To give appropriate compensation to the farmers whose land has been seized for construction of Chatushpat Road: Protest by Kapagal farmers
ಮಾನ್ವಿ: ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ರೈತರು ರಾಯಚೂರು -ಸಿಂಧನೂರು ರಸ್ತೆಯಲ್ಲಿ ಕಲ್ಮಲ ದಿಂದ ಸಿಂಧನೂರು ವರೆಗಿನ ಚತುಷ್ಪತ್ ರಸ್ತೆ ನಿರ್ಮಾಣ ಕಾಮಗಾರಿಗಾಗಿ ವಶಪಡಿಸಿಕೊಂಡಿರುವ ಜಮೀನುಗಳಲ್ಲಿ ಪ್ರತಿಭಟನೆ ನಡೆಸಿದರು ರೈತ ಮುಖಂಡರಾದ ಹನುಮಂತರಾಯ್ ಕಪಗಲ್ ವಕೀಲರು ಮಾತನಾಡಿ ರಾಯಚೂರು ಜಿಲ್ಲಾಧಿಕಾರಿಗಳು ಕಲ್ಮಲ ದಿಂದ ಸಿಂಧನೂರು ವರೆಗಿನ ಚತುಷ್ಪತ್ ರಸ್ತೆ ನಿರ್ಮಾಣ ಕಾಮಗಾರಿಗಾಗಿ ವಶಪಡಿಸಿಕೊಂಡಿರುವ ರೈತರ ಜಮೀನುಗಳನ್ನು ಸರ್ವೆ ಮಾಡಿಸಿ ಗಡಿಯನ್ನು ಗುರುತಿಸಿ ಭೂಮಿಯನ್ನು ಕಳೆದು ಕೊಂಡ ರೈತರಿಗೆ ಸೂಕ್ತವಾದ ಪರಿಹಾರವನ್ನು ನೀಡುವುದಾಗಿ ಹಾಗೂ ಜಮೀನುಗಳ ಆಳತೆ ಮಾಡಿ ಗಡಿ ಗುರುತಿಸುವುದಕ್ಕೆ ನೋಟಿಸ್ ನೀಡುವುದಾಗಿ ತಿಳಿಸಿದ್ದರು ಹಾಗೂ ರೈತರಿಗೆ ಪರಿಹಾರ ನೀಡುವವರೆಗೆ ರೈತರ ಜಮೀನಿನಲ್ಲಿ ಯಾವುದೆ ಕಾಮಗಾರಿ ಕೈಗೊಳದಂತೆ ರಸ್ತೆ ನಿರ್ಮಾಣ ಗುತ್ತಿಗೆ ಪಡೆದ ಭಾರತ್ ವಾಣಿಜ್ಯ ಕಂಪನಿಗೆ ಸೂಚಿಸುವುದಾಗಿ ತಿಳಿಸಿದರು ಕೂಡ ರಸ್ತೆ ನಿರ್ಮಾಣ ಕಂಪನಿಯವರು ರೈತರ ಜಮೀನುಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆದು ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಜಮೀನಿನಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು ಕಪಗಲ್ ಗ್ರಾಮದ ವ್ಯಾಪ್ತಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಹಾಗೂ ಸಾವಿರಾರು ರೂ ವೆಚ್ಚ ಮಾಡಿ ಬೆಳೆದಿರುವ ಬೆಳೆಗಳಿಗೂ ವಾಹನ ಸಂಚಾರದಿಂದ ಹಾನಿಯಾಗುತ್ತಿರುವುದರಿಂದ ರೈತರಿಗೆ ಬಾರಿ ನಷ್ಟವಾಗುತ್ತಿದೆ ಕೂಡಲೇ ಜಿಲ್ಲಾಧಿಕಾರಿಗಳು ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ಹಾಗೂ ರೈತರಿಂದ ಸ್ವಾಧಿನಪಡಿಸಿಕೊಂಡಿರುವ ಜಮೀನಿಗೆ ಸೂಕ್ತವಾದ ಪರಿಹಾರವನ್ನು ನೀಡುವವರೆಗೂ ಕಾಮಗಾರಿಯನ್ನು ಸ್ಥಾಗಿತ ಗೊಳಿಸಬೇಕು ಎಂದು ಒತ್ತಾಯಿಸಿದರು.
ಕಪಗಲ್ ಗ್ರಾಮದ ರೈತರಾದ ಶರಣಬಸವ ಬೆಟ್ಟದೂರು,ಮುಸ್ತಾಪಸಾಹುಕರ್, ರಮೇಶನಾಯಕ, ಸಾಲಿ ಗೋಕುಲಪ್ಪಸಾಹುಕರ್,ರಾಮಲಿಂಗಪ್ಪ, ಕೃಷ್ಣನಾಯಕ, ಗೋವಿಂದಪ್ಪನಾಯಕ, ಯಲ್ಲಯ್ಯನಾಯಕ, ರಾಜು, ವಿಜಯಕುಮಾರ ಸಾಹುಕರ್, ಚಂದಪ್ಪನಾಯಕ, ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದರು.