Appeal to the Collector to replace the purchase deeds
ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ಬಣ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ರಾಜ್ಯಾಧ್ಯಕ್ಷರಾದ ಹೆಚ್.ಹನುಮಂತ ಸೀಕಲ್ ಮಾತನಾಡಿ ಪಟ್ಟಣದಲ್ಲಿನ ಸರ್ವೆ ನಂ 6/1 ಹಾಗೂ 6/2 ರಲ್ಲಿ ದಿ.ಗೌಸ್ ಖರೀಮ್ ಸಾಬ್ ರವರು 1969 ರಲ್ಲಿ ತಮ್ಮ 5-35 ಗುಂಟೆ ಜಮೀನಿನ ಪೈಕೆ 3-10 ಹಾಗೂ 0-39 ಜಮೀನನ್ನು ಉತ್ತರ ಭಾಗದಲ್ಲಿ ಟಿ.ಎ.ಪಿ.ಸಿ.ಎಂ.ಎಸ್. ಮಾನ್ವಿಯವರಿಗೆ ಖರೀದಿಗೆ ನೀಡಿರುತ್ತಾರೆ. ಅದರೆ ಟಿ.ಎ.ಪಿ.ಸಿ.ಎಂ.ಎಸ್. ಮಾನ್ವಿ ರವರು ಜಮೀನು ಮಾರಾಟ ಮಾಡಿರುವ ದಿ.ಗೌಸ್ ಖರೀಮ್ ಸಾಬ್ ರವರ ದಕ್ಷಿಣ ದಿಕ್ಕಿನಲ್ಲಿ ಉಳಿದ ಜಮೀನಿನಲ್ಲಿ ಗೋಡನ್ ಗಳನ್ನು ಗಳನ್ನು ಕಟ್ಟಿಕೊಂಡಿರುತ್ತಾರೆ. ದಿ.ಗೌಸ್ ಖರೀಮ್ ಸಾಬ್ ರವರ ವಾರಸುದಾರರು ಕಳೆದ 50 ವರ್ಷಗಳಿಂದ ತಮ್ಮ ಜಮೀನು ಅಳತೆ ಮಾಡಿಸಿ ಕೊಂಡು ಉಳಿದ ತಮ್ಮ ಜಮೀನು ಬಿಟ್ಟು ಕೊಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರು ಕೂಡ ಟಿ.ಎ.ಪಿ.ಸಿ.ಎಂ.ಎಸ್. ಮಾನ್ವಿಯವರು ಬಿಟ್ಟು ಕೋಟ್ಟಿಲ್ಲ ಹಾಗೂ ಖರೀದಿ ಪತ್ರಗಳ ಅದಲಿ ಬದಲಿ ಕೂಡ ಮಾಡದೆ ಇರುವುದರಿಂದ ಜಮೀನು ಮಾಲಿಕರಿಗೆ ಆನ್ಯಾಯವಾಗಿದ್ದು ಕೂಡಲೇ ತಾವುಗಳು ಟಿ.ಎ.ಪಿ.ಸಿ.ಎಂ.ಎಸ್. ಮಾನ್ವಿಯವರಿಗೆ ಜಮೀನು ವಾರಸುದಾರರಿಗೆ ಉಳಿದ ಜಮೀನು ಬಿಟ್ಟು ಕೊಡುವಂತೆ ಹಾಗೂ ಖರೀದಿ ಪತ್ರಗಳ ಅದಲಿ ಬದಲಿ ಮಾಡಿಕೊಳ್ಳುವಂತೆ ಆದೇಶಿಸಬೇಕು ಎಂದು ಕೋರಿದರು.
ರಾಜಾ ವಿಜಯಕುಮಾರ ದೊರೆ,ನರಸಪ್ಪ ಜೂಕೂರು,ಚಾಂದಪಾಷಾ ಮುಲ್ಲಾ,ದೊಡ್ಡಪ್ಪ ಹೂಗಾರ,ಬಸವಪ್ರಭು,ಹನ್ಮಂತ ಉದ್ಬಾಳ್, ಮಲ್ಲನಗೌಡ,ಅಮರೇಶ ಸಜ್ಜನ್,ಗುರುರಾಜ ಕುಲಕರ್ಣಿ, ಹನ್ಮಂತ ಬೈಲಮರ್ಚೆಡ್,ಆನಂದ ಭೋವಿ ಸೇರಿದಂತೆ ಇನ್ನಿತರರು ಇದ್ದರು.