
Villagers urge Bandral Village Public Education Save Committee and AIDSSO to field education officers not to merge Bandral village school


ಬಂಡ್ರಾಳ್ ಗ್ರಾಮದ ಶಾಲೆಯನ್ನು ವಿಲೀನಗೊಳಿಸದಂತೆ ಬಂಡ್ರಾಳ್ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರ ಆಗ್ರಹ

ಗಂಗಾವತಿ ತಾಲ್ಲೂಕಿನ ವೆಂಕಟಗಿರಿ ಕೆಪಿಎಸ್ ಶಾಲೆಗೆ ಬಂಡ್ರಾಳ್ ಗ್ರಾಮದ ಶಾಲೆಯನ್ನು ವಿಲೀನಗೊಳಿಸದಂತೆ ಬಂಡ್ರಾಳ್ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರ ಆಗ್ರಹ
ಗಂಗಾವತಿ: ವೆಂಕಟಗಿರಿ ಕೆಪಿಎಸ್ ಶಾಲೆಗೆ ವಿಲೀನಗೊಳಿಸಿ ಬಂಡ್ರಾಳ್ ಗ್ರಾಮದ ಶಾಲೆಯನ್ನು ಮುಚ್ಚದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಂಡ್ರಾಳ್ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮತ್ತು ಎಐಡಿಎಸ್ಓ ವತಿಯಿಂದ ಗ್ರಾಮಸ್ಥರ ಆಗ್ರಹ ಮನವಿ ಸಲ್ಲಿಸಿದರು. ಊರಿನ ಎಲ್ಲಾ ಗ್ರಾಮಸ್ಥರು ಸೇರಿ ಸಭೆ ನಡೆಸಿ, ಸಹಿ ಸಂಗ್ರಹ ಅಭಿಯಾನ ನಡೆಸಿದರು. ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮುಖಂಡರಾದ ನಾಗರಾಜ ಬಂಕಾಪಾರ ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ ನಲ್ಲಿ ಘೋಷಿಸಿರುವಂತೆ ಜೂನ್ ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ.
ಈ ಶಾಲೆಗಳ 3 ರಿಂದ 5 ಕಿ. ಮೀ ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು 15 ಅಕ್ಟೋಬರ್ 2025ರ ಆದೇಶವು ತಿಳಿಸುತ್ತದೆ. ಈ ಕುರಿತು ಪಟ್ಟಿ ಕೂಡ ದೊರೆತಿದೆ. ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್ಓ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಗ್ರಾಮಸ್ಥರು ಹಾಗೂ ಪೋಷಕರು ಹೋರಾಟ ನಡೆಸಿದ್ದೇವೆ. ಗ್ರಾಮ ಮಟ್ಟದಿಂದ ಆರಂಭಿಸಿ ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ವರೆಗೂ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ನಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ. ನಮ್ಮೂರ ಶಾಲೆ ನಮ್ಮೂರ ಮಕ್ಕಳ ಜ್ಞಾನದ ಮಂದಿರವಾಗಿದೆ. ನಮ್ಮೂರ ಶಾಲೆಯನ್ನು ಮುಚ್ಚಲು ಅಥವಾ ವಿಲೀನಗೊಳಿಸಲು ನಮ್ಮ ಒಪ್ಪಿಗೆಯಿಲ್ಲ ಅದಕ್ಕೆ ನಮ್ಮ ಈ ಸಹಿಗಳೇ ಸಾಕ್ಷಿ ಎಂದರು.
ಆದ್ದರಿಂದ ನಮ್ಮೂರ ಶಾಲೆಗೆ ಸಮರ್ಪಕ ಸೌಲಭ್ಯ ಹಾಗೂ ಶಿಕ್ಷಕರನ್ನು ನೀಡಿ ಅಭಿವೃದ್ಧಿ ಪಡಿಸಬೇಕೆಂಬುದು ನಮ್ಮೆಲ್ಲರ ಒಕ್ಕೊರಲ ಆಗ್ರಹವಾಗಿದೆ. ಯಾವುದೇ ಕಾರಣಕ್ಕೂ ನಮ್ಮೂರ ಶಾಲೆಯನ್ನು ಮುಚ್ಚಬಾರದೆಂದು ನಿಮ್ಮಲ್ಲಿ ಆಗ್ರಹಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಮುಖಂಡರಾದ ಶರಣು ಪಾಟೀಲ್, ಉಪಾಧ್ಯಕ್ಷರಾದ ಬೆಟ್ಟಪ್ಪ ಜಲ್ಲಿ, ಸದಸ್ಯರಾದ ಲಕ್ಷಣ್ ಯಾದವ್, ಅಮಿರ್ ಬಂಡ್ರಾಳ್,ಪ್ರದೀಪ್ ಇದ್ದರು.
