Breaking News

ಚಿಕ್ಕೋಡಿಪಟ್ಟಣದ ಅರ್ಥ ಪೂರ್ಣ ಬಸವ ಪಂಚಮಿ ಆಚರಣೆ

Chikkodipatnam means Purna Basava Panchami celebration

ಜಾಹೀರಾತು

ಚಿಕ್ಕೋಡಿ. ಪಟ್ಟಣದ ಇಂದಿರಾ ನಗರದಲ್ಲಿ ಬಸವ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ, ಬಸವ ಪಂಚಮಿಯನ್ನು ಜೀವನ ಮಾಂಜರೇಕರ ಮತ್ತು ಉದಯ ವಾಘಮಾರೆ ಇವರು ಚಾಲನೆಗೊಳಿಸಿದರು, ಮಾನವ ಬಂಧುತ್ವ ವೇದಿಕೆ ಮತ್ತು ಇತರ ಹಲವಾರು ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿತು, ಅತಿಥಿಗಳಾಗಿ ಆಗಮಿಸಿದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ನಾಗರ ಪಂಚಮಿ ಹಬ್ಬದ ನಿಮಿತ್ಯ ಹುತ್ತಿಗಳಿಗೆ ಹಾಲೆರೆದು ಹಾಲು ನಾಶ ಮಾಡುವ ಬದಲಾಗಿ ಬಡ ಮಕ್ಕಳಿಗೆ ಹಾಲು ಉನ್ನಿಸಿದರೆ ಆ ಭಗವಂತನಿಗೆ ಮುಟ್ಟಲಿದೆ, ಹಾವು ಹಾಲು ಕುಡಿಯುವುದಿಲ್ಲ, ಅದು ಮಾಂಸಾಹಾರಿ ಪ್ರಾಣಿಯಾಗಿದೆ, ರಾಜ್ಯದಲ್ಲಿ ಸುಮಾರು ಹನ್ನೆರಡು ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ನಾವು ಮಾಡುವ ಧಾರ್ಮಿಕ ಕಾರ್ಯದಿಂದ ಪರೋಪಕಾರವಾಗಬೇಕು, ಸತೀಶ ಜಾರಕಿಹೊಳಿ ಇವರ ಮಾನವ ಬಂಧುತ್ವ ವೇದಿಕೆಯು ದಶಕಗಳಿಂದ ಕರ್ನಾಟಕ ರಾಜ್ಯದಾದೆಂತ ಮೂಢನಂಬಿಕೆಗಳ ವಿರುದ್ಧ ಮತ್ತು ಮೂಲ ನಂಬಿಕೆಗಳ ಪರವಾಗಿ ಹಲವಾರ ಕಾರ್ಯಗಳನ್ನು ಮಾಡುತ್ತಿದ್ದು ನಂಬುವಂತಿದೆ ಎಂದು ಹೇಳಿದರು, ಸಿದ್ಧು ಪಾಟೀಲ ಮಾತನಾಡಿ, ಸಮಾನತೆಗಾಗಿ ಬಸವಣ್ಣನವರು ಮಾಡಿದ ತ್ಯಾಗ ಅಷ್ಟಿಷ್ಟಲ್ಲಾ ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು, ರವೀಂದ್ರ ಹಂಪಣ್ಣವರ ಮಾತನಾಡಿ, ಬಸವ ಪಂಚಮಿ ಆಚರಣೆ ಕೇವಲ ಇಂದಿರಾ ನಗರಕ್ಕೆ ಮಾತ್ರ ಸೀಮಿತವಾಗದೇ, ಚಿಕ್ಕೋಡಿ ಪಟ್ಟಣದಲ್ಲಿ ಗಲ್ಲಿ ಗಲ್ಲಿ ಗಳಲ್ಲಿ ಆಚರಣೆ ಆಗಬೇಕು, ಪ್ರತಿಯೊಬ್ಬರ ಮನೆಮನೆಗಳಿಗೆ ಹೋಗಿ ಮಹಿಳೆಯರಿಗೆ ಬಸವ ಪಂಚಮಿಯ ಬಗ್ಗೆ ಜಾಗ್ರತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು, ಕಾರ್ಯಕ್ರಮವನ್ನು ಸಂತೋಷ ದೊಡ್ಡಮನಿ ಇವರು ನಿರೂಪಿಸಿ, ಕೊನೆಗೆ ವಂದಿಸಿದರು. ಈ ಸಂಧರ್ಭದಲ್ಲಿ ಹೋರಾಟಗಾರ ಸಂಜು ಬಡಿಗೇರ, ರುದ್ರಯ್ಯಾ ಹಿರೇಮಠ, ವಿಶಾಲ ಮೇತ್ರೆ, ಅಶ್ವತ್ ಮಾಳಕರಿ ಸೇರಿದಂತೆ ಇತರ ಹಲವಾರು ಸಮಾನ ಮನಸ್ಕರು ಉಪಸ್ಥಿತರಿದ್ದರು..

About Mallikarjun

Check Also

ದಸರಾ ಮಹೋತ್ಸವದ ಅಂಗವಾಗಿ ಕಲ್ಮಠದಲ್ಲಿ ಸರ್ವಧರ್ಮ ಸಮ್ಮೇಳನ

Interfaith conference in Kalmath as part of Dussehra celebrations ಮಾನ್ವಿ: ಪಟ್ಟಣದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 49 ನೇ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.