Breaking News

ಕಿಡಿಗೇಡಿಗಳದುಷ್ಕೃತ್ಯದಿಂದ ಸಾವಿರಾರು ಮೀನುಗಳ ಸಾವು,,,

Death of thousands of fishes due to misdeeds,,,

ಜಾಹೀರಾತು
ಜಾಹೀರಾತು

ಹೊಂಡಕ್ಕೆ ವಿಷ ಹಾಕಿದ ಗಾತಕರು,,,

ವರದಿ : ಪಂಚಯ್ಯ ಹಿರೇಮಠ,
ಕೊಪ್ಪಳ : ಕುಕನೂರು ಪಟ್ಟಣದ ಲಾಲವಲಿ ದರ್ಗಾದ ಹಿಂದೆ ಇರುವ ಹೊಂಡದ ನೀರಿಗೆ ಗಾತುಕರು ವಿಷ ಬೆರಸಿದ್ದರಿಂದ ಸುಮಾರು ಐವತ್ತರಿಂದ ಅರತ್ತು ಸಾವಿರ ಮೀನುಗಳು ಸತ್ತಿದ್ದು, ಟೆಂಡರ್ ದಾರನು ಕಂಗಾಲಾಗಿದ್ದಾನೆ.

ಈ ಹೊಂಡಕ್ಕೆ ಮೀನುಗಳನ್ನು ಬಿಡಲು ಪಟ್ಟಣ ಪಂಚಾಯತಿಯಿಂದ ಟೆಂಡರ್ ಪ್ರಕ್ರೀಯೇ ಇದ್ದು, ಈ ಬಾರಿಯ ಟೆಂಡರ್ ಪಟ್ಟಣದ ಬಸವರಾಜ ಮಂಡಲಗಿರಿ ಎನ್ನುವವರಿಗೆ ಆಗಿದೆ.

ಈ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ಬಸವರಾಜ ಮಂಡಲಗಿರಿ ಮಾತನಾಡಿ
ಹೊಂಡದಲ್ಲಿ ಸುಮಾರು ಅರವತ್ತು ಸಾವಿರ ಮೀನು ಮರಿಗಳನ್ನು ಈ ಎರಡು ತಿಂಗಳ ಹಿಂದೆ ಬಿಡಲಾಗಿತ್ತು, ಈಗ ಅವುಗಳು ಒಂದು ಕೆಜಿಯಿಂದ ಎರಡು ಕೆಜಿ ತೂಕವಾಗಿದ್ದವು, ಅವುಗಳನ್ನು ಮಾರುಕಟ್ಟೆಗೆ ಕಳಿಸುವ ತಯಾರಿಯಲ್ಲಿದ್ದೇವು, ಶ್ರಾವಣ ಮಾಸವಿದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಇರಲಿಲ್ಲಾ.

ಇನ್ನೇನು ಶ್ರಾವಣ ಮಾಸ ಮುಗಿದಿದ್ದು ಈ ವಾರದೊಳಗೆ ಮಾರುಕಟ್ಟೆಗೆ ಕಳಿಸುವ ತಯಾರಿಯಲ್ಲಿದ್ದೇವು. ಇಂದು ಬೆಳಗ್ಗೆ ಹೊಂಡದ ಹತ್ತಿರ ಬಂದು ನಿಂತಾಗ ಮೀನುಗಳು ಸತ್ತು ದಡದ ಹತ್ತಿರ ಬಿದ್ದಿರುವದನ್ನು ಗಮನಿಸಿದ ನಮಗೆ ದಾರಿಯೇ ತೊಚದಂತಾಯಿತು ಎಂದು ವ್ಯಥೆಯಿಂದ ನುಡಿದರು.

