Breaking News

ನಮ್ಮ ನೆಲದ ಕಾನೂನುಗಳ ಜ್ಞಾನ ಹೊಂದಿ : ಸ್ವರೂಪ್ ಕೊಟ್ಟೂರು

Know the laws of our land : Swaroop Kottoor

ಜಾಹೀರಾತು

ಗುಡೇಕೋಟೆ :- ಅನ್ಯಾಯ, ಕಿರುಕುಳ, ದೌರ್ಜನ್ಯ.. ಇವುಗಳನ್ನೆಲ್ಲ ಧೈರ್ಯವಾಗಿ ಪ್ರತಿರೋಧಿಸಿ. ಜೊತೆಗೆ ಕಾನೂನಿನ ಬಲ ಮತ್ತು ನೆರವಿನಿಂದ ಅಂತಹವರಿಗೆ ತಕ್ಕ ಪಾಠ ಕಲಿಸಿ. ಅದಕ್ಕಾಗಿ ಈ ನೆಲದ ಪ್ರತಿ ಕಾನೂನುಗಳು ಮತ್ತು ಅವುಗಳ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಿ ಎಂದು ಗುಡೇಕೋಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್, ಲೇಖಕ ಸ್ವರೂಪ್ ಕೊಟ್ಟೂರು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಇವರು ಮಂಗಳವಾರ ತಾಲ್ಲೂಕಿನ ಚಿರತಗುಂಡ ಗ್ರಾಮದ ಶ್ರೀ ಬಸವೇಶ್ವರ ಪ್ರೌಢ ಶಾಲೆಯ ವತಿಯಿಂದ ಪೋಸ್ಕೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಮಾಜದಲ್ಲಿ ಇಂದಿಗೂ ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿ, ಲೈಗಿಂಕ ದೌರ್ಜನ್ಯ, ಅತ್ಯಾಚಾರ.. ನಡೆಯುತ್ತಲೇ ಇವೆ. ದುರ್ಧೈವವೆಂದರೆ ಈ ಬಗ್ಗೆ ಧೈರ್ಯವಾಗಿ ದೂರು ಕೊಡಲು ಬಹುತೇಕರು ಮುಂದೆ ಬರುತ್ತಿಲ್ಲ. ಸಾಮಾಜಿಕ ಜವಾಬ್ದಾರಿ ಇಲ್ಲದಿರುವುದು, ಕಾನೂನಿನ ಸರಿಯಾದ ಜ್ಞಾನದ ಕೊರತೆಯೇ ಇದಕ್ಕೆಲ್ಲ ಕಾರಣ. ಹೀಗಾಗಿ ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಅದರಲ್ಲೂ ಮಹಿಳೆ ಮತ್ತು ಮಕ್ಕಳ ಕಾನೂನುಗಳ ಬಗ್ಗೆ ಕನಿಷ್ಠ ಜ್ಞಾನ ನೀವು ಹೊಂದಬೇಕು. ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಂವಿಧಾನದಲ್ಲಿ ಹೆಚ್ಚು ಒತ್ತು ಕೊಡಲಾಗಿದ್ದು, ನೀವು ಅವುಗಳ ಜ್ಞಾನ ಹೊಂದಿದಾಗ ಮಾತ್ರ ಆ ಕಾನೂನುಗಳನ್ನೆಲ್ಲ ಸಕಾಲದಲ್ಲಿ ಸದ್ಭಳಕೆ ಮಾಡಿಕೊಂಡು ನ್ಯಾಯ ಪಡೆಯಬಹುದು. ಇಂದು ಸಮಾಜ ನೈತಿಕ ಅಧಪತನದತ್ತ ಸಾಗುತ್ತಿದೆ. ಪ್ರತಿ ಕ್ಷಣ ವಿಶೇಷವಾಗಿ ಮಹಿಳೆ ಮತ್ತು ಮಕ್ಕಳು ಆತಂಕ, ಭಯದ ವಾತಾವರಣದಲ್ಲಿ ಜೀವಿಸಬೇಕಿದೆ. ಇದಕ್ಕಾಗಿ ನೀವುಗಳು ಸದಾ ಎಚ್ಚರದಿಂದ ಇರಬೇಕು. ಎಂತಹದ್ದೇ ಸಂಧರ್ಭದಲ್ಲಿ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು. ಸಂವಿಧಾನದತ್ತ ನಿಮ್ಮ ಹಕ್ಕುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಅದಕ್ಕೆ ನಿಮ್ಮೆಲ್ಲರ ಸಹಕಾರ ತುಂಬಾ ಮುಖ್ಯವೆಂದರು.

ಗುಡೇಕೋಟೆ ಠಾಣೆಯ ಎಎಎಸ್ಐ ಬಾಬಾ ಪಕ್ರೃದ್ಧೀನ್ ಮಾತನಾಡಿ ಆಧುನಿಕ ಸಮಾಜದಲ್ಲಿ ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ಮಟ್ಟ ಹಾಕಬೇಕಿದೆ. ಬಾಲ್ಯ ವಿವಾಹದ ಬಗ್ಗೆ, ದುರ್ನಡತೆ ವ್ಯಕ್ತಿಗಳ ಬಗ್ಗೆ ತಿಳಿದು ಬಂದರೆ ಮಾಹಿತಿ ತಿಳಿಸಿ. ಜೊತೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ನಾವು ಕಾನೂನು ಕ್ರಮ ಜರುಗಿಸುತ್ತೇವೆ. ಒಟ್ಟಿನಲ್ಲಿ ಮಕ್ಕಳ ರಕ್ಷಣೆ ನಮ್ಮ ಧ್ಯೇಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಗುರುಗಳಾದ ಬೊಮ್ಮಣ್ಣ ವಹಿಸಿದ್ದರು. ಶಿಕ್ಷಕರಾದ ವೀರನಗೌಡ್ರು, ಜಿ.ಸಿ ತಡಕೋಡ್, ನವೀನ್, ಲಿಂಗರಾಜ್, ಓಬಯ್ಯ, ಬೊಮ್ಮಕ್ಕ, ಬೋರಮ್ಮ ಉಪಸ್ಥಿತರಿದ್ದರು.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.