Breaking News

ಭಾರತಿಯ ಕಿಸಾನ್ ಸಂಘದಿಂದ ಧರಣಿ ಮಾಡಲುಅಧಿಕಾರಿಗಳಿಗೆ ಮನವಿ ಸಲ್ಲಿಸಿದ :ಅಧ್ಯಕ್ಷ ಹರೀಶ್

Bharatiya Kisan Sangh has submitted a request to the authorities to hold a sit-in: President Harish.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು : ತಾಲ್ಲೂಕಿನಾದ್ಯಂತ ಖಾಲಿಯಿರುವ ಕೇರೆಗಳಿಗೆ ಸರ್ಕಾರದಿಂದ ನೀರು ತುಂಬಿಸುವ ಯೋಜನೆಯನ್ನು ಪ್ರಾರಂಭಿಸಿದ್ದು ಆದರೆ ಇದುವರೆವಿಗೂ ನಮ್ಮ ಹನೂರು ತಾಲ್ಲೂಕಿನ ಯಾವುದೇ ಕೇರೆಗಳಿಗೆ ನೀರನ್ನು ತುಂಬಿಸಿಲ್ಲ ಆದ್ದರಿಂದ ಮುಂದಿನ ತಿಂಗಳ 4/7/2025 ರಂದು ಪ್ರತಿಭಟನೆ ಮಾಡಲಾಗುವುದು ಎಂದು ಭಾರತಿಯ ಕೀಸಾನ್ ಸಂಘ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಹರೀಶ್ ರವರು ತಿಳಿಸಿದರು.
ಹನೂರು ಪಟ್ಟಣದ ತಹಶಿಲ್ದಾರರ ಕಛೇರಿಯಲ್ಲಿ ಪ್ರತಿಭಟನೆ ಕುರಿತು ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ಈಗಾಗಲೇ ಸರ್ಕಾರವು ಹಲವಾರು ಗ್ಯಾರಂಟಿ ಯೋಜನೆಯನ್ನು ನೀಡಿದ್ದು ಆದರೆ ರೈತರಿಗೆ ಯಾವುದೇ ರೀತಿಯ ಗ್ಯಾರಂಟಿ ನೀಡಿಲ್ಲವಾದರು ನಮ್ಮ ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸಲು ಕೇರೆತುಂಬಿಸುವ ಯೋಜನೆಯನ್ನು ಮುಂದುವರಿಸಿ ನಮ್ಮ ಭಾಗದ ಕೆರೆಗಳಿಗೆ ಸರ್ಕಾರದಿಂದ ತಕ್ಷಣವೇ ನೀರು ಬೀಡುವ ಯೋಜನೆಯನ್ನು ಜಾರಿಗೆ ತರಬೇಕೆಂದು ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಇದರ ಅಂಗವಾಗಿ ಇಂದು ಹನೂರು ಭಾಗದ ಪೋಲಿಸ್ ಠಾಣೆ ಗಳಿಗೆ ಮತ್ತು ತಹಶಿಲ್ದಾರವರ ಕಛೇರಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಶ್ಯಾಗ್ಯ ಪ್ರಸಾದ್ . ಬೋಸ್ಕ್ ,ಜೆಡೆಸ್ವಾಮಿ, ಕಾರ್ಯದರ್ಶಿ ಸದಾನಂದ . ಮಲ್ಲಿಕಾರ್ಜುನ್ , ಸೇರಿದಂತೆ ಇನ್ನಿತರರು ಹಾಜರಿದ್ದರು

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *