Kesarhatti: Health awareness program for students
ಗಂಗಾವತಿ. 24 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯ ವಿಭಾಗ ಉಪವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಸಂಸ್ಥೆಯ ಸಹಯೋಗದೊಂದಿಗೆ ತಾಲೂಕಿನ ಕೆಸರಹಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಯಿತು.
ಡಾ.ನೆಹನಾಜ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಕಂಡು ಬರುವ ಮಾನಸಿಕ ಖಿನ್ನತೆ, ಮುಟ್ಟಿನ ಸಮಸ್ಯೆ, ದೈಹಿಕ ಬೆಳವಣಿಗೆಯ ಬದಲಾವಣೆಗಳ ಸಮಸ್ಯೆಗಳು, ಮತ್ತು ನೈರ್ಮಲ್ಯ ಜಾಗೃತಿ ಬಗ್ಗೆ ಅರಿವು ಮೂಡಿಸಿದರು. ಹಾಗೂ ವಿದ್ಯಾರ್ಥಿಗಳಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬೇಟಿ ಕೊಡುವುದರ ಮೂಲಕ ಅರಿವು ಮೂಡಿಸಿದರು.
ಕವಿತಾ ಸಮುದಾಯ ಆರೋಗ್ಯ ಅಧಿಕಾರಿ ಮಾತನಾಡಿ ಈಗಾಗಲೇ ಕಂಡುಬರುವ ಮಲೇರಿಯಾ, ಭೇದಿ ಹಾಗೂ ವಾಂತಿಗಳ ಬಗ್ಗೆ ಸೂಚನೆ ನೀಡಿದರು. ಮತ್ತು ನಮ್ಮ ಸುತ್ತಮುತ್ತ ಇರುವ ಪ್ರದೇಶವನ್ನು ಸ್ವಚ್ಛವಾಗಿ ಇಡಬೇಕು ಮತ್ತು ಮಲೇರಿಯಾ, ಚಿಕ್ಕನ್ ಗುನ್ಯಾ ಬರುವುದಕ್ಕೆ ಕಾರಣಗಳನ್ನು ತಿಳಿಸಿದರು.
ಕೆ ಎಚ್ ಪಿ ಟಿ ಸಮುದಾಯ ಸಂಯೋಜಕರಾದ ಹನುಮಂತಪ್ಪ ಮಾತನಾಡಿ ಕ್ಷಯವನ್ನು ಮುಕ್ತ ಮಾಡುವಲ್ಲಿ ಶಿಕ್ಷಕರು ಸಹಾಯ ಮಾಡುವುದರಿಂದ ವಿದ್ಯಾರ್ಥಿಗಳು ಹಾಗೂ ಸಮುದಾಯ ಸಂಘದವರು ಹಾಗೂ ಸಾರ್ವಜನಿಕರ ಸಹಕಾರ ಮುಖ್ಯವಾಗಿರುತ್ತದೆ ಯಾಕೆಂದರೆ ಸಂಶಯಾಸ್ಪದ ವ್ಯಕ್ತಿಗಳಲ್ಲಿ ಕಂಡುಬರುವ ಕ್ಷಯ ಲಕ್ಷಣಗಳು ಇದ್ದರೆ ಚಿಕಿತ್ಸೆ ಪಡೆಯದೇ ಇದ್ದರೆ ಆ ವ್ಯಕ್ತಿ ವರ್ಷದಲ್ಲಿ ಸುಮಾರು 15 ರಿಂದ 20 ಜನರಿಗೆ ಕ್ಷಯವನ್ನು ಹರಡಿಸುತ್ತಾನೆ. ಲಕ್ಷಣಗಳಿರುವ ವ್ಯಕ್ತಿಗಳು ಕಪ ಪರೀಕ್ಷೆ ಮಾಡಿಸದೆ ಇದ್ದರೆ ಸಾಯುವಂತ ಪರಿಸ್ಥಿತಿಗಳು ಬರುತ್ತವೆ. ಮತ್ತು ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ಮುಕ್ತರಾಗಬೇಕು. ಯಾಕೆಂದರೆ ಹಲವಾರು ರೀತಿಯ ದುಶ್ಚಟಗಳನ್ನು ಮಾಡುವುದರಿಂದ ಕ್ಯಾನ್ಸರ್, ಕ್ಷಯ ರೋಗ ಹಾಗೂ ಇನ್ನಿತರ ಖಾಯಿಲೆಗಳು ಬರುತ್ತವೆ ಎಂದು ತಿಳಿಸಿದರು.
ಮತ್ತು ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕಿಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.