Chikkaotnakal : Mathematics Learning Movement
ಮಾನ್ವಿ : ತಾಲೂಕಿನ ಚಿಕ್ಕಕೊಟ್ನೇಕಲ್ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಚಿಕ್ಕಕೊಟ್ನೇಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ 7 ಗ್ರಾಮದ ಸರ್ಕಾರಿ ಶಾಲೆಗಳ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಮಹಾದೇವಿ ಗಂ ಬಾಲಯ್ಯ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗಣಿತ ಕಲಿಕಾ ಆಂದೋಲನದ ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲೆ ಮುಖ್ಯಶಿಕ್ಷಕ ಸತೀಶ್ ಮಾತನಾಡಿ ಗಣಿತ ವಿಷಯ ಮಕ್ಕಳಿಗೆ ಕಬ್ಬಿಣದ ಕಡಲೆ. ಆದಕಾರಣ ಸರ್ಕಾರ ಕ್ಲಿಷ್ಟಕರವಾದ ವಿಷಯವನ್ನು ಸರಳಿಕರಣಗೊಳಿಸಲು ಮತ್ತು ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹುಟ್ಟಲು 4, 5, 6, ತರಗತಿಗಳಿಗೆ ಗಣಿತ ಕಲಿಕಾ ಆಂದೋಲನದ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ ಎಂದು ಹೇಳಿದರು.
ಗಣಿತ ಕಲಿಕಾ ಆಂದೋಲನ ಪರೀಕ್ಷೆಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು 4ನೇ ತರಗತಿಯಲ್ಲಿ ಪ್ರಥಮ ವರ್ಷ ತಂದೆ ಚಂದ್ರಶೇಖರ್ ಚಿಕ್ಕಕೊಟ್ನೇಕಲ್, ದ್ವಿತೀಯ ತೇಜ್ ತಂದೆ ದೇವರಾಜ ದೇವಿಪುರ, ತೃತೀಯ ತೇಜ್ ನಾಯಕ ತಂದೆ ಸೋಮಲಿಂಗಪ್ಪ ನಲ್ಗಂದಿನ್ನಿ. 5ನೇ ತರಗತಿಯಲ್ಲಿ ಪ್ರಥಮ ದಿವ್ಯ ತಂದೆ ದ್ಯಾವಪ್ಪ ದೇವಿಪುರ, ದ್ವಿತೀಯ ಮಲ್ಲಿಕಾರ್ಜುನ ತಂದೆ ದುರ್ಗಪ್ಪ ಯಡಿವಾಳ, ತೃತೀಯ ಸುದರ್ಶನ ತಂದೆ ಹನುಮೇಶ ಚಿಕ್ಕಕೊಟ್ನೇಕಲ್. 6ನೇ ತರಗತಿಯಲ್ಲಿ ಪ್ರಥಮ ರಾಜೇಶ್ವರಿ ತಂದೆ ಹನುಮಪ್ಪ ದೇವಿಪುರ, ದ್ವಿತೀಯ ಲಕ್ಷ್ಮೀ ತಂದೆ ನರಸಪ್ಪ ಜಾಗೀರಪನ್ನೂರು, ತೃತೀಯ ರಾಜೇಶ್ವರಿ ತಂದೆ ಹಂಪಯ್ಯ ಚಿಕ್ಕಕೊಟ್ನೇಕಲ್ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಮಹಾಂತೇಶ, ನಾಸೀರ್ ಪಾಷಾ, ಮಹೇಶ್,ಹಾಗೂ ಮುಖ್ಯ ಶಿಕ್ಷಕಿ ಅಂಬುಜಾ ಸೇರಿದಂತೆ ಎಲ್ಲಾ ಶಾಲೆಯ ಸಹ ಶಿಕ್ಷಕರು ಮತ್ತು ಗ್ರಾಪಂ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಸರಸ್ವತಿ ಸಂಗಡಿಗರಿಂದ ಪ್ರಾರ್ಥನೆ ಹಾಡಿದರು. ಅತಿಥಿ ಶಿಕ್ಷಕರಾದ ಸುಭಾಷ್ ಸ್ವಾಗತಿಸಿದರು ಮೃತ್ಯುಂಜಯ ಶಿಕ್ಷಕರು ನಿರೂಪಿಸಿ ವಂದಿಸಿದರು.