ಅವಧಿ ಮೀರಿದ ಮದ್ಯ ಮಾರಾಟ ಎಂ.ಎಸ್‌.ಲಿಕ್ಕರ್ ವಿರುದ್ಧ ಗ್ರಾಹಕರ ಆಕ್ರೋಶ

H.Mallikarjun
H.Mallikarjun - Kalyanasiri
1 Min Read
Consumers' anger against MS Liquor for selling expired liquor

  

ಅವಧಿ ಮೀರಿದ ಮದ್ಯ ಮಾರಾಟ   ಎಂ.ಎಸ್‌.ಲಿಕ್ಕರ್ ವಿರುದ್ಧ ಗ್ರಾಹಕನ ಆಕ್ರೋಶ

ಜಾಹೀರಾತು

ಗಂಗಾವತಿ: ನಗರದ ಕೊಪ್ಪಳ ರಸ್ತೆಯಲ್ಲಿರುವ ಎಂ.ಎಸ್‌.ಲಿಕ್ಕರ್ ಮದ್ಯದ ಅಂಗಡಿಯಲ್ಲಿ ಅವಧಿ ಮೀರಿದ ಮದ್ಯವನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗ್ರಾಹಕ ಹಾಗೂ ಅಂಗಡಿ ಸಿಬ್ಬಂದಿ ನಡುವೆ ಕೆಲಕಾಲ ವಾಗ್ವಾದವೂ ನಡೆದಿರುವ ಘಟನೆ ನಡೆದಿದೆ.

ಗಂಗಾವತಿ ನಗರದ ನಿವಾಸಿ ಸತೀಶ್ ಕುಮಾರ್ ಅವರು ಕೊಪ್ಪಳ ರಸ್ತೆಯಲ್ಲಿರುವ ಎಂ.ಎಸ್‌.ಲಿಕ್ಕರ್ ಮದ್ಯದ ಅಂಗಡಿಗೆ ತೆರಳಿ ₹545 ಮೌಲ್ಯದ ಮದ್ಯವನ್ನು ಖರೀದಿಸಿದ್ದಾರೆ. ಖರೀದಿಸಿದ ಬಳಿಕ ಬಾಟಲ್ ಮೇಲಿರುವ ಅವಧಿ ದಿನಾಂಕವನ್ನು ಪರಿಶೀಲಿಸಿದ ವೇಳೆ ಮದ್ಯದ ಅವಧಿ ಮುಗಿದಿರುವುದು ಗಮನಕ್ಕೆ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಅಂಗಡಿ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ ಎಂದು ಸತೀಶ್ ಕುಮಾರ್ ತಿಳಿಸಿದ್ದಾರೆ. ಇದರಿಂದ ಗ್ರಾಹಕ ಮತ್ತು ಸಿಬ್ಬಂದಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ನಂತರ ಅವಧಿ ಮೀರಿದ ಮದ್ಯದ ಬಾಟಲ್ ಹಾಗೂ ಫೋನ್‌ಪೇ ಮೂಲಕ ಪಾವತಿಸಿದ ಹಣದ ರಸೀದಿಯ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ತಾಲೂಕು ಅಬಕಾರಿ ಇಲಾಖೆಗೆ ದೂರು ನೀಡಲು ಸತೀಶ್ ಕುಮಾರ್ ತೆರಳಿದ್ದಾರೆ. ಆದರೆ 4ನೇ ಶನಿವಾರ ಹಿನ್ನೆಲೆ ಕಚೇರಿಗೆ ರಜೆ ಇದ್ದುದರಿಂದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅಧಿಕಾರಿಗಳು ಕರೆ ಸ್ವೀಕರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಅವಧಿ ಮೀರಿದ ಮದ್ಯವನ್ನು ಮಾರಾಟ ಮಾಡಿದ ಎಂ.ಎಸ್‌.ಲಿಕ್ಕರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿಸಿದ ಅಂಗಡಿಯ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಗ್ರಾಹಕ ಸತೀಶ್ ಕುಮಾರ್ ಮಾಧ್ಯಮದ ಮೂಲಕ ಅಬಕಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ.

Total Views: 2
Share This Article