ಸುಮಾರು ಎರಡು ತಿಂಗಳ ಹಿಂದೆಯೇ ಮರಿಗಳನ್ನು ಬಿಟ್ಟಿದ್ದು ಅದಕ್ಕಾಗಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದೇವು, ಅದಲ್ಲದೇ ಅವುಗಳಿಗೆ ಪ್ರತಿ ನಿತ್ಯ ಆಹಾರಕ್ಕಾಗಿ ಸಾವಿರದಿಂದ ಹನ್ನೇರಡು ನೂರು ರೂಪಾಯಿ ಖರ್ಚು ಮಾಡಿದ್ದೇವು, ಇದರಿಂದ ಒಂದು ಬಾರೇಯು ಆದಾಯವನ್ನು ನಾವು ತೆಗೆದುಕೊಂಡಿಲ್ಲಾ.

ಈ ಬಾರಿ ಉತ್ತಮ ಆದಾಯದ ನಿರಿಕ್ಷೇಯಲ್ಲಿದ್ದ ನಮಗೆ ಹೊಂಡದಲ್ಲಿ ಮೀನುಗಳು ಸತ್ತು ಬಿದ್ದಿರುವುದನ್ನು ಕಂಡು ಆಕಾಶವೇ ಕಳಚಿ ಬಿದ್ದಂತಾಗಿದೆ ಎಂದು ಅಳಲನ್ನು ತೋಡಿಕೊಂಡರು.

ಯಾರೋ ಕಿಡಿಗೇಡಿಗಳು ಹೊಂಡಕ್ಕೆ ವಿಷ ಬೆರಸಿದ್ದರಿಂದ ಸಾವಿರಾರು ಮೀನುಗಳ ಮಾರಣ ಹೋಮವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ, ಹೊಂಡಕ್ಕೆ ವಿಷ ಬೆರಸಿದ್ದು ಕುರಿಗಾಯಿಗಳ ಕುರಿಗಳು ಸೇರಿದಂತೆ ಸುತ್ತ ಮುತ್ತಲಿನ ರೈತರ ಜಾನುವಾರುಗಳು ಸಹಿತ ಇದೆ ನೀರನ್ನು ಕುಡಿಯುತ್ತಿದ್ದು ಎಚ್ಚರಿಕೆ ವಹಿಸುವದು ಅಗತ್ಯವಿದೆ ಎಂದು ತಿಳಿಸಿದರು.

ಹೊಂಡದ ಸ್ಥಳಕ್ಕೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಭೇಟಿ ನೀಡಿ ಸತ್ತ ಮೀನುಗಳನ್ನು ವಿಕ್ಷೀಸಿ ಮಾತನಾಡಿ ಇವುಗಳನ್ನು ಪರೀಶಿಲನೆಗಾಗಿ ಮೀನುಗಾರಿಕೆ ಇಲಾಖೆಗೆ ಕಳಿಸಿಕೊಡಲಾಗುವುದು, ವರದಿ ಬಂದ ನಂತರದಲ್ಲಿ ಪರಿಹಾರದ ಕುರಿತು ತಿಳಿಸಲಾಗುವದು ಎಂದರು.

ಹೊಂಡಕ್ಕೆ ಕುಕನೂರು ಆರಕ್ಷಕ ಠಾಣೆಯ ಪಿಐ ಟಿ. ಗುರುರಾಜ ಭೇಟಿ ನೀಡಿ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷ ರೆಹಮಾನ ಸಾಬ ಮಕ್ಕಪ್ಪನವರ, ಮಹಾಂತೇಶ ಹೂಗಾರ, ಮುತ್ತು ರಾಜೂರು, ಚಂದ್ರು ಆರ್, ನಿಂಗರಾಜ ಅಣ್ಣಿಗೇರಿ, ಹನುಮಂತ ಆರುಬೆರಳಿನ, ರುದ್ರೇಶ ಆರುಬೆರಳಿನ ಇನ್ನೀತರರು ವಿಕ್ಷೀಸಿದರು.

About Mallikarjun

Check Also

ನ್ಯಾಯಾಲಯಗಳಲ್ಲಿ ಕನ್ನಡ ಭಾಷಾ ಅನುಷ್ಠಾನ ರಾಜ್ಯ ಸಮಿತಿ ಉದ್ಘಾಟನಾ ಸಮಾರಂಭ.

Inaugural ceremony of the State Committee for Implementation of Kannada Language in Courts. ಬೆಂಗಳೂರು ಮಾರ್ಚ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.