Breaking News

ಚಳಿಗಾಲದಅಧಿವೇಶನದಲ್ಲಿ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಅನೇಕಬೇಡಿಕೆಇಡೇರಿಸಲು ಈ ಸಮಾಜದ ಪರವಾಗಿ ಧ್ವನಿಯಾಗಲು ಸರ್ಕಾರಕ್ಕೆ ಮನವಿ. ಡಾ.ಎಮ್ ಬಿ.ಹಡಪದ ಸುಗೂರ ಎನ್

A request to the Government to be a voice on behalf of the Hadapa Appanna (Barber) Society in the winter session to raise many demands. Dr. M B. Hadapada Sugura N

ಕಲಬುರಗಿ:- ರಾಜ್ಯಾದ್ಯಂತ 14 ರಿಂದ 15 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜವು ತಲೆ ತಲಾಂತರಗಳಿಂದ ಜಾತಿ ಭೇದವಿಲ್ಲದೆ ಯಾವುದೇ ಜನಾಂಗದವರಿಗೆ ರೋಗ ರುಜಿನಗಳನ್ನು ಲೆಕ್ಕಿಸದೇ ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳು ನಮ್ಮ ಕುಲ ಕಸಬು ಕ್ಷೌರಿಕ ವೃತ್ತಿಯನ್ನೆ ಮಾಡುತ್ತಾ ಜೀವನ ಸಾಗಿಸುವ ಪರಿಸ್ಥಿತಿ ಈ ಸಮುದಾಯದಲ್ಲಿ ಇದೆ. ಆಗ ರಾಜ್ಯದ ಸಿ.ಎಮ್ ಸಿದ್ರಾಮಯ್ಯನವರು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಹಿಂದೆ ರಾಜ್ಯ ಸರ್ಕಾರ ಹಜಾಮ ಎಂಬ ಪದ ಬಳಕೆ ಮಾಡಬಾರದು ಎಂದು .
ಆಗ ಸಮಾಜ ಕಲ್ಯಾಣ ಸಚಿವರಾದ ಶ್ರೀ ಎಚ್ ಆಂಜನೇಯ ಸಾಹೇಬರು ನೀಷೆಧ ಮಾಡಿದರು .ಆದರೆ ನಿಷೇಧಿತ ಪದ ಬಳಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ “ಅಟ್ರಾಸಿಟಿ‘ ಕಾನೂನು
(ಜಾರಿಗೆ ) ‘ ಜರುಗಿಸುವ ಕಾಯ್ದೆ ರಚನೆ ಮಾಡಲಿಲ್ಲ. ?
ಸಭೆ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕರು ಈ ನಿಷೇಧಿತ ಪದ ಬಳಸಿ ಸಮುದಾಯದವರಿಗೆ ಅವಮಾನಿಸುವಂತಾಗಿದೆ ಕ್ಷೌರಿಕ ಕುಲ ವೃತ್ತಿಯನ್ನೇ ನಂಬಿ ಬದುಕುತ್ತಿರುವ ನಮ್ಮ ಹಡಪದ ಅಪ್ಪಣ್ಣ ( ಕ್ಷೌರಿಕರಿಗೆ) ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಿಟಿಯಲ್ಲಿ ಸಹ ಅನ್ಯ ರಾಜ್ಯದವರು ಬಂದು ಸಲೂನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುತ್ತಿರುವುದರಿಂದ ಸ್ಥಳೀಯವಾಗಿ ನಮ್ಮೆಲ್ಲಾ ಕ್ಷೌರಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ?
