Pratibha Purasak by Madiga Jagriti Yuva Vodsha
ಮಾನ್ವಿ: ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್‌ನಲ್ಲಿ ಮಾದಿಗ ಜಾಗೃತಿ ಯುವ ವೇದಿಕೆ ತಾಲೂಕು ಸಮಿತಿಯ ವತಿಯಿಂದ ನಡೆದ ಮಾನ್ವಿ ಮತ್ತು ಸಿರವಾರ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕಾರ್ ಹಾಗೂ ಬಾಬು ಜಗಜೀವನ್ ರಾಮ್ ರವರು ದೇಶದ ಎರಡು ಕಣ್ಣುಗಳಿದಂತೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೇಲ್ಲರು ನಡೆಯೋಣ ಇಂದಿನ ದಿನಗಳಲ್ಲಿ ಹಿಂದುಳಿದಿರುವ ಸಮುದಾಯಗಳ ವಿದ್ಯಾರ್ಥಿಗಳು ಕೂಡ ಶೈಕ್ಷಣಿಕವಾಗಿ ಉತ್ತಮವಾದ ಸಾಧನೆಯನ್ನು ತೋರುತ್ತಿದ್ದಾರೆ ಅಂತಹವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನು ನೀಡುವ ಕಾರ್ಯವನ್ನು ನಾವೇಲ್ಲರು ಕೂಡ ಮಾಡಬೇಕು ಪ್ರತಿಭೆಗೆ ಎಂದು ಕೂಡ ಬಡತನ ಅಡಿಯಾಗುವುದಿಲ್ಲ ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ವಿದ್ಯಾರ್ಥಿಗಳು ಕೂಡ ವೈದ್ಯಾಕೀಯ ಹಾಗೂ ತಾಂತ್ರಿಕ ಶಿಕ್ಷಣವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಪಟ್ಟಣದಲ್ಲಿ ಸರಕಾರಿ ಬಾಲಕಿಯರ ಪಿ.ಯು.ಕಾಲೇಜಿಗೆ ತಮ್ಮ ಅವಧಿಯಲ್ಲಿ ಉತ್ತಮ ಕಟ್ಟಡ ಹಾಗೂ ಸುಸಜ್ಜಿತವಾದ ಪ್ರಯೋಗಲಯ ವ್ಯವಸ್ಥೆ ಮಾಡಿಕೊಟ್ಟಿರುವುದರಿಂದ ತಾಲೂಕಿನ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಹಾಗೂ ಇಂಜನೀಯರಿಂಗ್ ಅಭ್ಯಾಸಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಡಿಹಳ್ಳಿ ಶ್ರೀ ಅದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಷಡಕ್ಷರಿ ಮುನಿ ದೇಶಿಕೆಂದ್ರ ಸ್ವಾಮಿಜಿಗಳು ರ್ಶಿವಾಚನ ನೀಡಿ ನಮ್ಮ ಸಮುದಾಯದವರು ಸಂಘಟಿತರಾಗಿ ಇಂದು ಅಭಿವೃದ್ದಿ ಹೊಂದುತ್ತಿರುವುದನ್ನು ಕಾಣಬಹುದಾಗಿದೆ ಸಮಾಜದಲ್ಲಿನ ಎಲ್ಲಾ ಸಮುದಾಯಗಳೊಂದಿಗೆ ಉತ್ತಮರೀತಿಯಲ್ಲಿ ಸೌಹಾರ್ಧತೆಯಿಂದ ಕೂಡಿ ಬಾಳುತ್ತಿದ್ದಾರೆ ಸಮುದಾಯದ ವಿದ್ಯಾರ್ಥಿಗಳು ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದು ಕೊಂಡು ಅವುಗಳನ್ನು ಪಡೆದುಕೊಳ್ಳುವ ಮೂಲಕ ಉನ್ನತ ಶಿಕ್ಷಣವನ್ನು ಪಡೆದುಕೊಂಡು ಉಜ್ವಾಲವಾದ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಯುವ ಮುಖಂಡರಾದ ಅಭಿಲಾಷ ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಸರಕಾರಿ ಬಾಲಕೀಯರ ಪಿ,ಯು.ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ವೈದ್ಯಾಕೀಯ ಶಿಕ್ಷಣಕ್ಕೆ ಆಯ್ಕೆಯಾದ ಸಮುದಾಯದ ವಿದ್ಯಾರ್ಥಿನಿ ಅನುರಾಧ ಸೇರಿದಂತೆ ಎಸ್.ಎಸ್.ಎಲ್.ಸಿ.ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸೆಂಟ್ ಮೇರಿಸ್ ಚರ್ಚ್ನ ವಿಚಾರಣೆ ಗುರುಗಳಾದ ವಂ.ಫಾದರ್ ವಿನ್ಸಂಟ್ ಸುರೇಶ, ಜಿ.ಪಂ.ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಅಂಬಣ್ಣ ಅರೋಲಿಕರ್, ಪಿ.ಯಲ್ಲಪ್ಪ, ಕಿರಿಲಿಂಗಪ್ಪ, ಹನುಮೇಶ ಮದ್ಲಾಪೂರ್, ಬಸವರಾಜ ಕೇಸರಿ,ಸುರೇಶಕುರ್ಡಿ,ಪಿ.ತಿಪ್ಪಣ್ಣ ಬಾಗಲವಾಡ,ಪಿ.ಪರಮೇಶ, ಜಯರಾಜ್ ಚಿಕ್ಕಬಾದರದಿನ್ನಿ, ಪಿ.ರವಿಕುಮಾರ , ಬಸವರಾಜ ನಕ್ಕುಂದಿ,ಅಶೋಕ ತಡಕಲ್.ಜಯಪ್ರಕಾಶ,ಶಿವರಾಜ ನಾಯಕ, ಮಾರೆಪ್ಪ.ಡಿ, ಪುರಸಭೆ ಸದಸ್ಯರಾದ ಶರಣಪ್ಪ ಮೇದಾ,ರಾಜಾರಾಮಚಂದ್ರನಾಯಕ , ಯಲ್ಲಪ್ಪಬಾದರದಿನ್ನಿ,ಹೆಚ್.ಮೌನೇಶ್,ಹುಸೇನಪ್ಪ,ರವಿ, ಸೇರಿದಂತೆ ಸಮುದಾಯದ ಮುಖಂಡರು,ವಿದ್ಯಾರ್ಥಿಗಳು ಭಾಗವಹಿಸಿದರು.