
Academic and sports stars honored, talent rewarded – respect for achievement
ಗಂಗಾವತಿ ಜೂನ್ 22:ಕೊಪ್ಪಳದ ಫಾನಘಂಟಿ ಕಲ್ಯಾಣ ಮಂಟಪದಲ್ಲಿ ಹೈಬ್ರಿಡ್ ನ್ಯೂಸ್ ಮತ್ತು ಮಹಿಳಾ ಧ್ವನಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ” ವಿಜೃಂಭಣೆಯಿಂದ ನೆರವೇರಿತು.
ಈ ಸಂಧರ್ಭದಲ್ಲಿ ಗಂಗಾವತಿಯ ಬೇತಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ರೇಖಾ ಮುರುಗೇಶ್ ಅವರು ಕನ್ನಡ ವಿಷಯದಲ್ಲಿ ಅತಿ ಉತ್ತಮ ಅಂಕಗಳನ್ನು ಪಡೆದು ಶೈಕ್ಷಣಿಕವಾಗಿ ಕಿರೀಟವನ್ನೇ ತೊಟ್ಟಿದ್ದಾರೆ. ಅಲ್ಲದೆ, ಅವರು ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿ, ಪದಕ ಗಳಿಸಿರುವ ಹಿನ್ನೆಲೆಯಲ್ಲಿ, ಸಮಾರಂಭದಲ್ಲಿ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾ ಶಿಕ್ಷಕ ಬಾಬುಸಾಬ್ ಅವರು, “ರೇಖಾ ಅವರು ಕನ್ನಡದಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ರಾಷ್ಟ್ರಮಟ್ಟದ ಸಾಧನೆ ಮಾಡಿರುವುದು ನಮ್ಮೆಲ್ಲರ ಹೆಮ್ಮೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಮತೋಲನ ಸಾಧಿಸುವುದು ಸುಲಭವಲ್ಲದ ನಡುವೆಯೂ, ಸಮಯದ ಶಿಸ್ತಿನಿಂದ, ಅವಿರತ ಪರಿಶ್ರಮದಿಂದ ಅವರು ಎರಡೂ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಿದ್ದಾರೆ,” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ 2025ನೇ ಸಾಲಿನ ಪದ್ಮಶ್ರೀ ಪುರಸ್ಕೃತರು ಭೀಮವ್ವ ಶಿಳ್ಳೇಕ್ಯಾತರ, ಶ್ರೀ ಸಿದ್ದೇಶ್ವರ ಸಂಸ್ಥಾನದ ಮರುಳಾರಾಧ್ಯ ಶಿವಚಾರ್ಯ ಸ್ವಾಮೀಜಿ, ಹೈಬ್ರಿಡ್ ನ್ಯೂಸ್‌ನ ಬಿ.ಎನ್. ಹೊರಪೇಟೆ, ಮಹಿಳಾ ಧ್ವನಿ ಸಂಸ್ಥೆಯ ಸ್ಥಾಪಕಿ ಪ್ರಿಯಾದರ್ಶಿನಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.