Breaking News

ಚಿಕ್ಕಬಗನಾಳ:ಇಂದಿನಿಂದ ದುರ್ಗಾದೇವಿ ಹಾಗೂ ಕೆಂಚಮ್ಮ ದೇವಿಯ ಜಾತ್ರೆ

Chikkabaganala: Goddess Durga and Kenchamma Devi fair from today

ಜಾಹೀರಾತು

ಕೊಪ್ಪಳ : ತಾಲ್ಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿ ಹಾಗೂ ಕೆಂಚಮ್ಮ ದೇವಿ ಜಾತ್ರಾ ಮಹೋತ್ಸವ ಜ.10 ಹಾಗೂ 11 ರಂದು ಎರಡು ದಿನಗಳ ಕಾಲ ಸಹಸ್ರ ಭಕ್ತರ ಮಧ್ಯ ನಡೆಯಲಿದೆ.

ಜಾತ್ರೆ ಅಂಗವಾಗಿ ಡಿ.10 ರಂದು ಗ್ರಾಮದ ಸಕಲ ಸದ್ಬಕ್ತರೊಂದಿಗೆ, ಬಾಜಾ ಭಜಂತ್ರಿ ಡೊಳ್ಳು ಕುಣಿತ ಸಮೇತ ಮುತ್ತೈದೆಯರ ಕಳಸದೊಂದಿಗೆ ರಾಜಬೀದಿಯಲ್ಲಿ ದೇವಿಯ ಭವ್ಯ ಮೆರವಣಿಗೆಯ ಮೂಲಕ ಗಂಗೆ ಸ್ಥಳಕ್ಕೆ ಹೋಗುವುದು. ಡಿ.11 ರಂದು ಶ್ರೀದೇವಿಗೆ ಮಹಾಮಂಗಳಾರತಿ, ಗ್ರಾಮದ ಭಕ್ತಾಧಿಗಳಿಂದ ಉಡಿ ತುಂಬುವುದು, ದೀಡನಮಸ್ಕಾರ ಹಾಕುವುದು ಹಾಗೂ ಮಹಾಪ್ರಸಾದ ಜರುಗಲಿದೆ.

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಿ, ನೊಂದ ಭಕ್ತರು ಬೇಡಿದ್ದನ್ನು ದಯಪಾಲಿಸುವ ಅವತಾರ ಶಕ್ತಿ. ಪರಿಹಾರ ಕಂಡುಕೊಂಡ ಭಕ್ತರು ನಿತ್ಯ ಸ್ಮರಣೆಯೊಂದಿಗೆ ಜಾತ್ರೆ ದಿನದಂದು ದಿಡ್‌ ನಮಸ್ಕಾರ, ಉಡಿ ತುಂಬುವ ಮತ್ತಿತರ ಭಕ್ತಿ ಸೇವೆಗೈಯತ್ತಾರೆ. ದೇವಿ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಹ ಕುಟುಂಬದೊಂದಿಗೆ ಆಗಮಿಸುವುದು ವಿಶೇಷ.

ಡಿ.11 ರಂದು ರಾತ್ರಿ ಶ್ರೀ ನರಸಿಂಹೇಶ್ವರ ನಾಟ್ಯ ಸಂಘದಿಂದ ಸಿಡಿದೆದ್ದ ಸೂರ್ಯಚಂದ್ರ ಅರ್ಥಾತ್‌ ರಕ್ತ ಕಣ್ಣೀರು ಉಚಿತ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆ ಪೂರ್ತಿ ವಿವಿಧ ತರಹದ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ರಸ್ತೆಗಳು ಕಂಗೊಳಿಸುತ್ತಿವೆ.

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *