When you get the bank app link on your mobile, beware that your account is not verified.

9.7 ಲಕ್ಷ ರೂ. ಆನ್ ಲೈನ್ ವಂಚನೆ ಗ್ರಾಹಕರಿಗೆ ಎಚ್ಚರಿಕೆ ಘಂಟೆ,,,

ಯಾವುದೇ ಬ್ಯಾಂಕ್ ಆ್ಯಪ್ ಲಿಂಕ್ ಬಳಸುವ ಮುನ್ನ ಎಚ್ಚರ,,
ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಹೂವಿನಹಡಗಲಿ ವ್ಯಕ್ತಿಯೊರ್ವರ ಸ್ಥಳೀಯ ಕೆನರಾ ಬ್ಯಾಂಕ್ ಶಾಖೆಯ ಖಾತೆಯಲ್ಲಿದ್ದ ಗ್ರಾಹಕರ 9.7 ಲಕ್ಷ ರೂ. ಹಣವನ್ನು ಆನ್‌ಲೈನ್ ವಂಚನೆ ಮೂಲಕ ಲಪಟಾಯಿಸಿರುವ ಪ್ರಕರಣ ಜರುಗಿದೆ.
ತಾಲೂಕಿನ ನಂದಿಹಳ್ಳಿ ಗ್ರಾಮದ ಕಂಠಿ ವಿರೂಪಾಕ್ಷ ಹಣ ಕಳೆದುಕೊಂಡ ಗ್ರಾಹಕ. ಕೆನರಾ ಬ್ಯಾಂಕ್ ಲೋಗೋ ಇರುವ ಆ್ಯಪ್‌ನ ಲಿಂಕ್ ಇವರ ಮೊಬೈಲ್ ಗೆ ಬಂದಿದೆ. ಬ್ಯಾಂಕ್ ಸಂದೇಶವೆಂದು ತಿಳಿದು ಗ್ರಾಹಕ ಆ ಲಿಂಕನ್ನು ಬಳಸಿ ಈ ಆ್ಯಪ್ ನ್ನು ಡೌನ್ ಲೋಡ್ ಮಾಡಿದ್ದಾರೆ. ಇದಾಗಿ 30 ನಿಮಿಷದೊಳಗೆ ಖಾತೆಯಲ್ಲಿದ್ದ ಎಲ್ಲ ಹಣವನ್ನು ವಂಚಕರು ದೋಚಿದ್ದಾರೆ.
ಖಾತೆಯಲ್ಲಿನ ಹಣ ಕಡಿತಗೊಂಡ ಬಗ್ಗೆ ಯಾವ ಸಂದೇಶ ಗ್ರಾಹಕನಿಗೆ ಬಾರದ ರೀತಿಯಲ್ಲಿ ಈ ವಂಚನೆ ನಡೆದಿದೆ.
ಆಗ ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ 12 ಬಾರಿ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಹಣ ಡ್ರಾ ಮಾಡಿರುವ ಕುರಿತು ಮಾಹಿತಿ ಸಿಕ್ಕಿದೆ.
ಆರ್ಥಿಕ ಸಂಕಷ್ಟದಲ್ಲಿರುವ ರೈತ ವಿರೂಪಾಕ್ಷ ಅವರು ಈಚೆಗೆ ತಮ್ಮ ಜಮೀನು ಮಾರಾಟ ಮಾಡಿದ್ದರು. ಎರಡು ದಿನಗಳ ಹಿಂದೆ ಖರೀದಿದಾರರು ರೈತನ ಖಾತೆಗೆ 9.7 ಲಕ್ಷ ರೂ. ಹಣ ಜಮೆ ಮಾಡಿದ್ದರು. ಇನ್ನಷ್ಟು ಹಣ ಜಮೆ ಆಗುವುದಿತ್ತು.
ಮೊಬೈಲ್ ಗೆ ಬಂದ ಲಿಂಕ್ ಹಣ ಜಮೆ ಮಾಡಿರುವ ಕುರಿತಾಗಿರಬಹುದೆಂದು ನಂಬಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡೆ ಆದರೆ ಇದನ್ನು ದುರ್ಬಳಕೆ ಮಾಡಿಕೊಂಡಿರುವ ವಂಚಕರು ಈ ರೀತಿ ವಂಚನೆ ಮಾಡಿದ್ದಾರೆ ಎಂದು ವಿರೂಪಾಕ್ಷಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬ್ಯಾಂಕ್ ಖಾತೆಗಳಿಗೆ ಕನಿಷ್ಠ ರಕ್ಷಣೆ ಇಲ್ಲವೆಂದಾದರೆ ಬ್ಯಾಂಕಿನ ಮೂಲಕ ಹೇಗೆ ವ್ಯವಹಾರ ನಡೆಸಬೇಕು. ಖಾತೆಯಿಂದ ಹಣ ವರ್ಗಾವಣೆಗೆ ಒಟಿಪಿ ಕಡ್ಡಾಯವಾಗಿದ್ದು, ಈಗ ಒಟಿಪಿ ಪಡೆಯದೇ ಹಣ ಲಪಟಾಯಿಸುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಇಂತಹ ಪ್ರಕರಣಗಳಿಗೆ ಬ್ಯಾಂಕ್ ಸಿಬ್ಬಂದಿ, ಸರ್ಕಾರ ಕಡಿವಾಣ ಹಾಕಬೇಕು.