Join hands in cleaning work-Tampam EO Lakshmidevi call

ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಎಸ್ ಬಿಎಂ ಯೋಜನೆಯಡಿ ಸ್ವಚ್ಛತಾ ಹೀ ಸೇವಾ ಅಂಗವಾಗಿ ಗ್ರಾಮದ ಎನ್ ಆರ್ ಎಲ್ ಎಂ ಶೇಡ್ ಮುಂಭಾಗದ್ಲಲಿ ಶ್ರಮಧಾನ ಕೈಗೊಳ್ಳಲಾಯಿತು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀ
ದೇವಿ ಅವರು ಮಾತನಾಡಿ, ಸೆ.15ರಿಂದ ಗ್ರಾಮೀಣ ಭಾಗದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿಯೊಬ್ಬರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಬೇಕು. ಸ್ವಚ್ಛತಾ ಕಾರ್ಯ ಅಭಿಯಾನಕ್ಕೆ ಮಾತ್ರ ಸೀಮಿತ ವಾಗಬಾರದು. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಎಲ್ಲರೂ ಸಹಕಾರ ನೀಡಬೇಕು. ಮನೆ ಮನೆಗೆ ಬಂದು ಕಸ ಸಂಗ್ರಹಿಸುವವ ಸಿಬ್ಬಂದಿಗೆ ಸಹಕಾರ ನೀಡಬೇಕು. ಮನೆ ಹಂತದಲ್ಲೇ ಹಸಿ-ಒಣ ಕಸ ವಿಂಗಡಿಸುವ ಕೆಲಸವಾಗಬೇಕು ಎಂದರು.
ಗ್ರಾಪಂ ಅಧ್ಯಕ್ಷರಾದ ಆಂಜನೇಯ ಅವರು ಮಾತನಾಡಿ, ಬಸಾಪಟ್ಟಣ ಗ್ರಾಮವನ್ನು ಸುಂದರ ಗ್ರಾಮವನ್ನಾಗಿ ಮಾಡಲಾಗುವುದು. ಗ್ರಾಮದ ಎಲ್ಲರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.
ಶ್ರಮಧಾನ : ಅಧಿಕಾರಿಗಳು, ಗ್ರಾಪಂ ಸದಸ್ಯರು, ವಿವಿಧ ಸ್ವಸಹಾಯ ಸಂಘದ ಸದಸ್ಯರು ಎನ್ ಆರ್ ಎಲ್ ಎಂ ಶೇಡ್ ಮುಂಭಾಗದಲ್ಲಿ ಬೆಳೆದಿದ್ದ ಕಸ ವಿಲೇವಾರಿ ಮಾಡಿದರು. ನಂತರ ಪ್ರತಿಜ್ಙಾ ವಿಧಿ ಬೋಧಿಸಲಾಯಿತು.
ತಹಸೀಲ್ದಾರರಾದ ಮಂಜುನಾಥ, ಉಪ ತಹಸೀಲ್ದಾರರಾದ ಅಬ್ದುಲ್ ರಹೇಮಾನ್, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ವಿದ್ಯಾವತಿ, ಉಪಾಧ್ಯಕ್ಷರಾದ ರತ್ನಮ್ಮ, ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರವೀಣ್ ಜೋನ್ಸ್, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ, ತಾಪಂ ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿಗಳು, ಎನ್ ಆರ್ ಎಲ್ ಎಂ, ಆಶಾ, ಅಂಗನವಾಡಿ ಕಾರ್ಯಕರ್ತರು, ಸ್ನೇಹ ಸಂಸ್ಥೆ ಸದಸ್ಯರು ಇದ್ದರು.