Breaking News

ಮಠದ ಆಸ್ತಿ ದುರ್ಬಳಕೆ, ಶ್ರೀಗಳ ವರ್ತನೆಗೆ ಭಕ್ತರ ಆಕ್ರೋಶ,,,

Misuse of Math’s property, Devotees’ outrage at Sri’s behavior

ಜಾಹೀರಾತು

ಸಿದ್ದರಾಮೇಶ್ವರ ಸ್ವಾಮೀಜಿ ಮೇಲೆ ತೂಗುಗತ್ತಿ,,

ಪೀಠ ತ್ಯಾಗ ಮಾಡುವಂತೆ ಮಠದ ಭಕ್ತರ ಒತ್ತಾಯ,,

ಬುಧವಾರದಂದು ಮಠದ ಟ್ರಸ್ಟ್ ರಚನೆ ಮಾಡಿದ ಭಕ್ತ ಸಮೂಹ,,,

ವಯಕ್ತಿಕ ಕಾರಣದಿಂದ ನನ್ನ ಮೇಲೆ ಆರೋಪ,,, ಸ್ವಾಮೀಜಿ ಹೇಳಿಕೆ,,,

ಟ್ರಸ್ಟ್ ರಚನೆಗೆ ತಾಕೀತು ಮಾಡಿದ ಶ್ರೀಗಳು,,

ಸೆ. 19ರಂದು ಮಠದ ಶಿಷ್ರ ವೃಂದ ಹಾಗೂ ಭಕ್ತರಿಂದ ಸಭೆ,,,

ಮಠದಲ್ಲಿನ ಗಲಭೆ ಹಿನ್ನೆಲೆ ಪಟ್ಟಣದ ಆರಕ್ಷಕ ಠಾಣೆಯಿಂದ ಶ್ರೀಮಠದ ಸುತ್ತಲು ಪೋಲಿಸ್ ಬೀಡು,,,

ಹೌದು ಈ ರೀತಿಯಾಗಿ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿರುವದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಸಿದ್ದರಾಮೇಶ್ವರ ಸಂಸ್ಥಾನ ಹಿರೇಮಠದಲ್ಲಿ,,,

ಈ ಕುರಿತು ನಮ್ಮ ಪ್ರತಿನಿಧಿ ಸಿದ್ದರಾಮೇಶ್ವರ ಮಠದ ಶ್ರೀಗಳನ್ನು ಸಂದರ್ಶಿಸಿದಾಗ,,

ಶ್ರೀಗಳು ಮಾಧ್ಯಮದೊಂದಿಗೆ ಮಾತನಾಡಿ ನಮ್ಮ ಮಠದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೇವಣ ಸಿದ್ದಯ್ಯ ಎನ್ನುವ ವ್ಯಕ್ತಿ ಮಠದ ದುಡ್ಡಿನಲ್ಲಿ ಪೂಜಾ ಸಾಮಗ್ರಿಗಳ ವ್ಯಾಪಾರ ನಡೆಸುತ್ತಿದ್ದು, ಶ್ರೀಮಠದ ಭಕ್ತರ ಮನೆಯಲ್ಲಿ ಪೂಜೆ ಮಾಡಿ ಹಣ ವಸೂಲಿಗೆ ನಿಂತಿದ್ದ,,,

ಈ ವಿಷಯ ನಮಗೂ ಹಾಗೂ ಶಿಷ್ಯ ಸಮುದಾಯಕ್ಕೂ ಗೊತ್ತಾಗಿದ್ದರಿಂದ ಮಠದಿಂದ ಹೊರ ಹಾಕಿದ್ದೇವು,,,

ಇದನ್ನೇ ನೆಪ ಮಾಡಿದ ರೇವಣಸಿದ್ದಯ್ಯ ಹಾಗೂ ಜನರ ಗುಂಪೊಂದು ಮಠದಲ್ಲಿ ಬಂದು ಸಭೆ ನಡೆಸಿದ್ದು ಕಾನೂನು ಬಾಹಿರವಾಗುತ್ತದೆ.

ನಮ್ಮ ಮಠವು ನೂರಾರು ವರ್ಷಗಳ ಇತಿಹಾಸವುಳ್ಳ ವಂಶ ಪಾರಂಪರೆಯುಳ್ಳ ಗುರುಸ್ಥಲ ಮಠವಾಗಿದ್ದು, ಇದಕ್ಕೆ ನಾವುಗಳೇ ವಯಕ್ತಿಕ ಅಧಿಕಾರವುಳ್ಳವರಾಗಿರುತ್ತೇವೆ ಎಂದರು.

ಈ ಮಠಕ್ಕೆ ಪೀಠಾಧಿಪತಿಗಳ ವಂಶಸ್ಥರೇ ಅಧಿಕಾರ ವಹಿಸಿಕೊಳ್ಳುವುದು, ಗುರುಸ್ಥಲ ಮಠಗಳ ಸಂಪ್ರದಾಯವಾಗಿರುತ್ತದೆ.

