Enroll their Aadhaar Card Number in the Pahani of Lands: Raju Pirangi
ಮಾನ್ವಿ: ರೈತರು ತಮ್ಮ ಜಮೀನುಗಳ ಪಹಣಿಯಲ್ಲಿ ತಮ್ಮ ಆಧಾರ ಕಾರ್ಡ ಸಂಖ್ಯೆಯನ್ನು ನೊಂದಾಯಿಸಿಕೊಳ್ಳುವುದರಿಂದ ಭೂಮಿಯ ಮಾಲಿಕತ್ವದಲ್ಲಿ ತೊಂದರೆ ಯಾಗುವುದಿಲ್ಲ ಎಂದು ತಹಸೀಲ್ದಾರ್ ರಾಜು ಪಿರಂಗಿ ತಿಳಿಸಿದರು.
ತಾಲೂಕಿನ ಹರನಹಳ್ಳಿ ಗ್ರಾಮದಲ್ಲಿನ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತನಾಡಿ ರೈತರು ಸರಕಾರದ ಯೋಜನೆಗಳ ಲಾಭಗಳನ್ನು ಪಡೆಯುವುದಕ್ಕೆ ಅನುಕೂಲವಾಗುತ್ತದೆ ಅದರಿಂದ ಗ್ರಾಮದಲ್ಲಿನ ಪ್ರತಿಯೊಬ್ಬ ರೈತರು ಕೂಡ ತಮ್ಮ ಜಮೀನುಗಳ ಪಹಣಿಗಳಿಗೆ ಅಧಾರ ಕಾರ್ಡ ನೊಂದಾಯಿಸಿಕೊಳ್ಳಬೇಕು. ರೈತರಿಗೆ ಅಧಾರ ನೊಂದಾಣಿಗೆ ಅನುಕೂಲವಾಗುವಂತೆ ತಾಲೂಕು ಆಡಳಿತದಿಂದ ಎಲ್ಲಾ ನೆರವು ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಭಾಗವಹಿಸಿದರು.