Breaking News

ಸೆ.೧೫ ರಿಂದ ಹತ್ತು ದಿನ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಶಿಬಿರ

Ten days Siddhanta Shikhamani Granth Parayana camp from September 15

ಜಾಹೀರಾತು


ಗಂಗಾವತಿ: ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಶ್ರೀ ಹಾನಗಲ್ಲ ಕುಮಾರೇಶ್ವರ ವೇದ್ತ ಸಂಸ್ಕೃತ ಪಾಠಶಾಲೆ ಇವುಗಳ ಸಹಯೋಗದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯರು ವಿರಚಿತ ಸಿದ್ಧಾಂತ ಶಿಖಾಮಣಿ ಗ್ರಂಥ ಪಾರಾಯಣ ಶಿಬಿರವು ಸೆ.೧೫ ರಿಂದ ಸೆ.೨೫ ರವರೆಗೆ ಹತ್ತು ದಿನ ಹೊಸಳ್ಳಿ ರಸ್ತೆಯ ಲಿಟಲ್ ಹಾಟ್ಸ್ ð ಸ್ಕೂಲ್ ಬಳಿ ಇರುವ ಕನ್ನಡ ಜಾಗೃತಿ ಭವನದಲ್ಲಿ ಜರುಗಲಿದೆ ಎಂದು ಪರಮಪೂಜ್ಯ ಶ್ರೀ ಶರಣಬಸವ ದೇವರು ಅರಳಹಳ್ಳಿ ಇವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸೆ.೧೫ ರವಿವಾರ ಸಂಜೆ ೫.೩೦ಕ್ಕೆ ಶಿಬಿರವು ಪರಮಪೂಜ್ಯ ಶ್ರೀ ನಾಗಭೂಷಣ ಶಿವಾಚಾರ್ಯರಿಂದ ಇಷ್ಟಲಿಂಗ ಪೂಜೆಯ ಮೂಲಕ ಪ್ರಾರಂಭಗೊಳ್ಳಲಿದ್ದು, ಕಲ್ಮಠದ ಶ್ರೀ ಕೊಟ್ಟೂರೇಶ್ವರ ಶ್ರಿಗಳು, ಶ್ರೀ ಸುವರ್ಣಗಿರಿ ಮಠದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಹಂಪೆಯ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು, ಹಳೆ ಕೋಟೆಯ ಶ್ರೀ ಸಿದ್ದಬಸವ ಮಹಾಸ್ವಾಮಿಗಳು, ಮೂರು ಮೈಲು ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಮನವಿಯ ಶ್ರೀ ವಿರುಪಾಕ್ಷ ಪಂಡಿತಾರಾದ್ಯ ಮಹಾಸ್ವಾಮಿಗಳು, ಶ್ರೀ ಭುವನೇಶ್ವರಯ್ಯ ತಾತಾ ಬೃಹನ್ಮಠ ಸುಳೆಕಲ್, ಶ್ರೀ ಗವಿಸಿದ್ದಯ್ಯ ತಾತನವರು ಬೃಹನ್ಮಠ ಅರಳಹಳ್ಳಿ, ಗಡ್ಡಿಯ ಶ್ರೀ ಸಂಗಮೇಶ್ವರ ಸ್ವಾಮಿಜಿ ಅಪ್ಪಾಜಿಮಠ ಇವರು ಸಾನಿಧ್ಯ ವಹಿಸಲಿದ್ದಾರೆ ಎಂದು ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಂಸದ ಶಿವರಾಮಗೌಡರು, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಹೆಚ್.ಆರ್.ಶ್ರೀನಾಥ್, ಕಾಂಗ್ರೆಸ್ ಮುಖಂಡರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಡಾ.ಜೀವನೇಶ್ವರಯ್ಯ ಹಿರೇಮಠ, ಸೋಮನಾಥಯ್ಯ ಕುಲಕರ್ಣಿ ಹಣವಾಳ, ಡಾ.ಈಶ್ವರ್ ಸವಡಿ, ಮಾಜಿ ಕಾಡಾ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಸಿದ್ದರಾಮಯ್ಯಸ್ವಾಮಿ ಹಾಗು ಸಂತೋಷ ಕೇಲೋಜಿ ಇತರರು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಸಂಜೆ ೫.೩೦ ರಿಂದ ೭ ಗಂಟೆಯವರೆಗೆ ಶಿಬಿರ ಜರುಗಲಿದ್ದು, ಪರಮಪೂಜ್ಯ ಶ್ರೀ ಗಂಗಾಧರ ದೇವರು ಚರಂತಿಮಠ ಅಬಲೂರು ಇವರು ಪಾರಾಯಣ ಮಾಡಲಿದ್ದಾರೆ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.

About Mallikarjun

Check Also

ಆಶ್ರಯ ಮನೆಗಳ ಕಾಮಗಾರಿಪೂರ್ಣಗೊಳಿಸಿ ಅನುದಾನ ಪಡೆಯಿರಿ:ಮುಖ್ಯಾಧಿಕಾರಿ ನಾಗೇಶ,

Complete the work of shelter homes and get grant: Headmaster Nagesh ವರದಿ : ಪಂಚಯ್ಯ ಹಿರೇಮಠ.ಕಲ್ಯಾಣಸಿರಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.