ಇದು ಟ್ರಸ್ಟ್ ಮಾಡಲು ವಿರಕ್ತಮಠ, ಗುಡಿ ಗುಂಡಾರವೇನು ಅಲ್ಲಾ ಎಂದು ಭಕ್ತ ಸಮೂಹವು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ,,

ನಾವು ಈ ಮಠಕ್ಕೆಪೀಠಾಧಿಪತಿಗಳಾಗಿ 2000 ನೇ ಇಸ್ವಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಶ್ರೀಮಠದ ಆಸ್ತಿ ಪರಾಭಾರೆ, ಅಥವಾ ಹಣದ ವ್ಯವಹಾರದಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲಾ, ನಡೆದಿದ್ದರೇ ದಾಖಲೆ ಸಹಿತ ಸ್ಪಷ್ಟಪಡಿಸಲಿ, ಕೇವಲ ಮೌಖಿಕವಾಗಿ ಮಾತನಾಡುವುದು, ಶ್ರೀಮಠಕ್ಕೆ ಅಪಪ್ರಚಾರ ಮಾಡುವುದು ತಮ್ಮಷ್ಟಕ್ಕೆ ತಾವೇ ಟ್ರಸ್ಟ್ ರಚಿಸಿಕೊಳ್ಳುವುದು ಕಾನೂನು ಬಾಹಿರವಾಗುತ್ತದೆ ಎಂದು ತಿಳಿಸಿದರು.

ನಂತರದಲ್ಲಿ ಮಠದ ಪರಂಪರೆಯ ಭಕ್ತರಾದ ಹಿರೇವಂಕಲಕುಂಟಾ ಗ್ರಾಮದ ಶಂಕ್ರಪ್ಪ ಸಜ್ಜನ ಮಾತನಾಡಿ ಇಂದು ಪತ್ರಿಕೆಯನ್ನು ನೋಡಿ ನನಗೆ ವಿಷಯ ತಿಳಿದಿದ್ದು ಮಠಕ್ಕೆ ಭೇಟಿ ನೀಡಿದಾಗ ವಾಸ್ತವ, ತಿಳಿದಿದ್ದು ಶ್ರೀಗಳ ಮೇಲೆ ಆಪಾದನೆ ಮಾಡುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು, ಈ ವೇಳೆ ಮಠದ ಹಲವಾರು ಶಿಷ್ಯ ವೃಂದದ ಭಕ್ತರು ಮಾತನಾಡಿದರು.

ಈ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಶ್ರೀಮಠದ ಭಕ್ತರಾದ ವೀರನಗೌಡ ಬನ್ನಪ್ಪಗೌಡ್ರ ಮಾತನಾಡಿ ನಾವು ಮಠದ ಭಕ್ತರು, ನಾವು ಸಿದ್ದಯ್ಯನನ್ನು ಏಕೆ ಕೆಲಸದಿಂದ ತೆಗೆದಿದ್ದಿರಿ ಎಂದು ಪ್ರಶ್ನಿಸಿದ್ದಕ್ಕೆ ಶ್ರೀಗಳು ನಮಗೆ ಏಕವಚನದಿಂದ ಮಾತನಾಡಿ, ದರ್ಪದ ಮಾತುಗಳನ್ನಾಡುತ್ತಾರೇ,,,

ಮಠದ ಭಕ್ತರಾದವರು ಪ್ರಶ್ನೀಸುವುದು ತಪ್ಪೇ,,,?

ಮಠಗಳು ಸರ್ವ ಭಕ್ತರನ್ನೊಳಗೊಂಡು ಇರುತ್ತವೆ, ಭಕ್ತರಿಂದ ಗುರುಗಳಿರಬೇಕೆ ವಿನಃ ಇಲ್ಲಿ ಅವರ ಏಕ ಪಕ್ಷೀಯ ನಿರ್ಧಾರ ಸರಿಯಲ್ಲಾ ಇದು ಖಂಡನೀಯವಾಗಿದೆ ಎಂದರು,,,

ಮಠಕ್ಕೆ ಟ್ರಸ್ಟ್ ಇಲ್ಲದೇ ಇರುವುದರಿಂದ ಶ್ರೀಗಳು ಹೊಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದಾರೆ ಇದರಿಂದ
ಮಠದ ನೂರಾರು ಎಕರೆ ಆಸ್ತಿ ದುರ್ಬಳಕೆಯಾಗಿದ್ದು, ಶ್ರೀ ಮಠದ ಆದಾಯವನ್ನು ಸ್ವಾಮಿಜೀ ಅವರು ತಮ್ಮ ಸಹೋದರರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ಆರೋಪಿಸಿದರು,,,

ಈ ವೇಳೆ ಶ್ರೀಗಳು ಪೀಠವನ್ನು ತ್ಯಾಗ ಮಾಡಲೇಬೇಕು ಎಂದು ಆಗ್ರಹವನ್ನು ಸಹ ಮಾಡಿದರು.,,

ಈ ಕುರಿತು ಈಗಾಗಲೇ ಬುಧವಾರದಂದು ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಟ್ರಸ್ಟ್ ರಚನೆಯು ಆಗಿದೆ,,,

ನಾವು ಕಾನೂನಿನ ಮೂಲಕ ಹೋರಾಟ ಮಾಡಿ ಮಠದ ಆಸ್ತಿ ಹಾಗೂ ಹಣ ದುರ್ಬಳಕೆಯಾಗಿರುವದನ್ನು ಸಾಕ್ಷಾಧಾರಗಳ ಮೂಲಕ ಒದಗಿಸಿ ಮುಂದಿನ ದಿನಮಾನಗಳಲ್ಲಿ ಟ್ರಸ್ಟ್ ಮೂಲಕವೇ ಆಡಳಿತ ನಡೆಸಲಾಗುವುದು ಎಂದು ತಿಳಿಸಿದರು,,,

ವರದಿ : ಪಂಚಯ್ಯ ಹಿರೇಮಠ,,

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.