Dam of Muniraba. Petition to stop rampant speed gambling near NH-13 road canal
ಕೊಪ್ಪಳ :ಸುಮಾರು ವರ್ಷಗಳಿಂದ ಕೊಪ್ಪಳ ತಾಲೂಕು ಮುನಿರಾಬಾದ ಡ್ಯಾಂ. ಗ್ರಾಮದ ಜನನೀಬಿಡ ಪ್ರದೇಶ, ಕಾಲುವೆ ಪಕ್ಕದಲ್ಲಿ ಸುರುಭಿ ರಿಕ್ರೀಯೆಷೆನ್ ಸ್ಪೋರ್ಟ್ಸ್ ಎಂಬ ಹೆಸರಿನ ಸಂಸ್ಥೆ ಮಾಡಿಕೊಂಡು ಅದರಡಿ ಬಹಳಷ್ಟು ರೂಮ್‌ಗಳನ್ನು ಹಾಕಿಕೊಂಡು ಐಷಾರಾಮಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾರೆ. ಇದೊಂದು ಹೈಟೆಕ್ ಇಸ್ಪೀಟ್ ಜೂಜಾಟವಾಗಿದ್ದು, ಕೊಪ್ಪಳ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡಲೇ ಇದನ್ನು ಬಂದ್ ಮಾಡಬೇಕು. ಈಗಾಗಲೇ ಇದರ ಕುರಿತು ಮಾನ್ಯ ತಹಸೀಲ್ದಾರ ಕೊಪ್ಪಳ ಇವರಿಗೆ ದೂರು ನೀಡಿದ್ದರೂ ಕೂಡ ಅದನ್ನು ಬಂದ್ ಮಾಡಿಸಲು ತಾಲೂಕು ಆಡಳಿತ ವಿಫಲವಾಗಿದೆ.
ಆದ್ದರಿಂದ ಜಿಲ್ಲಾಡಳಿತ ಕೂಡಲೇ ಈ ದೂರನ್ನು ಗಂಭೀರವಾಗಿ ತೆಗೆದುಕೊಂಡು ಮುನಿರಬಾದ ಡ್ಯಾಂ.ನಲ್ಲಿ ನಡೆಯುತ್ತಿರುವ ಹೈಟೆಕ್ ಇಸ್ಪೀಟ್ ಜೂಜಾಟವನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆವತಿಯಿAದ ಜಿಲ್ಲಾಡಳಿತ ಕಛೇರಿ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಹಿರಿಯ ದಲಿತ ಮುಖಂಡರು ರಾಮಣ್ಣ ಕಂದಾರಿಪ್ರಕಟಣೆ ಮೂಲಕ ತಿಳಿಸಿದ್ದಾರೆ.