Breaking News

ಗಮನಸೆಳೆದ ನರೇಗಾ ಮಾಹಿತಿ ಕೇಂದ್ರ

Notable NREGA Information Center

ಜಾಹೀರಾತು

ಬೂದು ನೀರು ನಿರ್ವಹಣಾ ಕಾರ್ಯಮಾದರಿ ಅಳವಡಿಕೆ

ಗಂಗಾವತಿ : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನರೇಗಾ ಮಾಹಿತಿ ಕೇಂದ್ರ ತೆರೆದು ಬೂದು ನೀರು ನಿರ್ವಹಣಾ ಕಾರ್ಯಮಾದರಿ (ಲೈವ್ ಮಾಡೆಲ್ ) ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿರುವುದು ವಿಶೇಷವಾಗಿ ಕಂಡು ಬಂತು.

ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ ಬೂದು ನೀರು ನಿರ್ವಹಣಾ ಕಾರ್ಯಮಾದರಿ ವೀಕ್ಷಿಸಿ, ನರೇಗಾ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು. ಮನೆ- ಮನೆಗಳಿಂದ ಉತ್ಪತ್ತಿಯಾಗುವ ದ್ರವ ತಾಜ್ಯವನ್ನು ಸಂಸ್ಕರಿಸಿ ಬಿಡುವುದು ಬೂದು ನೀರು ನಿರ್ವಹಣೆ ಘಟಕದ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ರಾಜ್ಯದಲ್ಲಿ 500 ಗ್ರಾಮ ಪಂಚಾಯತ್ ಗಳಲ್ಲಿ ಬೂದು ನೀರು ನಿರ್ವಹಣಾ ಘಟಕ (ಜಿಡಬ್ಲ್ಯುಎಂ) ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಸಮ್ಮೇಳನದಲ್ಲಿ ಬೂದು ನೀರು ನಿರ್ವಹಣಾ ಕಾರ್ಯಮಾದರಿ ಅಳವಡಿಸಲಾಗಿತ್ತು.
ಸಾರ್ವಜನಿಕರಿಗೆ ನರೇಗಾ ಯೋಜನೆ ಮಾಹಿತಿ, ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.

About Mallikarjun

Check Also

ಗುರುಪೌರ್ಣಮಿ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ: ಟಿ.ರಾಮಕೃಷ್ಣ

Special religious program on the occasion of Gurupournami: T. Ramakrishna ಗಂಗಾವತಿ, ಜು.08: ಹೊರವಲಯದ ಆನೆಗೊಂದಿ ರಸ್ತೆಯಲ್ಲಿರುವ …

Leave a Reply

Your email address will not be published. Required fields are marked *