Farmers blocked the road to provide adequate water to the 85 mile canal
ಮಾನ್ವಿ:ಪಟ್ಟಣದ ನೀರಾವರಿ ಇಲಾಖೆ ಹತ್ತಿರದ ರಾಯಚೂರು-ಸಿಂಧನೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಕರ್ನಾಟಕ ರೈತ ಸಂಘ ಹಾಗೂ ಜನಸೇವಾ ಫೌಂಡೇಶನ್ ವತಿಯಿಂದ ಮಾನ್ವಿ ಪಟ್ಟಣದ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ನೀರು ಹರಿಸುವ 85 ಮೈಲ್ ಡಿಸ್ಟೂö್ಯಬ್ಯೂಟರ್ ಕಾಲುವೆಯಲ್ಲಿ ಸರಿಯಾಗಿ 3.5 ಅಡಿ ಗೇಜ್ ನಿರ್ವಹಣೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರೈತ ಸಂಘದ ಗೌ.ಅಧ್ಯಕ್ಷರಾದ ರಾಮಕೃಷ್ಣ ಮಾತನಾಡಿ ಮಾನ್ವಿ ಭಾಗದಲ್ಲಿ ನೀರಾವರಿ ಅಧಿಕಾರಿಗಳು ಸರಿಯಾಗಿ ಗೇಜ್ ನಿರ್ವಹಣೆ ಮಾಡದೆ ಇರುವುದರಿಂದ ಈ ಭಾಗದಲ್ಲಿ ರೈತರು ಸಾವಿರಾರು ರೂ ವೆಚ್ಚಮಾಡಿ ಬಿತ್ತನೆ ಮಾಡಿ ಬೆಳೆದಿರುವ ಭತ್ತ,ಹತ್ತಿ,ಜೋಳ, ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿವೆ ಈ ಕುರಿತು ನೀರಾವರಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಕೂಡಲೇ ಗೇಜ್ ಸರಿಯಾಗಿ ನಿರ್ವಹಣೆ ಮಾಡಿ ಕಾಲುವೇಗೆ ನೀರು ಬಿಡದೆ ಇದ್ದಲ್ಲಿ ತೀವ್ರವಾದ ಹೋರಾಟವನ್ನು ನಡೆಸಲಾಗುವುದು ಎಂದು ತಿಳಿಸಿದರು.
ನಂತರ ನೀರಾವರಿ ಇಲಾಖೆಯ ಅಧಿಕಾರಿ ತಬ್ರೇಜ ರವರಿಗೆ ಜನಸೇವಾ ಫೌಂಡೇಶನ್ ರಾಜ್ಯಾಧ್ಯಕ್ಷರಾದ ಜಾವೀದ್ ಖಾನ್ ಮನವಿ ಸಲ್ಲಿಸಿ ಮಾತನಾಡಿದರು
ರೈತ ಮುಖಂಡರಾದ ಗಂಗಪ್ಪ, ಶಿವಪ್ಪ, ಜಲಾಲ್ ಸಾಬ್, ಮೈಲಾರಿ,ನಾಗರಾಜ ಪರಕಲ್, ದೆವೇಂದ್ರ,ಸಿದ್ದಪ್ಪ, ಜಡೆ ಈರಣ್ಣ, ವೆಂಕೋಬ ಬುಲದೊಡ್ಡಿ,ಚೇತನ್, ಸುರೇಶ ನಾಡಗೌಡ, ಹನುಮಂತ ನಾಯಕ,ದಿಲೀಪ್ ಸಿಂಗ್,ಲಚ್ಚುಮಯ್ಯನಾಯಕ ಸೇರಿದಂತೆ ನೂರಾರು ರೈತರು ಇದ್ದರು.