳೇಗೌಡ್ರ, ಹನುಮಂತಪ್ಪ ಹಳೇಗೌಡ್ರ, ರುದ್ರಪ್ಪ ನಡುವಿನಮನಿ, ಅಲ್ಲಾಸಾಬ ಮ್ಯಾಗಳಮನಿ, ಶರಣಪ್ಪ ಕುದರಿ, ಕಳಕಪ್ಪ ಬಂಡಿ, ಅಶೋಕ ಕೋಳಿಹಾಳ, ಜಗದೀಶ, ವೀರಪ್ಪ ಬತ್ತಿ, ಶರಣಪ್ಪ ಬಳಿಗಾರ, ಸುರೇಶ ಗೋಸಾವಿ, ಶೇಖಪ್ಪ ಮರದ, ಪ್ರಕಾಶ ಕುರ್ನಾಳ, ಮಂಜುನಾಥ ಮಾಸ್ತಿ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ವಿವಿಧ ಸಂಘದವರು, ಯುವಕರು ಇದ್ದರು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *