We got freedom from the sacrifices of nobles: Biradar Patil,,,,
ಕೊಪ್ಪಳ : ಕುಕನೂರು ತಾಲೂಕ ಪಂಚಾಯತಿ ಕಛೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್ 78 ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ಯ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿದರು.
ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಮಹನೀಯರ ತ್ಯಾಗ ಬಲಿದಾನ, ಮಾಡಿ ನಿಸ್ವಾರ್ಥದಿಂದ ಹೋರಾಡಿದ ಫಲವಾಗಿ ನಮಗೆ ಅಗಷ್ಟ15ರ 1947 ರಂದು ಸ್ವಾತಂತ್ರ್ಯ ಬಂದಿದೆ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆಶಯದಂತೆ ಭಾರತ ಹಳ್ಳಿಗಳ ದೇಶ ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ ಅದಕ್ಕಾಗಿ ದೇಶದ ಪ್ರಗತಿಯಲ್ಲಿ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳ ಪಾತ್ರ ಬಹಳಷ್ಟು ಇದೆ.
ಅದಕ್ಕಾಗಿ ಇಗಾಗಲೇ ಸರ್ಕಾರದ ಸಾಕಷ್ಟು ಯೋಜನೆಗಳ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಮಾಡಲಾಗುತ್ತಿದೆ.
ಗ್ರಾಮೀಣ ಗ್ರಂಥಾಲಯಗಳು,
ನರೇಗಾ ಯೋಜನೆ,ಸ್ವಚ್ಚ ಭಾರತ ಯೋಜನೆ, ಸರ್ಕಾರದ ಗ್ಯಾರಂಟಿ ಯೋಜನೆಗಳು
ಹೀಗೆ ಹಲವಾರು ಯೋಜನೆಗಳ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಮಾಡಲು ಗ್ರಾಮ ಪಂಚಾಯತಿಗಳು ಸಹಕಾರಿಯಾಗುತ್ತಿವೆ ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಅಗಷ್ಟ 15 ರಂದು ಸಿಕ್ಕರೆ, ಹೈದ್ರಾಬಾದ್ (ಕಲ್ಯಾಣ ಕರ್ನಾಟಕದ) ಪ್ರದೇಶದವರಾದ ನಮಗೆ ಸ್ವಾತಂತ್ರ್ಯ ಒಂದು ವರ್ಷ ತಡವಾಗಿ ಸಿಕ್ಕಿದೆ, ಅಂದರೆ ಇಲ್ಲಿಯೂ ಸಹ ನಮ್ಮಗೆ ಅನ್ಯಾಯ, ಇತಿಹಾಸದುದ್ದಕ್ಕೂ ನಮ್ಮ ಪ್ರದೇಶವನ್ನು ರಜಾಕರು, ನಿಜಾಮರು, ಬ್ರಿಟೀಷರು ಹೀಗೆ ಹಲವರಿಂದ ಈ ಪ್ರದೇಶ ಆಳ್ವಿಕೆಗೊಳಪ್ಪಟ್ಟು ಹಿಂದೂಳಿದ ಪ್ರದೇಶವೆಂದು ಹಣೆಪಟ್ಟಿ ಹೊಂದಿದೆ.
ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಭಾಗದಲ್ಲಿಯ ಘೋಟಾ ಗ್ರಾಮದಲ್ಲಿ ಜಲಿಯನ್ ವಾಲಾಭಾಗ್ ಹತ್ಯಾಕಂಡಾದ ರೀತಿಯಲ್ಲಿ ಸುಮಾರು 800 ಸ್ವಾತಂತ್ರ್ಯ ಹೋರಾಟಗಾರರ ಬಬ್ರರ ಹತ್ಯೆಯಾಯಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತ ಮಾಡದೇ ಮಹಾತ್ಮ ಗಾಂಧಿಜಿಯವರು, ಅಂಬೇಡ್ಕರ್ ಹಾಗೂ ದೇಶಕ್ಕಾಗಿ ಹೋರಾಡಿದ ಮಹನೀಯರ ಆದರ್ಶಗಳನ್ನು ಹಾಗೂ ಸಂವೀದಾನದ ಆಶಯಗಳನ್ನು ನಾವು ಪಾಲಿಸಬೇಕು ಎಂದರು.
ಸ್ಥಳದಲ್ಲಿ ತಾಲೂಕ ಪಂಚಾಯತಿಯ ತ್ರೈಮಾಸಿ ಕೆಡಿಪಿಯ ಸಭೆಯ ನಾಮ ನಿರ್ದೇಶನ ಸದಸ್ಯರಾದ ವೀರನಗೌಡ ಮಾಲಿಪಾಟೀಲ್, ಸಿದ್ಲಿಂಗಪ್ಪ, ಸಿದ್ದನಗೌಡ, ವಿರೂಪಾಕ್ಷಪ್ಪ ಎಚ್ ದೊಡ್ಮನಿ, ಶರಣಪ್ಪ ಗೌಡ, ವೀರಪ್ಪಗೌಡ ಜಮಖಾನ್, ಶರಣಮ್ಮ ಸಂತೋಷ ಸೇರಿದಂತೆ ತಾಲೂಕ ಪಂಚಾಯತಿಯ ಯೋಜನಾ ನಿರ್ದೇಶಕರು ಹಾಗೂ ಸಹಾಯಕ ಲೆಕ್ಕಾಧಿಕಾರಿಗಳಾದ ಆನಂದ ಗರೂರ, ತಾಪಂ ಗಿರಿಧರ್ ಜೋಷಿ, ತಾಪಂ ಸಿಬ್ಬಂದಿಗಳು ನರೇಗಾ ಸಿಬ್ಬಂದಿಗಳು ಹಾಜರಿದ್ದರು.