ಇದೇ 2023 ರಲ್ಲಿ ಪೆಬ್ರವರಿ ತಿಂಗಳಲ್ಲಿ ಹಡಪದ ಅಪ್ಪಣ್ಣ ಸಮುದಾಯದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ತಂದು ಘೋಷಣೆಯ ಆದೇಶ ವನ್ನು ರಾಜ್ಯದ ಆಗಿನ್ ಜನಪ್ರಿಯ ಮುಖ್ಯಮಂತ್ರಿ ಗಳಾದ ಶ್ರೀ ಬಸವರಾಜ ಭೊಮ್ಮಾಯಿ ಜಿ ಅವರು ಆದೇಶ ಹೊರಡಿಸಿದರು. ಈ ಸಮಾಜದ ಪ್ರತ್ಯೇಕ ನಿಗಮವನ್ನು ಈಗೀನ್ ಕಾಂಗ್ರೆಸ್ ಸರ್ಕಾರ ಸಮಪರ್ಕವಾಗಿ ಜಾರಿಗೆ ತಂದು ಈ ಹಡಪದ ಅಪ್ಪಣ್ಣ ಸಮುದಾಯದ ಪ್ರತ್ಯೇಕ ನಿಗಮ ಮಂಡಳಿ ಗೇ 50 ಕೋಟಿ ರೊ. ಮೀಸಲಿಡಬೇಕು, ಮತ್ತು
ಬಸವಕಲ್ಯಾಣ ದಲ್ಲಿ ಇರುವ ಬಸವಣ್ಣನವರ ಅರಿವಿನ (ಮನೆ) ಗವಿಯ ಪಕ್ಕದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ (ಗವಿಯನ್ನು ) ಬಿ‌.ಕೆ.ಡಿ‌.ಬಿ ಯ ಪ್ರಾಧಿಕಾರಕ್ಕೆ ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು‌ .ಮತ್ತು ಬಸವಕಲ್ಯಾಣ ದಲ್ಲಿ ಸಮಾಜದ ಜನರಿಗೆ ಅನುಕೂಲ ಕಲ್ಪಿಸುವ ಮೂಲಕ ಇಲ್ಲಿ ಸಮುದಾಯ ಭವನ ಕಟ್ಟಡ ಕ್ಕೆ 2 ಕೋಟಿ ರೊ. ಸರ್ಕಾರ ನೀಡಬೇಕು, ಮತ್ತು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಬರುವ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಮಸಬಿನಾಳ. ಹಾಗೂ ನಿಜಮುಕ್ತೆ ಶರಣೆ ಹಡಪದ ಲಿಂಗಮ್ಮ ನವರ ಜನ್ಮ ಸ್ಥಳ. ದೇಗಿನಹಾಳ, ಅನ್ನು ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರಿಸಿ ಸರ್ಕಾರ ಅಭಿವೃದ್ಧಿ ಪಡಿಸುವ ಮೂಲಕ ಕಾರ್ಯ ಚಟುವಟಿಕೆಗಳನ್ನು ಮಾಡಬೇಕು. ಮತ್ತು ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜನರಿಗೆ ಗ್ರಾಮೀಣ ಭಾಗದಲ್ಲಿ ಕ್ಷೌರಿ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಸರ್ಕಾರದ ಅಡಿಯಲ್ಲಿ ‘ಕ್ಷೌರ ಕುಟೀರಗಳು” ನೀಡಬೇಕು. ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಬಂಧುಗಳಿಗೆ ಗ್ರಾಮ ಪಂಚಾಯತ್ ನಿಂದ ಪ್ರತ್ಯೇಕವಾಗಿ ಮನೆಗಳು ನಮ್ಮ ಕಾಯಕ ಬಂಧು ಗಳಿಗೆ ನೀಡುವ ಕೆಲಸ ಸರ್ಕಾರ ಮಾಡಬೇಕು,. ಮತ್ತು ಬೆಂಗಳೂರು ನಗರದಲ್ಲಿ ನಮ್ಮ ಹಡಪದ ಅಪ್ಪಣ್ಣ ಸಮಾಜದ ಮಕ್ಕಳ ವಿಧ್ಯಾಭ್ಯಾಸ ಪಡೆಯಲು ಸರ್ಕಾರ ಈ ಸಮಾಜಕ್ಕೆ ಬೆಂಗಳೂರು ನಗರದಲ್ಲಿ 2 ಎಕರೆ ಜಾಗ ನೀಡಬೇಕು. ಮತ್ತು ಹಡಪದ ಅಪ್ಪಣ್ಣ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಿ ಈ ಸಮಾಜದ ಜನಸಂಖ್ಯೆಯ ಜನಗಣತಿಯನ್ನು ಹೂರ ಹಾಖಬೇಕು. ಮತ್ತು ನಮ್ಮ ಕಲಬುರಗಿ ಜಿಲ್ಲೆಯಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ಸಮುದಾಯದ ಭವನ ನಿರ್ಮಾಣಕ್ಕೆ ನೀವೇಶನ (ಜಾಗ) ನೀಡಿ ಈ ಭವನ ಕಟ್ಟಡಕ್ಕೆ 1 ಕೋಟಿ ರೊ ನೀಡಬೇಕು, ಎಂದು ಮನವಿ ಮಾಡಲಾಗುವುದು. ಮತ್ತು ಹಡಪದ ಅಪ್ಪಣ್ಣ ಸಮಾಜವು ಈಗಾಗಲೇ ಪ್ರವರ್ಗ- 2 ರಲ್ಲಿ ಇದ್ದು‌ ಈ ಮೀಸಲಾತಿ ಯನ್ನು ಪಡೆಯಲು ಈ ಸಮಾಜಕ್ಕೆ ಎಸ್ಸಿಗೆ ಅಥವಾ ಎಸ್ಟಿಗೇ ಸೇರ್ಪಡೆ ಮಾಡಲು ರಾಜ್ಯ ಕಾಂಗ್ರೇಸ್ ಸರ್ಕಾರ ಕ್ಕೆ ಮನವಿ. ಮಾಡಲಾಗುವುದು. ಮತ್ತು
