Examinations are helpful for children’s knowledge development: Head teacher V.S. Benakal’s statement.
ಕೊಪ್ಪಳ : ಪ್ರಾಥಮಿಕ ಶಾಲಾ ಶಿಕ್ಷಣ ಹಂತದಲ್ಲಿ ಮಕ್ಕಳು ಸ್ಪರ್ಧಾ ಮನೋಭಾವನೆಯನ್ನು ಬೆಳಸಿಕೊಳ್ಳಲು ಇಂತಹ ಪರಿಕ್ಷೇಗಳು ಪೂರಕವಾಗಿದ್ದು ಇದರಿಂದ ಜ್ಞಾನ ವಿಕಾಸ ಪಡೆದುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಬಳಗೇರಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಾಲೆಯ ಶಿಕ್ಷಕ ವಿ. ಎಸ್ ಬೆಣಕಲ್ ಹೇಳಿದರು.
ಅವರು ಬಳಗೇರಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಬಳಗೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷಯ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗಣಿತ ಕಲಿಕಾ ಆಂದೋಲನ, 4-5-6 ನೇ ತರಗತಿ ಮಕ್ಕಳ ಗಣಿತ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಪರೀಕ್ಷೆಗೆ ಸ್ಥಳೀಯ ಶಾಲೆ 5 ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ವಿದ್ಯಾರ್ಥಿಗಳು ಆಗಮಿಸಿದ್ದರು. ಪರೀಕ್ಷೆಯ ಕೇಂದ್ರದ ಮೇಲ್ವಿಚಾರಕರಾಗಿ ಸ್ವಯಂ ಸೇವಕರಾದ ಗವಿಸಿದ್ದಮ್ಮ, ಉಮಾ ತುಮರಗುದ್ದಿ, ಶಿಲ್ಪಾ ಹಲಸಿನಮರದ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಹೇಶಗೌಡ ವಿದ್ಯಾರ್ಥಿಗಳ ಪರೀಕ್ಷೆಯನ್ನು ತೆಗೆದುಕೊಂಡರು.
ಪರೀಕ್ಷೆ ನಂತರದಲ್ಲಿ ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಪ್ರಥಮ, ದ್ವೀತಿಯ. ತೃತೀಯ ಬಹುಮಾನಗಳನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ಶರಣಪ್ಪ ಬೂದಗುಂಪಿ, ರಾಜಶೇಖರ ಹೂಗಾರ ಹಾಗೂ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸತ್ಯಪ್ಪ ಚಲವಾದಿ, ಶಿಕ್ಷಕರಾದ ಬಸವರಾಜ ಬಜೆಂತ್ರಿ, ತಿಪ್ಪಣ್ಣ ಚಲವಾದಿ, ಗೂಡುಸಾಬ ಮಕಾಂದರ್, ದೊಡ್ಡಬಸಪ್ಪ ಬೂದಗುಂಪಿ, ಭೀಮಪ್ಪ ಅಗಳಕೇರಿ, ಯಲ್ಲಪ್ಪ ಬ್ಯಾಟಿ ಇನ್ನಿತರ ಶಿಕ್ಷಕಿಯರು ಇದ್ದರು.