Breaking News

ಮಹಿಳೆಯರ ಸಬಲೀಕರಣದಿಂದ ಮಾತ್ರ ಅಭಿವೃಧ್ಧಿ ಸಾಧ್ಯ: ಅಬ್ದುಲ್ ವಾಹೀದ್

Development is only possible through empowerment of women: Abdul Wahee

ಜಾಹೀರಾತು

ಮಾನ್ವಿ: ಪಟ್ಟಣದ ಶಾಸಕರ ಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಘಟಕ ಮಾನ್ವಿ ಮತ್ತು ಕುಟುಂಬ ಶ್ರೀ ರಾಷ್ಟ್ರೀಯ ಸಂಪನ್ಮೂಲ ಸಂಸ್ಥೆ ಇವರುಗಳ ಸಹಯೋಗದಲ್ಲಿ ನಡೆದ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳ ಒಗ್ಗೂಡಿಸುವಿಕೆ ಯೋಜನೆ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ಗ್ರೇಡ್ -೨ ತಹಸೀಲ್ದಾರ್ ಅಬ್ದುಲ್ ವಾಹಿದ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಸರಕಾರವು ಮಹಿಳಾ ಸ್ವ ಸಹಾಯ ಸಂಘಗಳ ಅಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತಂದಲ್ಲಿ ಮಾತ್ರ ಸರಕಾರದ ಯೋಜನೆಗಳ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಮಹಿಳಾ ಸಬಲೀಕರಣದಿಂದ ಮಾತ್ರ ದೇಶದ ಅಭವೃಧ್ಧಿ ಸಾಧ್ಯ ಎಂದು ತಿಳಿಸಿದರು.
ತಾ.ಪಂ.ಇ.ಓ. ಖಾಲೀದ್ ಅಹ್ಮದ್ ಮಾತನಾಡಿ ತಾಲೂಕಿನಲ್ಲಿ ೧೨ಸಾವಿರ ಮಹಿಳೆಯರು ಸ್ವ-ಸಹಾಯ ಸಂಘಗಳ ವ್ಯಾಪ್ತಿಗೆ ತರಲಾಗಿದ್ದು ಗ್ರಾ.ಪಂ. ಮಟ್ಟದ ಒಕ್ಕೂಟಗಳಿಂದ ಸ್ವ-ಸಹಾಯ.ಸಂಘದ ಮಹಿಳೆಯರಿಗೆ ಕನಿಷ್ಠ ಒಂದು ಲಕ್ಷ ಐವತ್ತು ಸಾವಿರ ರೂ ಗಳನ್ನು ಅರ್ಹ ಸ್ವಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿಯ ರೂಪದಲ್ಲಿ ಜೀವನೋಪಾಯ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಸಂಘದಲ್ಲಿನ ಮಹಿಳೆಯರಿಗೆ ಕಿರು ಆಹಾರ ಉತ್ಪಾದನಾ ಘಟಕಗಳ ಸ್ಥಾಪನೆ ಮಾಡಲು ವೈಯಕ್ತಿಕ ಸಾಲವನ್ನು ಪಿ.ಎಂ.ಎಫ್.ಎA.ಇ. ಅಡಿಯಲ್ಲಿ ನೀಡಲಾಗುವುದು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮಹಿಳಾ ಸ್ವ ಸಹಾಯ ಸಂಘಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಅಭಿವೃದ್ದಿಗೆ ಶ್ರಮಿಸುವಂತೆ ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಘಟಕದ ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕ ಶಿವರಾಜ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರುದ್ರಮ್ಮ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜ, ತಾ.ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್.ಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ,ಬಿ.ಸಿ.ಎಂ.ಅಧಿಕಾರಿ ನೀಲ್ಲಮ್ಮ . ಶಿಶುಅಭಿವೃದ್ದಿ ಅಧಿಕಾರಿ ಮನ್ಸೂರ್ ಅಹಮ್ಮದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

About Mallikarjun

Check Also

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled ಜಮಖಂಡಿ 05-01 …

Leave a Reply

Your email address will not be published. Required fields are marked *