Teacher Transfer: Counseling from 11th July to 14th July

ಕೊಪ್ಪಳ ಜುಲೈ 10 (ಕರ್ನಾಟಕ ವಾರ್ತೆ):2022-2023ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ ಕೋರಿಕೆಯ ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಶಿಕ್ಷಕರುಗಳಿಗೆ ಗಣಕೀಕೃತ ಕೌನ್ಸೆಲಿಂಗ್ ಜುಲೈ 11ರಿಂದ ಜುಲೈ 14ರವರೆಗೆ ಉಪನಿರ್ದೇಶಕರ ಕಾರ್ಯಲಯ, ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಯಿAದ ಆನ್‌ಲೈನ್ ಕೌನ್ಸೆಲಿಂಗ್ ಆರಂಭವಾಗುವುದು.
ಪ್ರಾಥಮಿಕ ಶಾಲಾ ವಿಭಾಗ: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜುಲೈ 11ರಂದು ಮುಖ್ಯಗುರುಗಳು ಕ್ರಮ ಸಂಖ್ಯೆ 1ರಿಂದ ಪೂರ್ಣಪಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು ಕ್ರಮ ಸಂಖ್ಯೆ 1ರಿಂದ ಪೂರ್ಣಪಟ್ಟಿ, ಸಹ ಶಿಕ್ಷಕರಿಗೆ ಕ್ರಮ ಸಂಖ್ಯೆ 1 ರಿಂದ 500ರವರೆಗೆ, ಜುಲೈ 12ರಂದು ಪ್ರಾಥಮಿಕ ಶಾಲಾ ವಿಭಾಗದ ಸಹ ಶಿಕ್ಷಕರಿಗೆ ಕ್ರಮ ಸಂಖ್ಯೆ 501 ರಿಂದ ಪೂರ್ಣಪಟ್ಟಿವರೆಗೆ ನಡೆಯಲಿದೆ.
ಪ್ರೌಢಶಾಲಾ ವಿಭಾಗದವÀರಿಗೆ: ಪ್ರೌಢಾಶಾಲಾ ವಿಭಾಗದಲ್ಲಿ ಜುಲೈ 13ರಂದು ವಿಶೇಷ ಶಿಕ್ಷಕರಿಗೆ ಕ್ರಮ ಸಂ 1ರಿಂದ ಪೂರ್ಣಪಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು ಕ್ರಮ 1ರಿಂದ ಪೂರ್ಣಪಟ್ಟಿ, ಸಹ ಶಿಕ್ಷಕರಿಗೆ ಕ್ರಮ ಸಂಖ್ಯೆ 1ರಿಂದ ಪೂರ್ಣಪಟ್ಟಿ, ಜುಲೈ 14ರಂದು ಸಹ ಶಿಕ್ಷಕರಿಗೆ ಉಳಿದಲ್ಲಿ ಮುಂದುವರೆಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಕೊಪ್ಪಳದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.