City Civil Court orders not to broadcast any news related to CP, Yogeshwar family
ಬೆಂಗಳೂರು, ನ, 2; ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಸುದ್ದಿ ಪ್ರಕಟಿಸದಂತೆ ಸಿಟಿ ಸಿವಿಲ್ ಕೋರ್ಟ್ ನಿರ್ಬಂಧ ಹೇರಿದೆ.
ಸಿ.ಪಿ. ಯೋಗೇಶ್ವರ್ ಮತ್ತು ಶೀಲಾ ಯೋಗೇಶ್ವರ್ ಅವರ ಮನವಿ ಮೇರೆಗೆ ವಿವಿಧ ಸುದ್ದಿವಾಹಿನಿಗಳು, ವೆಬ್ ಸೈಟ್ ಗಳು, ಯೂಟ್ಯೂಬ್ ವಾಹಿನಿಗಳಲ್ಲಿ ಈ ಹಿಂದೆ ಪ್ರಸಾರವಾಗಿದ್ದ ವಿಡಿಯೋಗಳು ಸ್ಥಗಿತಗೊಳಿಸುವುದು, ಸಾಮಾಜಿಕ ಜಾಲತಾಣಗಳು, ಒಳಗೊಂಡಂತೆ ಎಲ್ಲಾ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಯೋಗೇಶ್ವರ್ ಕುಟುಂಬಕ್ಕೆ ಸಂಬಂಧಿಸಿದಂತೆ ಮುಂದಿನ ಆದೇಶದವರೆಗೆ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು ನ್ಯಾಯಪೀಠ ಆದೇಶಿಸಿದೆ.