

ನರೇಗಾ ಯೋಜನೆಯಡಿ ವಿಕಲಚೇತನರಿಗೆ ನ್ಯಾಯ ಒದಗಿಸಿ. ಗ್ರಾಮ ಪಂಚಾಯತ್ ಎದುರು ಧರಣಿ ಮನವಿ: ಅಧ್ಯಕ್ಷ ದುರುಗಪ್ಪ.ಪಿ ಹಣವಾಳ

Provide justice to the disabled under the NREGA scheme. Protest in front of the Gram Panchayat: President Durugappa.P. Hanawala
ಗಂಗಾವತಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ವಿಕಲಚೇತನ ಕೂಲಿಕಾರರಿಗೆ ನೀಡಬೇಕಾದ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಪ್ರಜಾ ಸಂಘ (ಭೀಮ ನಡೆ) ರಾಜ್ಯ ಸಮಿತಿ ವತಿಯಿಂದ ದಿನಾಂಕ: 03-06-2026 ರಂದು ಹಣವಾಳ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಧರಣಿ ಹಮ್ಮಿಕೊಳ್ಳಲಾಗಿತ್ತು.
ಸರ್ಕಾರದ ಆದೇಶದಂತೆ ವಿಕಲಚೇತನ ಕೂಲಿಕಾರರಿಗೆ ದಿನವೊಂದಕ್ಕೆ 375 ರೂಪಾಯಿ ವೇತನ ನೀಡಬೇಕಾಗಿದೆ. ಆದರೆ, ಹಣವಾಳ ಗ್ರಾಮ ಪಂಚಾಯತ್ ನಲ್ಲಿ ಸರಿಯಾದ ರೀತಿಯಲ್ಲಿ ವೇತನ ಪಾವತಿ ಆಗುತ್ತಿಲ್ಲ.ಕಡಿಮೆ ವೇತನ ಪಾವತಿಸುವ ಮೂಲಕ ವಿಕಲಚೇತನರಿಗೆ ಹಾಗೂ ಕೂಲಿಕಾರರಿಗೆ ಅನ್ಯಾಯ ಆಗುತ್ತಿದೆ. ಮಳೆ-ಬೆಳೆ ಇಲ್ಲದ ಸಂಕಷ್ಟದ ಸಮಯದಲ್ಲಿ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿರುವವರಿಗೆ ಈ ರೀತಿಯ ಅನ್ಯಾಯ ನಡೆಯುತ್ತಿರುವುದು ಖಂಡನೀಯ ಎಂದು ಸಂಘಟನೆಯ ಅಧ್ಯಕ್ಷರಾದ ದುರುಗಪ್ಪ ಪಿ ಹಣವಾಳ ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿಯಾಗಿ ನಮ್ಮ ಬೇಡಿಕೆಗಳಾದ ವಿಕಲಚೇತನರಿಗೆ ಪ್ರತಿವರ್ಷ 125 ದಿನಗಳ ಕಡ್ಡಾಯ ಕೆಲಸ ನೀಡಬೇಕು.
ಸರ್ಕಾರದ ಆದೇಶದಂತೆ ವಿಕಲಚೇತನರಿಗೆ ನಿಗದಿತ ಕೂಲಿ ಹಣವನ್ನು ತಕ್ಷಣ ಪಾವತಿಸಬೇಕು.
ಕೂಲಿ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಪೆಂಡಲ್ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಬೇಕು.
ವಿಕಲಚೇತನರಿಗೆ ಪ್ರತ್ಯೇಕವಾದ ಜಾಬ್ ಕಾರ್ಡ್‌ಗಳನ್ನು ವಿತರಿಸಬೇಕು.
ಕೆಲಸ ಸಿಗದ ಅವಧಿಗೆ ನಿರುದ್ಯೋಗ ಭತ್ಯೆಯನ್ನು ಪಾವತಿಸಬೇಕು.
ಈ ಧರಣಿಯಲ್ಲಿ ಭಾರತೀಯ ಪ್ರಜಾ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ವಿಕಲಚೇತನ ಫಲಾನುಭವಿಗಳು ಪಾಲ್ಗೊಂಡು.ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಬಗೆಹರಿಸಬೇಕು , ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕಿರಣ್ ಕುಮಾರ ಅವರು ಮನವಿಯನ್ನು ಸ್ವೀಕರಿಸಿದ ನಂತರ ಮಾತನಾಡಿ ಈಗಾಗಲೇ ಇವರ ಪ್ರಮುಖ ಬೇಡಿಕೆಗಳು ಚಾಲ್ತಿಯಲ್ಲಿವೆ. ವೇತನದಲ್ಲಿ ತಾರತಮ್ಯವಾಗಿಲ್ಲ.ಇವರ ಮನವಿಯನ್ನು ನಮ್ಮ ಮೇಲಾಧಿಕಾರಿಗಳಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದೊಡ್ಡಬಸಪ್ಪ.ಈಶ್ವರಮ್ಮ.ಹುಸೇನಪ್ಪ.
ಹುಲಿಗೆಮ್ಮ ಸೇರದಂತೆ ಸಂಘಟನೆ ಪದಾಧಿಕಾರಿಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಕಾರ್ಯನಿರ್ವಾಹಕ ಅಧಿಕಾರಿಗಳು ಗಂಗಾವತಿ ರವರಿಗೆ ಮನವಿ ಪತ್ರ ಸಲ್ಲಿಸಿದರು.
