Breaking News

ತಳಕಲ್‌ನಲ್ಲಿ ಪೋಷಣ್ ಅಭಿಯಾನಮಾಸಾಚರಣೆ ಕಾರ್ಯಕ್ರಮ

Poshan Abhiyan Month Celebration Program at Talakal

ಜಾಹೀರಾತು


ಕೊಪ್ಪಳ, ಸೆಪ್ಟಂಬರ್ ೧೦ (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ತಳಕಲ್ ಹೆರಿಗೆ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ತಳಕಲ್‌ನ 06ನೇ ಅಂಗನವಾಡಿ ಕೇಂದ್ರದಲ್ಲಿ “ಪೋಷಣ್ ಅಭಿಯಾನ ಮಾಸಾಚರಣೆ” ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಕಾರ್ಯಕ್ರಮದ ಉದ್ಘಾಟಿಸಿದರು. ಬಳಿಕ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸೆಪ್ಟೆಂಬರ್ 01 ರಿಂದ ಸೆ.31ರ ವರೆಗೆ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ಉದ್ದೇಶ ಗರ್ಭಿಣಿ ಸ್ತ್ರೀಯರಲ್ಲಿ, ಹಾಲುಣಿಸುವ ತಾಯಂದಿರಲ್ಲಿ, ಹದಿ-ಹರೆಯದವರಲ್ಲಿ ರಕ್ತಹೀನತೆ ತಡೆಗಟ್ಟುವ ಬಗ್ಗೆ ಹಾಗೂ 5 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಹೊಗಲಾಡಿಸುವ ನಿಟ್ಟಿನಲ್ಲಿ, ಪೌಷ್ಠಿಕ ಆಹಾರ ಸೇವನೆಯ ಕುರಿತು ಜಾಗೃತಿ ಮೂಡಿಸುವುದಾಗಿದೆ. ಅಪೌಷ್ಠಿಕತೆಯಿಂದ ಉಂಟಾಗುವ ತೊಂದರೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿಗಳು 2018ರ ಮಾರ್ಚ್ 8ರಂದು ರಾಜಸ್ಥಾನದ ರಾಜ್ಯದಲ್ಲಿ ಚಾಲನೆ ನೀಡಿದರು. ಅಂದಿನಿಂದ ಇವತ್ತಿನ ವರೆಗೂ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ “ಪೋಷಣ್ ಅಭಿಯಾನ ಮಾಸಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಪ್ರತಿಯೊಬ್ಬ ಗರ್ಭಿಣಿ-ಬಾಣಂತಿಯರು, ಹಾಲುಣಿಸುವ ತಾಯಂದಿರು, ಹದಿ-ಹರೆಯದವರು ಹಾಗೂ ವಿಶೇಷವಾಗಿ 05 ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆಯನ್ನು ತಡೆಗಟ್ಟಲು ಪೌಷ್ಠಿಕ ಆಹಾರ ಅವಶ್ಯಕತೆ ಇರುತ್ತದೆ. ಪ್ರತಿ ದಿನ ತಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೆಟ್ಸ್, ಪ್ರೋಟಿನ್, ಕೊಬ್ಬು, ವಿಟಾಮಿನ್ಸ್ ಮತ್ತು ಮಿನರಲ್ಸ್ ಎಲ್ಲಾ ಬಗೆಯ ಸೊಪ್ಪು ಮತ್ತು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಹಾಲಿನ ಉತ್ಪನಗಳು, ಮೊಟ್ಟೆ, ಮೀನು ಮತ್ತು ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಗರ್ಭಿಣಿಯರು, ಹದಿ-ಹರೆಯದವರು ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಕಬ್ಬಿಣಾಂಶ ಮಾತ್ರೆ ತೆಗೆದುಕೊಳ್ಳಬೇಕು. ಮನೆಯಲ್ಲಿ ವಯಕ್ತಿಕ ಸ್ವಚ್ಛತೆ ಕಾಪಾಕುವುದರ ಜೊತೆಗೆ ಶುದ್ಧವಾದ ನೀರು ಕುಡಿಯಬೇಕು, ಆಯೋಡಿಯುಕ್ತ ಉಪ್ಪು, ಮೊಳೆಕೆ ಬರಿಸಿದ ಕಾಳು, ಎಲ್ಲಾ ಬಗೆಯ ಹಸಿರು ಸೊಪ್ಪು, ಮೊಟ್ಟೆ ದಿನನಿತ್ಯದ ಆಹಾರದಲ್ಲಿ ಬಳಸಿ, ಗರ್ಭಿಣಿ-ಬಾಣಂತಿರು ಪೌಷ್ಠಿಕ ಆಹಾರ ಸೇವಿಸಿ, ರಕ್ತಹೀನತೆ ತಡೆಗಟ್ಟಬೇಕೆಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾ ಮೋಚಿ ಅವರು ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟಲು ಏಕದಳ ದಾನ್ಯಗಳಿಂದ ತಯಾರಿಸುವ ವಿವಿಧ ಖಾದ್ಯಗಳ ಕುರಿತು ಮತ್ತು ಶಾಲಾ ಪೂರ್ವಶಿಕ್ಷಣ ಕುರಿತು ವಿವರವಾಗಿ ಮಾತನಾಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ ಕುಮಾರ ಅವರು ಮಕ್ಕಳ ಸ್ವಚ್ಛತೆ ಮತ್ತು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ.ಆ.ಅಧಿಕಾರಿಗಳಾದ ಅನ್ನಪೂರ್ಣ, ಆಶಾ ಕಾರ್ಯಕರ್ತೆಯರಾದ ಗೀತಾ ಬಾರಕೇರ್, ಗ್ರಾಮದ ಮುಖಂಡರಾದ ಅನ್ನಪೂರ್ಣ ಕೆ, ಲಕ್ಮೀ ಬಾಯಿ ಸೇರಿದಂತೆ ಗ್ರಾಮದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ತಾಯಂದಿಯರು, ಕಿಶೋರಿಯರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.