Breaking News

ಅಪರಾಧ ತಡೆಗೆ ರಾಜ್ಯಾದ್ಯಂತ 5 ಲಕ್ಷ ಕ್ಯಾಮೆರಾಗಳ ಅಳವಡಿಕೆ: ಗೃಹಸಚಿವ ಪರಮೇಶ್ವರ್

Installation of 5 lakh cameras across the state to prevent crime: Home Minister Parameshwar

ಜಾಹೀರಾತು

ಬೆಳಗಾವಿ ಸುವರ್ಣಸೌಧ,ಡಿ.12(ಕರ್ನಾಟಕ ವಾರ್ತೆ):
ರಾಜ್ಯಾದ್ಯಂತ ಅಪರಾಧ ಪ್ರಕರಣ ಗಳ ನಿಯಂತ್ರಣಕ್ಕೆ ವಿವಿಧ ಸ್ಥಳಗಳಲ್ಲಿ 5 ಲಕ್ಷ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಸ್. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಇವುಗಳ ನಿಯಂತ್ರಣಕ್ಕೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ಮಹಿಳೆಯರು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ದೌರ್ಜನ್ಯ ನಡೆಯುವುದನ್ನು ತಡೆಯಲು ಸೇಫ್ಟಿ ಐಲ್ಯಾಂಡ್ ಗಳನ್ನು ರಚಿಸಲಾಗಿದೆ. ಮಹಿಳೆಯರು ದೂರು ನೀಡಲು ಅನುಕೂಲವಾಗುವಂತೆ ಸಹಾಯವಾಣಿ ಸಂಖ್ಯೆ 1091 ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ದೂರು ನೀಡಲು ಸಹಾಯವಾಣಿ 1098 ಮೂಲಕ 24*7 ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ನ್ಯಾಯಾಲಯಗಳಲ್ಲಿ ಈಗಾಗಲೇ ದಾಖಲಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಪೋಕ್ಸೋ ಪ್ರಕರಣಗಳ ವಿಚಾರಣೆ ಬೇಗ ಇತ್ಯರ್ಥವಾಗುವ ಕುರಿತಂತೆ ಹೆಚ್ಚು ಗಮನಹರಿಸಲಾಗುವುದು ಎಂದರು.

About Mallikarjun

Check Also

ಡೆಂಟಾ ವಾಟರ್ ಸಿಎಸ್‌ಆರ್‍‌ಫಂಡ್‌ನಿಂದ ನಿರ್ಮಿತ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವಚಲುವರಾಯಸ್ವಾಮಿ

Minister Chaluvarayaswamy inaugurates school building constructed with Denta Waters CSR Fund ಕೃಷ್ಣರಾಜಪೇಟೆ , ಜೂನ್‌ 24 …

Leave a Reply

Your email address will not be published. Required fields are marked *