ನಮ್ಮ ಸಮಾಜದ ಬಂಧುಗಳಿಗೆ ಕುಟುಂಬದ ನಿರ್ವಹಣೆ ಮಾಡಲು ತುಂಬಾ ಕಷ್ಟಕರವಾಗಿದೆ . ನಮ್ಮ ಸಮಾಜದ ಜನತೆಗೆ ಸೂಕ್ತವಾದ ಮೀಸಲಾತಿ ಸೌಲಭ್ಯವಿಲ್ಲ ಎಲ್ಲಾ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದರು . ಸಹ ಪ್ರಯೋಜನ ಆಗುತ್ತಿಲ್ಲ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ, ತೀರಾ ಹಿಂದುಳಿದ ಸಮಾಜ ನಮ್ಮ ಹಡಪದ ಅಪ್ಪಣ್ಣ ಸಮಾನಯ ಈ ಸಮಾಜದ ಪರವಾಗಿ ಚಳಿಗಾಲದ ಅಧಿವೇಶನದಲ್ಲಿ ದ್ವನಿ ಇಲ್ಲದ ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಪರವಾಗಿ ಧ್ವನಿ ಯಾಗಿ ಈ ಸಮಾಜದ ಸಮಸ್ಯೆಗಳ ಕುರಿತು ಇದೇ 2023 ನೇ ಸಾಲಿನ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುವರ್ಣ ಸೌಧದ ಒಳಗೆ ಚರ್ಚೆಯಾಗಲಿ ಎಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ‌.ಹಡಪದ ಸುಗೂರ ಎನ್ ಅವರು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ‌.
ಇದೆ ಸಂದರ್ಭದಲ್ಲಿ –
ರಾಜ್ಯ ಸಂಘಟನಾ ಕಾರ್ಯದರ್ಶಿ- ಬಸವರಾಜ ಹಡಪದ ಹಳ್ಳಿ. ಮತ್ತು ರಾಜ್ಯ ಹಡಪದ ಸಮಾಜದ ಕಾನೂಯ ಸಲಹೆಗಾರರು – ರಮೇಶ್ ಹಡಪದ ಮಲಕೋಡ್,
ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು- ಬಸವರಾಜ ಹಡಪದ ಸುಗೂರ ಎನ್. ಕಲಬುರಗಿ ಜಿಲ್ಲೆಯ ಅಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ, ಕಲಬುರಗಿ ಜಿಲ್ಲೆಯ ಕಾರ್ಯದ್ಯಕ್ಷರು – ಭಗವಂತ ಸಹ ಶಿಕ್ಷಕರು ಹೊನ್ನಕಿರಣಗಿ, ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ-ರಮೇಶ ಹಡಪದ ನೀಲೂರ್. ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷರು – ರುದ್ರಮಣಿ ಅಪ್ಪಣ ಬಟಗೇರಾ , ಹಾಗೂ ಕಲಬುರಗಿ ಜಿಲ್ಲೆಯ ಸಹ ಸಂಘಟನಾ ಕಾರ್ಯದರ್ಶಿ- ಸಂತೋಷ ಬಗದುರಿ ಕಲಬುರಗಿ ಜಿಲ್ಲೆಯ ಸಹ ಕಾರ್ಯದರ್ಶಿ- ಮಹಾದೇವ ರಾವೂರ, ಹಾಗೂ ಕಲಬುರಗಿ ಜಿಲ್ಲೆಯ ನಗರಾಧ್ಯಕ್ಷರು -ಮಲ್ಲಿಕಾರ್ಜುನ ಹಡಪದ ಸಾವಳಗಿ, ಕಲಬುರಗಿ ಜಿಲ್ಲೆಯ ತಾಲೂಕು ಅಧ್ಯಕ್ಷರು- ಚಂದ್ರಶೇಖರ ತೋನಸನಹಳ್ಳಿ. ಮತ್ತು ಕಲಬುರಗಿ ತಾಲ್ಲೂಕು ಕಾರ್ಯದರ್ಶಿ ಗಳು-ವಿನೋದ ಅಂಬಲಗಾ , ಸೇರಿದಂತೆ ಅನೇಕರು ಈ ಪತ್ರಿಕೆ ಪ್ರಕಟಣೆ ಯಲ್ಲಿ
ಉಪಸ್ಥಿತರಿದ್ದರು ಎಂದು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳಾದ ಡಾ‌.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ತಿಳಿಸಿದರು,

ಡಾ‌.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.